ನಗ್ನ ಫೋಟೋ, ವಿಡಿಯೋ ಮೂಲಕ ಕನ್ನಡ ಚಿತ್ರನಟಿಗೆ ಬ್ಲಾಕ್ ಮೇಲ್ ಮಾಡಿದ್ದ ಮೇಕಪ್ ಮ್ಯಾನ್ ಪೊಲೀಸರ ಅತಿಥಿಯಾಗಿದ್ದಾನೆ.
ಕನ್ನಡದ ಚಿತ್ರನಟಿಯೊಬ್ಬರ ನಗ್ನ ವಿಡಿಯೋ ಹಾಗೂ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ ಮಹಾಂತೇಶ ಎಂಬ ಮೇಕಪ್ ಮ್ಯಾನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ನಗ್ನ ಫೋಟೋ, ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆಯೊಡ್ಡಿ 30 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ.
ಭುವನೇಶ್ವರ ನಗರದ ನಿವಾಸಿ ಮಹಾಂತೇಶ್ ಸಂತ್ರಸ್ತ ನಟಿಯ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಈತ ಆ ನಟಿಯ ಸಂಬಂಧಿಕ ಎಂಬ ಮಾಹಿತಿ ಲಭ್ಯವಾಗಿದೆ.
“ನಿನ್ನ ನಗ್ನ ಫೋಟೋ, ವಿಡಿಯೋ ನನ್ನ ಬಳಿ ಇದೆ , 30 ಲಕ್ಷ ಕೊಡದೇ ಇದ್ದಲ್ಲಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ” ಎಂದು ಈಗ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz