nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    May 10, 2026

    ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗದ ಹಿರಿಯ ನಾಯಕ ಇನ್ನಿಲ್ಲ

    May 10, 2026

    ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಕದ್ದ ಮಹಿಳೆ ಬಂಧನ

    May 9, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    • ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗದ ಹಿರಿಯ ನಾಯಕ ಇನ್ನಿಲ್ಲ
    • ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಕದ್ದ ಮಹಿಳೆ ಬಂಧನ
    • ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸೇರಿ ನಾಲ್ವರು ಸಾವು
    • ಮೇ 12 ರಂದು ಡಾ.ಜಿ.ಎಸ್.ಸಿದ್ದಲಿಂಗಯ್ಯನವರ ಬದುಕು–ಬರಹ ವಿಚಾರ ಸಂಕಿರಣ, ದತ್ತಿ ಪ್ರಶಸ್ತಿ ಸಮಾರಂಭ
    • ಸಿರಾ: ಶಿಕ್ಷಕರ ತರಬೇತಿ ಸಂಸ್ಥೆ ದಾಖಲಾತಿ ಪ್ರಾರಂಭ
    • ತುರುವೇಕೆರೆ: ಹೆಗ್ಗೆರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ
    • ತೆರೆ ಮೇಲೆ ರಾಜ್‌ ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಆರ್‌. ಮಂಜುನಾಥ್‌ ಚವಾಣ್‌, ನಾದಯೋಗಿ ಡಾ.ರಾಜಕುಮಾರ್ ಪುಸ್ತಕ ಬಿಡುಗಡೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸತ್ಯ ಹೇಳುವವರನ್ನು, ಕೆಲಸ ಮಾಡುವವರನ್ನು ನಂಬಿ ಆಶೀರ್ವಾದ ಮಾಡಿ: ಪ್ರಿಯಾಂಕ್ ಖರ್ಗೆ ಮನವಿ
    ತಾಲೂಕು ಸುದ್ದಿ January 5, 2023

    ಸತ್ಯ ಹೇಳುವವರನ್ನು, ಕೆಲಸ ಮಾಡುವವರನ್ನು ನಂಬಿ ಆಶೀರ್ವಾದ ಮಾಡಿ: ಪ್ರಿಯಾಂಕ್ ಖರ್ಗೆ ಮನವಿ

    By adminJanuary 5, 2023No Comments2 Mins Read
    ashrvada

    ಚಿಂಚೋಳಿ: ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ದಿ.ಆರ್.ಎಂ.ನಾಟೀಕಾರ್ ಅವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೋಲಿ ಕಬ್ಬಲಿಗ ಸಮಾಜದ ಪರ್ಯಾಯ ಬೇರೆ ಬೇರೆ ಜಾತಿಯವರು ಕೂಡಾ ಅಂಬಿಗರ ಚೌಡಯ್ಯನವರ ಹೆಸರಲ್ಲಿ ಒಗ್ಗೂಡುತ್ತಿದ್ದೀರಿ. ನೀವೆಲ್ಲಾ ಮುಗ್ಧ ಹಾಗೂ ಹಿಂದುಳಿದವರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಂಬಿಗರ ಚೌಡಯ್ಯ ನಿಗಮ ಸ್ಥಾಪನೆ ಮಾಡಲಾಯಿತು.


    Provided by
    Provided by

    ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಕಬ್ಬಲಿಗ ಕೋಲಿ ಸಮಾಜವನ್ನು ST ಸೇರಿಸಲಾಗುತ್ತದೆ ಎಂದು ಹೇಳಿದ ನಂತರ ಅವರಿಗೆ ಬೆಂಬಲಿಸಿದಿರಿ ಆದರೆ ಇನ್ನೂ ಆಗಿಲ್ಲ. ನಾನು ಸಚಿವನಾಗಿದ್ದಾಗ ಕೋಲಿಯನ್ನು ST ಸೇರಿಸಲು ಅಗತ್ಯ ಕ್ರಮ ಕೈಗೊಂಡಿದ್ದೆ. ಇತ್ತೀಚಿಗೆ ನಾನೇ ದಿಲ್ಲಿಗೆ ಹೋಗಿ ವಾಸ್ತವ ಸ್ಥಿತಿ ಅರಿತುಕೊಂಡಾಗ ST ಗೆ ಸೇರಿಸುವ ಪ್ರಸ್ತಾವನೆ ಹಾಗೆ ಇದೆ ಎಂದು ತಿಳಿಸಿದರು.

    ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಚೌಡದಾನಪುರದ ಅಭಿವೃದ್ದಿಗೆ ರೂ 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ. ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆಗೆ ರೂ 4 ಕೋಟಿ ಬಿಡುಗಡೆ ಮಾಡಿದ್ದೆ ಆದರೂ ನಮ್ಮನ್ನು ಸಮಾಜದ ವಿರೋಧಿಗಳಂತೆ ಬಿಂಬಿಸಲಾಗುತ್ತಿದೆ. ನೀವೆಲ್ಲ ಸತ್ಯ ಹೇಳುವವರನ್ನ ಕೆಲಸ ಮಾಡುವವರನ್ನು ನಂಬಿ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ ಎಂದರು.

    ವರ್ಣಭೇದ ನೀತಿಯ ವಿರುದ್ದ ಹೋರಾಡಿ 28 ವರ್ಷ ಜೈಲಿನಲ್ಲಿದ್ದ ನೆಲ್ಸನ್ ಮೆಂಡೇಲಾ ಅವರ ಹೆಸರಲ್ಲಿ R.M ನಾಟೀಕಾರ ಅವರ ಶಾಲೆ ಆರಂಭಿಸಿದ್ದಾರೆ. ಕಾರಣ ಮೆಂಡೇಲಾ ಅವರಂತೆ ಹೋರಾಟ ಮನೋಭಾವನೆ ಮೈಗೂಡಿಸಿಕೊಂಡಿದ್ದರು ಎಂದು ಅರ್ಥೈಸಬಹುದಾಗಿದೆ. ಮೆಂಡೆಲಾ ಕೂಡಾ ಶಿಕ್ಷಣಕ್ಕೆ ಮಹತ್ವ ನೀಡಿದ್ದರು ಹಾಗಾಗಿ ಅವರಿಂದ ಸ್ಪೂರ್ತಿ ಪಡೆದು ಶಾಲೆ ಆರಂಭಿಸಿದರು ಎಂದು ಅವರು ಹೇಳಿದರು.

    ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸುವತ್ತ ಪೋಷಕರು ಗಮನ ಹರಿಸಬೇಕು. ತಮ್ಮ ಮಕ್ಕಳಿಗೆ ಕೇಸರಿ ಶಾಲು ಹಾಕಿ, ಧರ್ಮ ರಕ್ಷಣೆಗೆ ಕಳಿಸಿ ಎಂದು ಕರೆಯುವವರೊಂದಿಗೆ ಕಳಿಸಬೇಡಿ ಎಂದರು.

    ಈ ಸಂದರ್ಭದಲ್ಲಿ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಅಲ್ಲಮಪ್ರಭು ಸಂಸ್ಥಾನಮಠ ತೊನಸನಹಳ್ಳಿ, ಡಾ ಅಜಯ್ ಸಿಂಗ್ ಮುಖ್ಯ ಸಚೇತಕರು, ತೆಲಂಗಾಣದ ಶಾಸಕರಾದ ಈಟಲ ರಾಜೇಂದ್ರ ಡಾ ತಳವಾರ ಸಾಯಬಣ್ಣ, ಡಾ ಶರಣಪ್ರಕಾಶ ಪಾಟೀಲ, ತಿಪ್ಪಣ್ಣಪ್ಪ ಕಮಕನೂರು ಸೇರಿದಂತೆ ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಸರಗೂರು ತಾಲೂಕಿನಲ್ಲಿ ಆದಿ ಕರ್ನಾಟಕ ಮಹಾಸಭಾ ಘಟಕ ರಚನೆ: ಪದಾಧಿಕಾರಿಗಳ ಆಯ್ಕೆ

    October 11, 2025

    ಗೃಹಲಕ್ಷ್ಮಿ ಯೋಜನೆ: ಮೃತರ ಖಾತೆಗಳಿಗೂ ಹಣ?

    October 11, 2025

    131 ಕೋಟಿ ವೆಚ್ಚದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ!

    October 11, 2025

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    May 10, 2026

    ತುಮಕೂರು: ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯನವರ ನೇತೃತ್ವದಲ್ಲಿ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾ…

    ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗದ ಹಿರಿಯ ನಾಯಕ ಇನ್ನಿಲ್ಲ

    May 10, 2026

    ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಕದ್ದ ಮಹಿಳೆ ಬಂಧನ

    May 9, 2026

    ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸೇರಿ ನಾಲ್ವರು ಸಾವು

    May 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.