ಸರ್ಕಾರ ಮತ್ತೆ ಜನರಿಗೆ ಬೆಲೆಯೇರಿಕೆ ಶಾಕ್ ನೀಡಿದೆ. ಪೆಟ್ರೋಲಿಯಂ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಹೊಸ ದರ ಜಾರಿಯಾಗಲಿದೆ.
ಸತತ ಎರಡನೇ ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ (Petrol Diesel Price Hike) ಕಂಡಿದೆ. ಮಂಗಳವಾರ ಡೀಸೆಲ್ 0.79 ಪೈಸೆ, ಪೆಟ್ರೋಲ್ 0.84 ಪೈಸೆ ಹೆಚ್ಚಳ ಆಗಿದ್ರೆ, ಬುಧವಾರ ಮತ್ತೆ ಪೆಟ್ರೋಲ್ ಬೆಲೆ 84 ಪೈಸೆ, ಡೀಸೆಲ್ ಬೆಲೆ 79 ಪೈಸೆ ಮತ್ತೆ ಏರಿಕೆಯಾಗಿದೆ.
ಒಟ್ಟಿನಲ್ಲಿ ಎರಡು ದಿನದಲ್ಲಿ ಪೆಟ್ರೋಲ್ ಬೆಲೆ 1.68, ಡೀಸೆಲ್ ಬೆಲೆ 1.58 ಕ್ಕೆ ಏರಿಕೆಯಾದಂತಾಗಿದೆ. ಬುಧವಾರದಿಂದ ಪೆಟ್ರೋಲ್ ದರ (Petrol Price) 102.26, ಡೀಸೆಲ್ 86.59 ರೂಪಾಯಿ, ಹಾಗೂ ಸ್ಪೀಡ್ ಪೆಟ್ರೋಲ್ ಹೊಸ ದರ 106.67, ಗ್ರೀನ್ ಡೀಸೆಲ್ ದರ 90.08 ರೂ. ಇರಲಿದೆ. ನಿರಂತರವಾಗಿ ಏರಿಕೆಯಾಗ್ತಿರುವ ಇಂಧನ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅಗತ್ಯವಸ್ತುಗಳ ಬೆಲೆಯೂ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5