ಮೈಸೂರು: ಮದ್ಯ ಸೇವಿಸಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ಕಾಟ ತಾಳಲಾರದೆ ಹೆತ್ತ ತಾಯಿಯೇ ಮಗನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯ ತಾವರೆಕಟ್ಟೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. 45 ವರ್ಷದ ರಮೇಶ್ ಕೊಲೆಯಾದ ವ್ಯಕ್ತಿ.
ಮೃತ ರಮೇಶ್ ಕುಡಿತದ ವ್ಯಸನಕ್ಕೆ ತುತ್ತಾಗಿದ್ದು, ಪ್ರತಿದಿನ ಮದ್ಯಕ್ಕಾಗಿ ತಾಯಿಯ ಬಳಿ ಹಣ ಕೇಳಿ ಪೀಡಿಸುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನವೂ ಸಹ ಮದ್ಯಕ್ಕಾಗಿ ಹಣ ಕೇಳಿ ತಾಯಿಯೊಂದಿಗೆ ಗಲಾಟೆ ಮಾಡಿದ್ದಾನೆ. ಮಗನ ಮದ್ಯದ ಚಟ ಮತ್ತು ನಿರಂತರ ಕಿರುಕುಳದಿಂದ ರೋಸಿಹೋಗಿದ್ದ ಮಂಜುಳಾ, ರೋಷಗೊಂಡು ತಾವರೆಕಟ್ಟೆ ಬಳಿ ಕಲ್ಲಿನಿಂದ ಮಗನ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಗನ ಹತ್ಯೆ ಮಾಡಿದ ಆರೋಪದ ಮೇಲೆ ತಾಯಿ ಮಂಜುಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


