ಹೈದರಾಬಾದ್: ಇವಿಎಂ ಮತಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ.
75ನೇ ಸಂವಿಧಾನ ದಿನಾಚಾರಣೆಯ ಅಂಗವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ರಾಷ್ಟ್ರ ಮತ್ತು ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಬ್ಯಾಲೆಟ್ ಪೆಪರ್ಗಳನ್ನು ಬಳಸುವಂತೆ ಒತ್ತಾಯಿಸಿದ್ದಾರೆ.
ನಮ್ಮ ಸಾರ್ವಭೌಮ, ಸಮಾಜವಾದಿ, ಜ್ಯಾತ್ಯತೀತ, ಪ್ರಜಾಸತ್ತಾತ್ಮಾಕ ಗಣರಾಜ್ಯವು ನಮಗೆ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಖಾತರಿಪಡಿಸುತ್ತದೆ. ನಾವು 75ನೇ ಸಂವಿಧಾನ ದಿನವನ್ನು ಆಚರಿಸುತ್ತಿರುವಾಗ, ಆದರ ಮಹತ್ವವನ್ನು ಪ್ರತಿಬಿಂಬಿಸೋಣ ಮತ್ತು ಅದರ ಮಾರ್ಗದರ್ಶಿ ತತ್ವಗಳಿಗೆ ನಮ್ಮ ಅಚಲ ಬದ್ಧತೆ ಪುನರುಚ್ಚರಿಸೋಣ ಎಂದಿದ್ದಾರೆ.
ಪ್ರಜಾಪ್ರಭುತ್ವದ ಮೂಲಧಾರವೆಂದರೆ ಸಾರ್ವಜನಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು. ಇವಿಎಂ ಮತ ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ರಾಷ್ಟ್ರದ್ಯಂತ ಇವಿಎಂಗಳ ಸತ್ಯಾಸತ್ಯೆಯ ಪ್ರಶ್ನೆ ಎದ್ದಿದೆ. ಮತ್ತು ಪ್ರಪಂಚಾದದ್ಯಾಂತ ಬಹುಪಾಲು ದೇಶಗಳಲ್ಲಿ ಆಚರಣೆಯಲ್ಲಿರುವಂತೆ ಬ್ಯಾಲೆಟ್ ಪೇಪರ್ ಮತದಾನಕ್ಕೆ ನಾವು ಏಕೆ ಮಂದುವರೆಯಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296