ರಾಜಕೀಯ ವಿದ್ಯಮಾನಗಳ ಬಗ್ಗೆ ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಇದೀಗ ಸಿದ್ದರಾಮಯ್ಯ ಭವಿಷ್ಯದ ಬಗ್ಗೆ ಮತ್ತು ದೇಶದಲ್ಲಿ ಆಗಬಹುದಾದ ಪ್ರಕೃತಿ ವಿನಾಶಗಳ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬರಬಹುದು ಎಂಬ ಆತಂಕದ ನಡುವೆಯೇ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಆಕಾಶದಿಂದ ದೊಡ್ಡ ತೊಂದರೆಯಾಗಲಿದೆ. ಯುದ್ಧದಿಂದ ತೊಂದರೆಯಾಗಬಹುದು. ಮಳೆಯಿಂದಾಗಿ ಇನ್ನೂ ಅನಾಹುತವಾಗಬಹುದು. ಒಂದು ಆಘಾತಕಾರಿ ತೊಂದರೆಯಾಗಬಹುದು. ಅದು ರಾಜನ ಮೇಲೆ ಪರಿಣಾಮ ಬೀರುತ್ತದೆ.
ಕೋರ್ಟ್ ನಲ್ಲಿದೆ. ಈಗ ಇದರ ಬಗ್ಗೆ ಹೇಳುವುದು ಬೇಡ. ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಅಭಿಮನ್ಯುವಿನ ಬಿಲ್ಲನ್ನು ಕರ್ಣನ ಕೈಯಲ್ಲಿ ಮೋಸದಿಂದ ದಾರ ಕಟ್ ಮಾಡಿಸ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲ ದುರ್ಯೋಧನ ಗೆಲ್ತಾನೆ ಎಂದು ಹೇಳಬಲ್ಲೆ. ರಾಜ್ಯ ಮತ್ತು ಕೇಂದ್ರದಲ್ಲಿ ಇದೇ ಆಗುವುದು ಎಂದಿದ್ದಾರೆ.
ಕೋಡಿ ಶ್ರೀಗಳು ಹೇಳಿದ ಭವಿಷ್ಯ ಅನೇಕ ಬಾರಿ ನಿಜವಾಗಿದ್ದು ಇದೆ. ಹೀಗಾಗಿ ಅವರು ಈಗ ಅಧಿಕಾರ ಬದಲಾವಣೆ ಹೇಳಿರುವ ಮಾತುಗಳು ನಿಜವಾಗುತ್ತದೆಯೇ ಎಂದು ನೋಡಬೇಕಿದೆ. ಇನ್ನು, ಯಾವುದೋ ಒಂದು ಅನಾಹುತದಿಂದಾಗಿ ಸ್ಥಾನ ಪಲ್ಲಟವಾಗಬಹುದು ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q