nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ
    • ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?
    • ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?
    • ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 
    • ಕಾನ್ಸಿರಾಂ ದೇಶ ಕಂಡ ಅತ್ಯುನ್ನತ ರಾಜಕಾರಣಿ: ರಾಹುಲ್ ಖಂದಾರೆ
    • ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!
    •  CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?
    • ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home »  ಬಜೆಟ್ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಚರ್ಚೆ ನಡೆಸಲು ಸಿಎಂ ಒಪ್ಪಿಗೆ:  ರಾಜ್ಯ ಮಾದಿಗ ದಂಡೋರ  ಸಮಿತಿ
    ತುಮಕೂರು December 20, 2021

     ಬಜೆಟ್ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಚರ್ಚೆ ನಡೆಸಲು ಸಿಎಂ ಒಪ್ಪಿಗೆ:  ರಾಜ್ಯ ಮಾದಿಗ ದಂಡೋರ  ಸಮಿತಿ

    By adminDecember 20, 2021No Comments2 Mins Read
    sadashiva ayoga

    ತುಮಕೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚೆಗೆ ತಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು, ರಾಜ್ಯ ಮಾದಿಗ ದಂಡೋರ  ಸಮಿತಿಯ ನಿಯೋಗವು ಬೆಳಗಾವಿಯ ಅಧಿವೇಶನದಲ್ಲಿ ಮನವಿ ಸಲ್ಲಿಸಿದ್ದು, ಈ ಸಂಬಂಧ  ಮಾದಿಗ ದಂಡೋರದ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

    ಮುಖಂಡರಾದ ಚನ್ನಬಸವಯ್ಯ ಮಾತನಾಡಿ, ಮಾದಿಗ ದಂಡೋರದ ನಿಯೋಗವು ಸಚಿವರಾದ ಮಾಧುಸ್ವಾಮಿ ಹಾಗೂ ಸಮಾಜ ಕಲ್ಯಾಣ ಸಚಿವರ ಸಮ್ಮುಖದಲ್ಲಿ, ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಈ ವೇಳೆ ಮುಖ್ಯಮಂತ್ರಿಯವರು, ನಮ್ಮ ನಿಯೋಗವು ನೀಡಿದ ಮನವಿಯನ್ನು ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸಲು, ಸಂಬಂಧಿಸಿದ ಇಲಾಖೆ ಹಾಗೂ ಸಚಿವರು ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಪಕ್ಷ ಹದಿನೈದು ದಿನಗಳ ಆವಶ್ಯಕತೆ ಇರುವುದರಿಂದ, ಈ ಬೆಳಗಾವಿಯ ಅಧಿವೇಶನದಲ್ಲಿ  ಚರ್ಚಿಸಲು ಸಾಧ್ಯವಿಲ್ಲ, ಆದರೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಚರ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.

    ಸಿಎಂ ಭೇಟಿಗೆ ಜೆ.ಸಿ.ಮಾಧುಸ್ವಾಮಿ ಅವಕಾಶ ಮಾಡಿಕೊಟ್ಟಿದ್ದು, ಎಲ್ಲಾ ರೀತಿಯ ಸಹಕಾರ ನೀಡಿದರು ಎಂದು ತಿಳಿಸಿದ ಚನ್ನಬಸವಯ್ಯ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ವಿಧಾನ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಾವೆಲ್ಲರೂ ಒಂದಾಹೋರಾಡಬೇಕಿದೆ ಎಂದು ಅವರು ಇದೇ ವೇಳೆಯಲ್ಲಿ ಕರೆ ನೀಡಿದರು.

    ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಾದಿಗ ದಂಡೋರ ಅಧ್ಯಕ್ಷ  ಜೆ.ಸಿ.ಪುರ ಗೋವಿಂದರಾಜು ಮಾತನಾಡಿ, ಸದಾಶಿವ ಆಯೋಗವು ಅವೈಜ್ಞಾನಿಕ ಎಂದು ದಾರಿತಪ್ಪಿಸುತ್ತಿರುವರು, ಸ್ಪೃಷ್ಯರಾಗಿದ್ದು, ಅಸ್ಪೃಶ್ಯರ ಮೀಸಲಾತಿಯನ್ನು ಕಬಳಿಸಿ, ನಿಜವಾದ ಅಸ್ಪೃಶ್ಯರ ಅವಕಾಶಗಳನ್ನು ಕಬಳಿಸುತ್ತಿದ್ದಾರೆ. ಇವರಿಗೆ ನೀಡಿರುವ ಮೀಸಲಾತಿ ಅವೈಜ್ಞಾನಿಕವೇ ಹೊರತು ಸದಾಶಿವ ವರದಿ ಅವೈಜ್ಞಾನಿಕವಾಗಿಲ್ಲ ಎಂದು ಪ್ರತಿಪಾದಿಸಿದರು.

    namma tumakuru

    ಇದಕ್ಕೆ ದನಿಗೂಡಿಸಿದ ಮಾದಿಗ ಸಮಾಜದ ಚಿಂತಕ ತರಬೇನಹಳ್ಳಿ ಚಿದಾನಂದ ಮೂರ್ತಿ, ಮಾದಿಗ ಸಮುದಾಯವು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಒತ್ತಾಯಿಸಲು, ಮಾದಿಗ ಸಮುದಾಯದ ಎಲ್ಲಾ ಹಾಲಿ ಹಾಗೂ ಮಾಜಿ ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು, ಸಚಿವರು, ರಾಜ್ಯಸಭೆ ಹಾಗೂ ಲೋಕಸಭಾ ಸದಸ್ಯರು, ಉದ್ಯಮಿಗಳು, ಸರಕಾರಿ ಅಧಿಕಾರಿ ವರ್ಗ ಸೇರಿದಂತೆ, ಮಾದಿಗ ಸಮುದಾಯದ ಎಲ್ಲಾ ಜನರನ್ನು ಒಂದೇ ವೇದಿಕೆಯಡಿ ತಂದು ಬೃಹತ್ ಸಮಾವೇಶ ನಡೆಸಿ, ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ, ಹೆಸರಹಳ್ಳಿ  ಗೋಪಾಲ್,  ಅಗಸರಹಳ್ಳಿ ಮೂರ್ತಿ, ಜಯರಾಮಯ್ಯ, ನೀಲಕಂಠ, ಶೋಭಾ ಕೃಷ್ಣಮೂರ್ತಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

    ವರದಿ: ಚಿದಾನಂದಮೂರ್ತಿ ತರಬೇನಹಳ್ಳಿ

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026

    Leave A Reply Cancel Reply

    Our Picks

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ ದಸರಾ ಮಹೋತ್ಸವ–2026ರ ಅಂಗವಾಗಿ ಕರ್ನಾಟಕ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳು ಕಂದಾಯ, ಯುವಜನ…

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026

    ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 

    October 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.