nammatumakuru

    Subscribe to Updates

    Get the latest creative news from FooBar about art, design and business.

    What's Hot

    ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ

    April 17, 2026

    ಮಹಿಳೆಯರಿಗೆ ಗುಡ್ ನ್ಯೂಸ್: ವೇತನ ಸಹಿತ ‘ಋತುಚಕ್ರ ರಜೆ’ ಕಟ್ಟುನಿಟ್ಟಿನ ಜಾರಿಗೆ ಹೈಕೋರ್ಟ್ ಮಹತ್ವದ ಆದೇಶ

    April 17, 2026

    ತಿಪಟೂರು: ಇ–ಸ್ವತ್ತು ಮಂಜೂರಿನಲ್ಲಿ ವಿಳಂಬ; ಸಾರ್ವಜನಿಕರ ತೀವ್ರ ಅಸಮಾಧಾನ

    April 17, 2026
    Facebook Twitter Instagram
    ಟ್ರೆಂಡಿಂಗ್
    • ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ
    • ಮಹಿಳೆಯರಿಗೆ ಗುಡ್ ನ್ಯೂಸ್: ವೇತನ ಸಹಿತ ‘ಋತುಚಕ್ರ ರಜೆ’ ಕಟ್ಟುನಿಟ್ಟಿನ ಜಾರಿಗೆ ಹೈಕೋರ್ಟ್ ಮಹತ್ವದ ಆದೇಶ
    • ತಿಪಟೂರು: ಇ–ಸ್ವತ್ತು ಮಂಜೂರಿನಲ್ಲಿ ವಿಳಂಬ; ಸಾರ್ವಜನಿಕರ ತೀವ್ರ ಅಸಮಾಧಾನ
    • ತುಮಕೂರು ಜಿಲ್ಲೆಯಲ್ಲಿ ಕ್ಷಯರೋಗದ (TB) ಭೀತಿ: 682 ಹಳ್ಳಿಗಳ 7 ಲಕ್ಷಕ್ಕೂ ಹೆಚ್ಚು ಜನರಿಗೆ ಅಪಾಯದ ಆತಂಕ
    • ಉಜ್ಜನಿ ಸರ್ಕಾರಿ ಶಾಲೆಗೆ ₹1.50 ಕೋಟಿ ದೇಣಿಗೆ ನೀಡಿದ ದಾನಿ ವೈ.ಎಚ್.ಗೋಪಿ
    • ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಲು ಬೇಸಿಗೆ ಶಿಬಿರಗಳು ಸಹಕಾರಿ: ನ್ಯಾಯಾಧೀಶರಾದ ನೂರುನ್ನೀಸಾ
    • ತುಮಕೂರು ಜಿಲ್ಲೆಯ 109 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಬುಗುಡನಹಳ್ಳಿ ಕೆರೆ ಖಾಲಿ
    • ಯೋಗೀಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳು ದೋಷಿ; ಶಿಕ್ಷೆಯ ಪ್ರಮಾಣ ಇಂದು ಪ್ರಕಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಯಲಸೀಮೆ ಜಿಲ್ಲೆಯ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಬದ್ದ: ಸಚಿವ ಎನ್‌.ಎಸ್‌.ಭೋಸರಾಜು
    ತುಮಕೂರು April 20, 2025

    ಬಯಲಸೀಮೆ ಜಿಲ್ಲೆಯ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಬದ್ದ: ಸಚಿವ ಎನ್‌.ಎಸ್‌.ಭೋಸರಾಜು

    By adminApril 20, 2025No Comments2 Mins Read
    yettinahole

    ತುಮಕೂರು: ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರ ನೀರಿನ ಬವಣೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಏತ್ತಿನಹೊಳೆ, ಕೆ.ಸಿ.ವ್ಯಾಲಿ, ಹೆಚ್‌ ಎನ್‌ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಯಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

    ಗೊರವನಹಳ್ಳಿಯಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿ ಅಂತರ್ಜಲ ಅಭಿವೃದ್ದಿ ಸಲುವಾಗಿ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಗೆ ಗೃಹ ಸಚಿವರಾದ ಪರಮೇಶ್ವರ್‌ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


    Provided by
    Provided by

    ಎತ್ತಿನ ಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 285 ಕೋಟಿ ವೆಚ್ಚದಲ್ಲಿ 62 ಕೆರೆಗಳಿಗೆ ನೀರು ತುಂಬಿಸುವ ಈ ಮಹತ್ವದ ಕಾಮಗಾರಿಗಳಿಂದ ಕೊರಟಗೆರೆ ತಾಲೂಕಿನ ಅಂತರ್ಜಲ ವೃದ್ಧಿಸಲಿದೆ. ಈ ಕೆರೆಗಳಲ್ಲಿ ಸುಮಾರು 826 ಎಂಸಿಎಫ್ಟಿ ನಷ್ಟು ನೀರು ಸಂಗ್ರಹವಾಗುವುದರಿಂದ ತಾಲೂಕಿನ ಕುಡಿಯುವ ನೀರಿನ ಬವಣೆ ಗಣನೀಯವಾಗಿ ಇಳಿಕೆಯಾಗಲಿದೆ. ಇದರಲ್ಲಿ ನಮ್ಮ ಸಣ್ಣ ನೀರಾವರಿ ಇಲಾಖೆಯ 43 ಕೆರೆಗಳು ಸೇರಿವೆ. ಇವುಗಳ ಸಂಗ್ರಹಣಾ ಸಾಮರ್ಥ್ಯ1848.46 ಎಂ.ಸಿ.ಎಫ್ ಟಿ ಇದ್ದು, ಈ ಯೋಜನೆ ಮೂಲಕ ಇವುಗಳಿಗೆ 659.47 ಎಂಸಿಎಫ್ ಟಿ ನಷ್ಟು ನೀರನ್ನು ತುಂಬಿಸುವುದರಿಂದ ಕೊರಟಗೆರೆ ತಾಲೂಕಿನ ರೈತರ ನೆಮ್ಮದಿಯ ಬದುಕಿಗೆ ದಾರಿಯಾಗಲಿದೆ ಎಂದರು.

    ನಮ್ಮ ಸರ್ಕಾರದ ಗುರಿಯಂತೆ, ಎತ್ತಿನಹೊಳೆ ಯೋಜನೆ ಅಡಿ ಈಗಾಗಲೇ ತಿಪಟೂರು ತಾಲೂಕಿನ 105 ಕೆರೆಗಳು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 131 ಕೆರೆಗಳ ನೀರು ತುಂಬಿಸುವ ಕಾಮಗಾರಿಗಳನ್ನು ಅಂತಿಮ ಹಂತಕ್ಕೆ ತಂದು, ಆ ಭಾಗದ ರೈತರು, ಜನರ ಮೊಗದಲ್ಲಿ ನಮ್ಮ ಸರ್ಕಾರ ಮಂದಹಾಸ ಮೂಡಿಸಿದೆ. ಮಧುಗಿರಿ ಗುರುತ್ವಾ ಕಾಲುವೆಯಿಂದ ಮಧುಗಿರಿ ತಾಲೂಕಿನಲ್ಲಿ 45 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೂ ಈ ಎತ್ತಿನ ಯೋಜನೆ ಅಡಿ ತಾಂತ್ರಿಕ, ಆಡಳಿತಾತ್ಮಕ ಅನುಮೋದನೆ ಪಡೆದಿರುವುದಲ್ಲದೇ, ಕಾಮಗಾರಿಗಳೂ ಆರಂಭಿಸಿರುವುದು ಭವಿಷ್ಯದ ನೀರಿನಬವಣೆ ನೀಗಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆಗೆ ಸಾಕ್ಷಿಯಾಗಿದೆ. ಎತ್ತಿನಹೊಳೆ ಯೋಜನೆಯ ಸಮರ್ಪಕ ಅನುಷ್ಠಾನದ ಮೂಲಕ ಬಯಲು ಸೀಮೆಯ 7 ಜಿಲ್ಲೆಗಳ ನೀರಿನ ಬವಣೆಗೆ ಮುಕ್ತಿ ದೊರಕಿಸುವುದಂತೂ ಖಚಿತ. ಮುಖ್ಯವಾಗಿ,ಇದರ ಹೆಚ್ಚಿನ ಲಾಭ ತುಮಕೂರು ಜಿಲ್ಲೆಯ ರೈತರಿಗೂ ಆಗಲಿದೆ. ಈ ಮುಖ್ಯ ಕಾಲುವೆಯ ಉದ್ದ 262 ಕಿ.ಮೀಯಾಗಿದ್ದು, ಇದರಲ್ಲಿ ಸುಮಾರು 159 ಕಿ.ಮೀಯಷ್ಟು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲೇ ಹಾದುಹೋಗುವುದರಿಂದ ಸುತ್ತಮುತ್ತ ರೈತರ ಕೃಷಿ ಚಟುವಟಿಕೆಗಳಿಗೂ, ಜನರ ಕುಡಿಯುವ ನೀರಿಗೂ  ಪರಿಹಾರ ದೊರೆಯಲಿದೆ ಎನ್ನುವುದು ಖುಷಿಯ ವಿಚಾರ ಎಂದರು.

    ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರು ನೀರಿನ ಬವಣೆಯಿಂದ ತತ್ತರಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಈಗಾಗಲೇ ಕೆಸಿ ವ್ಯಾಲಿ, ಹೆಚ್‌ ನ್‌ ವ್ಯಾಲಿಯಂತಹ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತುಮಕೂರು ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲವನ್ನು ಅಭಿವೃದ್ದಿಗೊಳಿಸಿ, ವ್ಯವಸಾಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ತುಮಕೂರು ಜಿಲ್ಲೆಯಲ್ಲಿ ಕ್ಷಯರೋಗದ (TB) ಭೀತಿ: 682 ಹಳ್ಳಿಗಳ 7 ಲಕ್ಷಕ್ಕೂ ಹೆಚ್ಚು ಜನರಿಗೆ ಅಪಾಯದ ಆತಂಕ

    April 17, 2026

    ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಲು ಬೇಸಿಗೆ ಶಿಬಿರಗಳು ಸಹಕಾರಿ: ನ್ಯಾಯಾಧೀಶರಾದ ನೂರುನ್ನೀಸಾ

    April 17, 2026

    ತುಮಕೂರು ಜಿಲ್ಲೆಯ 109 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಬುಗುಡನಹಳ್ಳಿ ಕೆರೆ ಖಾಲಿ

    April 17, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ

    April 17, 2026

    ಬೆಂಗಳೂರು: ಧಾರವಾಡ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು,…

    ಮಹಿಳೆಯರಿಗೆ ಗುಡ್ ನ್ಯೂಸ್: ವೇತನ ಸಹಿತ ‘ಋತುಚಕ್ರ ರಜೆ’ ಕಟ್ಟುನಿಟ್ಟಿನ ಜಾರಿಗೆ ಹೈಕೋರ್ಟ್ ಮಹತ್ವದ ಆದೇಶ

    April 17, 2026

    ತಿಪಟೂರು: ಇ–ಸ್ವತ್ತು ಮಂಜೂರಿನಲ್ಲಿ ವಿಳಂಬ; ಸಾರ್ವಜನಿಕರ ತೀವ್ರ ಅಸಮಾಧಾನ

    April 17, 2026

    ತುಮಕೂರು ಜಿಲ್ಲೆಯಲ್ಲಿ ಕ್ಷಯರೋಗದ (TB) ಭೀತಿ: 682 ಹಳ್ಳಿಗಳ 7 ಲಕ್ಷಕ್ಕೂ ಹೆಚ್ಚು ಜನರಿಗೆ ಅಪಾಯದ ಆತಂಕ

    April 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.