ಪಾವಗಡ: ಮೆಗಾ ಫ್ಯಾನ್ಸ್ ಪ್ರತಿವರ್ಷದಂತೆ ಈ ವರ್ಷವೂ ಸಹ ಜನಸೇವೆ ಮಾಡುವ ಮೂಲಕ ಬಡ ಕುಟುಂಬದ ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರ, ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕಾರ್ಯದ ಡಿ ಗ್ರೂಪ್ ಮಹಿಳೆಯರಿಗೆ ಸೀರೆ, ಬಡ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಹೆಚ್ಚಿಸಿಕೊಳ್ಳಲು ಲ್ಯಾಪ್ ಟಾಪ್ ವಿತರಿಸುವುದರ ಮೂಲಕ ಅದ್ಭುತವಾದಂತಹ ಕಾರ್ಯವನ್ನು ಮೆಗಾ ಫ್ಯಾನ್ಸ್ ಮಾಡಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಮಂಜುನಾಥ್ ತಿಳಿಸಿದರು.
ಮೆಗಾ ಫ್ಯಾನ್ಸ್, ಹೆಲ್ಪ್ ಸೊಸೈಟಿ, ಸೇವಾ ಟ್ರಸ್ಟ್ ವತಿಯಿಂದ ಗುರುವಾರ ಪಟ್ಟಣದ ಅಕ್ಷಯ ಬ್ಲೂ ಜೇಮ್ ಶಾಲಾ ಆವರಣದಲ್ಲಿ ಮೆಗಾ ಫ್ಯಾಮಿಲಿ ರಾಮ್ ಚರಣ್ ತೇಜ್ ರವರ 40ನೇ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಮಾತನಾಡಿದರು.
ಕೇವಲ ಶ್ರೀಮಂತಿಕೆ ಒಂದಿದ್ದರೆ ಸಾಲದು, ಬಡ ಜನತೆಯ ಸೇವೆ ಮಾಡುವ ಹೃದಯವಂತಿಕೆ ಇರಬೇಕು, ಇಂತಹ ಹೃದಯ ಶ್ರೀಮಂತ ಹೊಂದಿರುವ ರಿಯಲ್ ಹೀರೋ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರದ್ದು ಎಂದು ಮತ್ತೊರ್ವ ಸಮಾಜ ಸೇವಕರು ಚಲನ ಚಿತ್ರ ನಟ, ನಿರ್ಮಾಪಕ ಬಜಾಜ್ ಶ್ರೀನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುಂಡ್ಲಹಳ್ಳಿಯ ಬಡ ಮಹಿಳೆಯಾದ 13 ವರ್ಷದ ಸಾತ್ವಿಕ್ ವಿಶೇಷಚೇತನ ಮಗನೊಂದಿಗೆ ಜೀವಿಸುತ್ತಿರುವ ಸಾಕಮ್ಮ ಹಾಗೂ ರೆಡ್ಡಿ ಕಾಲೋನಿ ವಾಸಿ ಲಕ್ಷ್ಮೀದೇವಿ, ಗುಟ್ಟಹಳ್ಳಿ ವಾಸಿ ಅರುಣಮ್ಮ ಎಂಬುವವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಕುಮಾರಸ್ವಾಮಿ ಬಡಾವಣೆಯ ಪ್ರತಿಭಾವಂತ ಬಡ ವಿದ್ಯಾರ್ಥಿ ಜಿತ್ತು, ಟೀಚರ್ ಕಾಲೋನಿಯ ಗಣೇಶ್, ಪಳವಳ್ಳಿ ಪ್ರಸನ್ನ ಎಂಬುವವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಪಾವಗಡ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕಾರ್ಯದ ಡಿ ಗ್ರೂಪ್ ಮಹಿಳಾ ನೌಕರರಿಗೆ ಸೀರೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸಂದ್ಯಾ, ಪಶು ಆಸ್ಪತ್ರೆಯ ರಾಮಾಂಜಿ, ಬ್ಲಡ್ ಶಶಿಕಲಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4