nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ

    April 21, 2026

    ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ

    April 21, 2026

    ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!

    April 21, 2026
    Facebook Twitter Instagram
    ಟ್ರೆಂಡಿಂಗ್
    • ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ
    • ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ
    • ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!
    • ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ
    • ಬಸವಣ್ಣನವರ ವಿಚಾರಧಾರೆ ಸಂವಿಧಾನದಲ್ಲಿ ಅಡಕ: ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ
    • ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ, ಮಾನವೀಯತೆಯ ಸಂದೇಶವಿದೆ: ಡಾ.ಜಿ.ಪರಮೇಶ್ವರ
    • ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್
    • ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ: ಮೇ 10 ಅರ್ಜಿ ಸಲ್ಲಿಸಲು ಕೊನೆಯ ದಿನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪೌರ ಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಲು ಕ್ರಮ
    ರಾಜ್ಯ ಸುದ್ದಿ December 29, 2022

    ಪೌರ ಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಲು ಕ್ರಮ

    By adminDecember 29, 2022No Comments2 Mins Read
    poera karmika

    ರಾಜ್ಯದಲ್ಲಿ 11133 ಪೌರ ಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಬೆಳಗಾವಿಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.

    ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆ : ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆಯನ್ನು ಅವರ ಆರೋಗ್ಯ ಹಿತರಕ್ಷಣೆಗೆ ನೀಡಲಾಯಿತು. ಪೌರಕಾರ್ಮಿಕರ ಹಿತರಕ್ಷಣೆಗಾಗಿ ಕಾನೂನನ್ನು ಬದಲಾಯಿಸಿ, ಈ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಲಾಗಿದೆ. ಅವರ ಗೌರವಯುತ ಜೀವನ ನಡೆಸುವ ಸಲುವಾಗಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.


    Provided by
    Provided by

    ಈ ಜಿಲ್ಲೆಯಲ್ಲಿ 309 ಕ್ಲೀನರ್ ಗಳನ್ನು, 1437 ಲೋಡರ್ಸ್ ಗಳನ್ನು ಖಾಯಂಗೊಳಿಸಲಾಗಿದೆ. ಇದೇ ರೀತಿ ಉಳಿದವರನ್ನು ನೇಮಕಾತಿ ಪ್ರಕ್ರಿಯೆ ಕೈಕೊಳ್ಳಲಾಗುವುದು. ಅಲ್ಲಿಯವರೆಗೆ ಅವರ ಸೇವಾದರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ತೀರ್ಮಾನ ಸರ್ಕಾರ ಮಾಡಿದೆ ಎಂದರು.

    ಪೌರ ಕಾರ್ಮಿಕರಲ್ಲ, ಪೌರ ನೌಕರರು: ಇಂತಹ ವಿಷಯದಲ್ಲಿಯೂ ರಾಜಕಾರಣ ಮಾಡಲಾಗುತ್ತದೆ. ನ್ಯಾಯ ಕೊಡುತ್ತಿರುವವರ ಮೇಲೆ ನಂಬಿಕೆಯಿಟ್ಟು ನಡೆದರೆ ಒಳ್ಳೆಯದಾಗುತ್ತದೆ.ಇನ್ನು ಮುಂದೆ ಪೌರ ಕಾರ್ಮಿಕರು ಎನ್ನದೇ , ಸರ್ಕಾರಿ ಪೌರ ನೌಕರರು ಎಂದು ಕರೆಯಲು ತೀರ್ಮಾನಿಸಲಾಗಿದೆ. ಈ ಹೆಸರು ನಿಮಗೆ ಸ್ವಾಭಿಮಾನ, ಅಸ್ಮಿತೆಯನ್ನು ನೀಡುತ್ತದೆ ಎಂದರು.

    ಪೌರನೌಕಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಯಾವುದೇ ಕಾರಣಕ್ಕೂ ಪೌರನೌಕಕರ ಮಕ್ಕಳ ಶಿಕ್ಷಣಕ್ಕೆ ತಡೆಯುಂಟಾಗಬಾರದು. ಪೌರನೌಕರರ ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಬಂದರೂ ಸರ್ಕಾರ ಪರಿಹಾರ ಒದಗಿಸುತ್ತದೆ. ಅವರೂ ವಿದ್ಯಾವಂತರಾಗಿ ಎಲ್ಲರಂತೆಯೇ ಉನ್ನತ ಹುದ್ದೆಗಳಿಗೆ ಹೋಗಬೇಕು. ಈ ರೀತಿ ಸಾಮಾಜಿಕ ಬದಲಾವಣೆಯನ್ನು ತರಲಾಗುತ್ತದೆ.
    ಎಸ್ ಸಿ ಎಸ್ ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯಕ್ಕೆ ಗಟ್ಟಿಯಾಗಿ ನಿಲ್ಲಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪೌರನೌಕಕರ ಸೇವೆಯನ್ನು ಸರ್ಕಾರ ಗುರುತಿಸಿದೆ. ಬರುವ ದಿನಗಳಲ್ಲಿ ಪೌರನೌಕರರ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದರು.

    ಪೌರನೌಕರರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿ :

    ಈ ವರ್ಷ ಮಾರ್ಚ್ ನಲ್ಲಿ ಪದವಿ ಪರೀಕ್ಷೆ ಬರೆಯುವ ಪೌರನೌಕರರ ಮಕ್ಕಳ ಸವಿವರ ಪಟ್ಟಿಯನ್ನು ನೀಡಲು ಸಂಬಂಧಪಟ್ಟ ಸಚಿವರಿಗೆ ಮುಖ್ಯಮಂತ್ರಿಗಳು ಸೂಚಿಸಿದರು. ಎಸ್ ಸಿ ಎಸ್ ಟಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡುವಂತೆ, ಪೌರನೌಕರರ ಮಕ್ಕಳು ಸಿಇಟಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿಯನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.ಪೌರಕಾರ್ಮಿಕರ ನೋವನ್ನು ನಾನು ಬಲ್ಲೆ  ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಇದರ ಬಗ್ಗೆ ಹಲವು ವರದಿಗಳು ಬಂದಿದ್ದರೂ, ಬೇಡಿಕೆ ಈಡೇರಿರಲಿಲ್ಲ. ನಗರ ಸ್ವಚ್ಛತೆ ಮಾಡುವುದರ ಕಷ್ಟವನ್ನು ನಾನು ಅರಿತಿದ್ದೇನೆ.

    ನಿಮ್ಮ ಜಾಗದಲ್ಲಿ ನಿಂತು ಯೋಚಿಸಿದಾಗ, ಬದುಕಿಗಾಗಿ ನಾನು ಏಕೆ ಇನ್ನೊಬ್ಬರ ಹೊಲಸನ್ನು ಸ್ವಚ್ಛಗೊಳಿಸಬೇಕು ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಇಂತಹ ಬದುಕನ್ನು ಬದುಕುವ ಅನಿವಾರ್ಯತೆ ಏಕೆ ಬಂದಿದೆ. ರಾಜ್ಯದ ದಲಿತ ನಾಯಕ ಬಸವಲಿಂಗಪ್ಪ, ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಕಾನೂನನ್ನು ತಂದ ಧೀಮಂತ ನಾಯಕ ಎಂದರು.

    ಸರ್ಕಾರದ ದಿಟ್ಟ ನಿರ್ಧಾರಗಳು ಸಮಾಜದಲ್ಲಿ ಬದಲಾವಣೆ ತರುತ್ತದೆ  ನಾವು ಅಧಿಕಾರದಲ್ಲಿದ್ದಾಗ ಅತ್ಯಂತ ಕೆಳಹಂತದಲ್ಲಿರುವವರಿಗೆ ನ್ಯಾಯವನ್ನು ಕೊಡಬೇಕು. ಕಾನೂನಿನ ಅಡಚಣೆಯನ್ನು ಮುಂದಿಟ್ಟುಕೊಂಡು ಪೌರಕಾರ್ಮಿಕರಿಗೆ 40-50 ವರ್ಷಗಳಿಂದ ನ್ಯಾಯವನ್ನು ನೀಡಲಾಗಿರಲಿಲ್ಲ. ಸರ್ಕಾರದ ವ್ಯವಸ್ಥೆಯಲ್ಲಿ ಕೆಲಸ ಮಾಡಬಾರದೆಂದರೆ ನೂರಾರು ಕಾರಣಗಳನ್ನು ಹುಡುಕಬಹುದು.

    ಆದರೆ ಬಡವರಿಗೆ, ದೀನದಲಿತರಿಗೆ,ದುಡಿಯುವ ವರ್ಗದ ಏಳಿಗೆಗೆ ದಿಟ್ಟತನದ ನಿರ್ಧಾರಗಳನ್ನು ತೆಗೆದುಕೊಂಡಾಗ ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದಾಗಿದೆ. ಸರ್ಕಾರದ ಈ ಆಶಯಕ್ಕೆ ಈ ನಿರ್ಣಯವೇ ಸಾಕ್ಷಿ. ಪೌರಕಾರ್ಮಿಕರ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪೌರಕಾರ್ಮಿಕರು ಇವುಗಳ ಲಾಭವನ್ನು ಪಡೆಯಬೇಕು ಎಂದರು.

    ಸಚಿವರಾದ ಗೋವಿಂದ ಕಾರಜೋಳ, ಎಂ.ಟಿ. ಬಿ.ನಾಗರಾಜ್, ಶಶಿಕಲಾ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!

    April 20, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ

    April 21, 2026

    ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ಜಮೀನಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

    ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ

    April 21, 2026

    ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!

    April 21, 2026

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.