ಒಗ್ಗರಣೆಗೆ ಬಳಸುವ ಕರಿಬೇವಿನ ಸೊಪ್ಪನ್ನು ಅಡುಗೆಗೆ ಹೊರತುಪಡಿಸಿ ಕೂದಲಿನ ಆರೋಗ್ಯಕ್ಕೂ ಬಳಸುವುದು ಸಾಮಾನ್ಯ. ವಿಶಿಷ್ಟವಾದ ವಾಸನೆ ಮತ್ತು ಕಟು ರುಚಿಯ ಹೊರತಾಗಿ ಕರಿಬೇವಿನ ಎಲೆಗಳು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಬಿ 2, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕರಿಬೇವಿನ ಎಲೆಗಳು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಹೊಂದಿದೆ.
ಹೆಚ್ಚು ವಾಹನ ಚಾಲನೆ ಮಾಡುವವರು ಅಥವಾ ಡೆಸ್ಕ್ ಕೆಲಸ ಮಾಡುವವರು ಖಂಡಿತವಾಗಿ ಕರಿಬೇವಿನ ಸೊಪ್ಪನ್ನು ಸೇವಿಸಬೇಕು ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಯಾಕೆಂದರೆ ಈ ಜನರು ಭುಜ ಮತ್ತು ಬೆನ್ನುನೋವಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಕರಿಬೇವಿನ ಎಲೆಗಳ ಸೇವನೆಯು ಸರ್ವಿಕಲ್ ಸ್ಪಾಂಡಿಲೋಸಿಸ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಕರಿಬೇವಿನ ಎಲೆಗಳು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಕರಿಬೇವಿನ ಸಾರವು ಮೆದುಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕಗಳಾದ ಗ್ಲುಟಾಥಿಯೋನ್ ಪೆರಾಕ್ಸಿಡೇಸ್ , ಸೂಪರ್‌ಆಕ್ಸೈಡ್ ಡಿಸ್ಮುಟೇಸ್ ಮತ್ತು ಗ್ಲುಟಾಥಿಯೋನ್ ರಿಡಕ್ಟೇಸ್ ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ನಮ್ಮ ಮೆದುಳನ್ನು ಆಕ್ಸಿಡೇಟಿವ್ ಹಾನಿ ಮತ್ತು ಆಲ್ಝೈಮರ್‌ನ ಕಾಯಿಲೆಯಂತಹ ನ್ಯೂರೋ ಡಿಜೆನೆರೆಟಿವ್ ಪರಿಸ್ಥಿತಿಗಳಿಂದ ರಕ್ಷಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ ಎಂದೂ ಹೇಳಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಲಘು ಉಪಹಾರದ ನಂತರ ದಿನಕ್ಕೆ ಎರಡು ಬಾರಿ ಕರಿಬೇವಿನ ಕಷಾಯವನ್ನು ಕುಡಿಯುವುದು ಆರೋಗ್ಯಕರ ಎಂದು ತಜ್ಞರು ಹೇಳುತ್ತಾರೆ. 15 ರಿಂದ 20 ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಎರಡು ಲೋಟ ನೀರಿನಲ್ಲಿ ನೀರು ಅರ್ಧಕ್ಕೆ ಇಳಿಸುವವರೆಗೆ ಕುದಿಸಿ ಸೋಸಿ ತಣ್ಣಗಾಗಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿದರೆ ಉತ್ತಮ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy