nammatumakuru

    Subscribe to Updates

    Get the latest creative news from FooBar about art, design and business.

    What's Hot

    ಐಷಾರಾಮಿ ರೆಸ್ಟೋರೆಂಟ್‌ ಮೇಲೆ ದಾಳಿ:  ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು

    August 10, 2026

    ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು

    August 10, 2026

    ಚಿಕ್ಕಮಗಳೂರು: 100 ಅಡಿ ಪ್ರಪಾತಕ್ಕೆ ಉರುಳಿದ 10 ವೀಲ್ ಲಾರಿ

    August 10, 2026
    Facebook Twitter Instagram
    ಟ್ರೆಂಡಿಂಗ್
    • ಐಷಾರಾಮಿ ರೆಸ್ಟೋರೆಂಟ್‌ ಮೇಲೆ ದಾಳಿ:  ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು
    • ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು
    • ಚಿಕ್ಕಮಗಳೂರು: 100 ಅಡಿ ಪ್ರಪಾತಕ್ಕೆ ಉರುಳಿದ 10 ವೀಲ್ ಲಾರಿ
    • ‘ನನ್ನನ್ನು ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ’: ಕಾಂಗ್ರೆಸ್ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
    • ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!
    • ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ
    • ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
    • ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್‌ ಬಾಲ್ ಬ್ಯಾಟ್‌ ನಿಂದ ಹಲ್ಲೆ; ಎಫ್‌ ಐಆರ್ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೇರೆ ಭಾಷೆ ಗೌರವಿಸಿ, ನಮ್ಮ ಭಾಷೆಯನ್ನು ಪ್ರೀತಿಸಿ: ಪ್ರೊ.ಜಿ.ಹೇಮಂತ್ ಕುಮಾರ್
    ರಾಜ್ಯ ಸುದ್ದಿ November 2, 2022

    ಬೇರೆ ಭಾಷೆ ಗೌರವಿಸಿ, ನಮ್ಮ ಭಾಷೆಯನ್ನು ಪ್ರೀತಿಸಿ: ಪ್ರೊ.ಜಿ.ಹೇಮಂತ್ ಕುಮಾರ್

    By adminNovember 2, 2022No Comments2 Mins Read
    mysore vv

    ಬೇರೆ ಭಾಷೆಯನ್ನು ಗೌರವಿಸಬೇಕು. ಆದರೆ ನಮ್ಮ ಭಾಷೆಯನ್ನು ಪ್ರೀತಿಸಿ, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

    ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯೋತ್ಸವದ ದಿನವನ್ನು ನಾವು ರಾಜ್ಯಾದ್ಯಂತ ಅತಿ ಸಂತೋಷ ಹಾಗೂ ಸಡಗರದಿಂದ ಆಚರಿಸುತ್ತೇವೆ. ಈ ದಿನ ಸರ್ಕಾರದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದಂತಹ ಮಹನೀಯರುಗಳಿಗೆ ಸನ್ಮಾನವನ್ನು ಏರ್ಪಡಿಸಿ ಅವರುಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕನ್ನಡದಲ್ಲಿ ಇನ್ನೂ ಉತ್ತಮವಾದ ಸಾಧನೆಯನ್ನು ಮಾಡಲು ಪ್ರೋತ್ಸಾಹಿಸುವಂತಹ ನಿಟ್ಟಿನಲ್ಲಿ ಸರ್ಕಾರವು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.

    ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರುಗಳಿಗೆ ಪ್ರಶಸ್ತಿಯನ್ನು ನೀಡುವಂತಹ ಕಾರ್ಯಕ್ರಮವನ್ನು ಏರ್ಪಡಿಸುವುದರಿಂದ ಅವರು ಇನ್ನಷ್ಟು ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಕನ್ನಡಕ್ಕೆ ಕೊಡುವಂತಹ ಕೊಡುಗೆ ಇನ್ನು ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಈ ಪರಂಪರೆಯು ನಮ್ಮ ವಿಶ್ವವಿದ್ಯಾನಿಲಯದಲ್ಲಿ ನಡೆಯುವಂತಾಗಬೇಕು ಎಂಬುದು ನನ್ನ ಆಶಯ ಎಂದರು.

    ಮೈಸೂರು ರಾಜ್ಯವು 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನಾವು ಕನ್ನಡವನ್ನು ನವೆಂಬರ್ ತಿಂಗಳಿನಲ್ಲಿ ಮಾತ್ರ ನೆನೆದು ಉತ್ಸವವನ್ನು ಆಚರಿಸುವುದು ಮುಖ್ಯವಲ್ಲ, ಇದನ್ನು ನಾವು ದಿನದ 24 ಗಂಟೆ ಹಾಗೂ ವರ್ಷದ 365 ದಿನವು ಉತ್ಸವವನ್ನು ಆಚರಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ. ಹೇಗೆಂದರೆ ನಾವು ಕನ್ನಡಕ್ಕೆ ಮೊದಲು ಪ್ರಾಧಾನ್ಯತೆಯನ್ನು ನೀಡುವುದೇ ನಾವು ಉತ್ಸವವನ್ನು ಮಾಡಿದಂತೆ. ನಮ್ಮ ನಾಡು ಸಂಸ್ಕೃತಿಯನ್ನು ಬೇರೆ ನಾಡಿನವರಿಗೆ ಹಾಗೂ ದೇಶ ವಿದೇಶಗಳಲ್ಲಿ ಪರಿಚಯಿಸುವುದು ಸಹ ನಮ್ಮೆಲ್ಲರ ಹೊಣೆಗಾರಿಕೆ ಎಂದು ತಿಳಿಸಿದರು.

    ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸಿಕೊಂಡು ಬಂದಿದ್ದಾರೆ. ಜೊತೆಗೆ ನಮ್ಮ ನೆರೆ ರಾಜ್ಯಗಳಾದ ಮುಂಬಯಿ, ದೆಹಲಿ ಮುಂತಾದ ಕಡೆ ಹಾಗೂ ಅಮೇರಿಕಾ, ಸಿಂಗಾಪುರ್, ದುಬೈ, ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿ ನೆಲೆಸಿರುವಂತಹ ಕನ್ನಡಿಗರು ಬಹು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.

    ಕುಲಸಚಿವ ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿ ಡಾ.ಸಂಗೀತ ಗಜಾನನ ಭಟ್, ಸಂಸ್ಥೆ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್.ಕರಿಕಲ್, ಪ್ರೊ.ಸಿ.ನಾಗಣ್ಣ ಸೇರಿದಂತೆ ಇತರರು ಇದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಐಷಾರಾಮಿ ರೆಸ್ಟೋರೆಂಟ್‌ ಮೇಲೆ ದಾಳಿ:  ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು

    August 10, 2026

    ‘ನನ್ನನ್ನು ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ’: ಕಾಂಗ್ರೆಸ್ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

    August 10, 2026

    ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

    August 9, 2026

    Comments are closed.

    Our Picks

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಐಷಾರಾಮಿ ರೆಸ್ಟೋರೆಂಟ್‌ ಮೇಲೆ ದಾಳಿ:  ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು

    August 10, 2026

    ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಪಂಚತಾರ ಹಾಗೂ ಐಷಾರಾಮಿ ಹೋಟೆಲ್‌ ಗಳ ಮೇಲೆ…

    ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು

    August 10, 2026

    ಚಿಕ್ಕಮಗಳೂರು: 100 ಅಡಿ ಪ್ರಪಾತಕ್ಕೆ ಉರುಳಿದ 10 ವೀಲ್ ಲಾರಿ

    August 10, 2026

    ‘ನನ್ನನ್ನು ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ’: ಕಾಂಗ್ರೆಸ್ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

    August 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.