nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ

    June 16, 2025

    ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ: ಸಿ.ಐ.ಸುರೇಶ್ ಖಡಕ್ ಎಚ್ಚರಿಕೆ

    June 16, 2025

    ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

    June 16, 2025
    Facebook Twitter Instagram
    ಟ್ರೆಂಡಿಂಗ್
    • ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ
    • ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ: ಸಿ.ಐ.ಸುರೇಶ್ ಖಡಕ್ ಎಚ್ಚರಿಕೆ
    • ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ
    • ನೀರಿನ ವಿಚಾರದಲ್ಲಿ ಸರ್ಕಾರ ರಾಜಕಾರಣ ಮಾಡಬಾರದು: ತುಮಕೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ
    • ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!
    • ಸೇತುವೆ ಕುಸಿದು 6 ಮಂದಿ ಪ್ರವಾಸಿಗರು ಸಾವು
    • ಸೋಲಾರ್ ವಾಟರ್ ಹೀಟರ್ ಖರೀದಿ : ಟೆಂಡರ್ ಆಹ್ವಾನ
    • ಪಾಲಿಕೆ : ಐಇಸಿ ಚಟುವಟಿಕೆಗಾಗಿ ಎಸ್‌ ಹೆಚ್‌ ಜಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಲಾ ಮಕ್ಕಳ ಎದುರೇ ಕಾಂಗ್ರೆಸ್—ಬಿಜೆಪಿ ಕಾರ್ಯಕರ್ತರ ಕಿತ್ತಾಟ:
    ತಾಲೂಕು ಸುದ್ದಿ December 10, 2022

    ಶಾಲಾ ಮಕ್ಕಳ ಎದುರೇ ಕಾಂಗ್ರೆಸ್—ಬಿಜೆಪಿ ಕಾರ್ಯಕರ್ತರ ಕಿತ್ತಾಟ:

    By adminDecember 10, 2022No Comments3 Mins Read
    congres bjp kithata

    ಕೊರಟಗೆರೆ: ಕಲ್ಪತರು ನಾಡಿಗೆ ಅಕ್ಷರ ಜ್ಞಾನ ನೀಡಿದ ಶ್ರೀಮಠ ನಮ್ಮ ಹೆಮ್ಮೆಯ ಸಿದ್ದಗಂಗಾ ಕ್ಷೇತ್ರ.. ಟೀ ಅಂಗಡಿಯಲ್ಲಿ ಚಹಾ ಮಾಡುತ್ತಿದ್ದ ಸಾಮಾನ್ಯ ಮನುಷ್ಯ ಇಂದು ದೇಶದ ಪ್ರಧಾನಿ.. ನಮ್ಮ ಮಕ್ಕಳು ಸರಕಾರಿ ಕೆಲಸ ಪಡೆಯದಿದ್ರು ಪರವಾಗಿಲ್ಲ—ಭಾರತ ದೇಶವನ್ನು ಪೂಜಿಸುವ ಉತ್ತಮ ಪ್ರಜೆಯಾದ್ರೇ ಸಾಕು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದರು.
    ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ನರಸಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಸಿ.ಎನ್.ದುರ್ಗ ಹೋಬಳಿಯ ನೇಗಲಾಲದ ಇಂದಿರಾ ಗಾಂಧಿ ವಸತಿಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
    ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಪವಾಡ ಪುರುಷ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಸುರಿದು ಸರಕಾರ ಹೈಟೆಕ್ ಶಾಲೆ ನಿರ್ಮಾಣ ಮಾಡಿದೆ. ವಿಶ್ವಕ್ಕೆ ಮಾನವ ಸಂಪನ್ಮೂಲ ನೀಡುವ ದೇಶ ನಮ್ಮದು. ಶೈಕ್ಷಣಿಕ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಿದೆ. ನಮ್ಮೂರಲ್ಲೆ ವ್ಯವಸಾಯಕ್ಕೆ ಜನರೇ ಸಿಗುತ್ತಿಲ್ಲ. ತಂತ್ರಜ್ಞಾನ ಹೆಚ್ಚಾಗಿದೆ ಆದರೇ ಶ್ರಮ ಇಲ್ಲದಿದ್ದರೇ ಆಗೋದಿಲ್ಲ ಎಂದು ಹೇಳಿದರು.
    ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಭಾರತ ದೇಶದ ಉಕ್ಕಿನ ಮಹಿಳೆ ಇಂದಿರಾಗಾಂಧಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅಂತಹ ಹತ್ತಾರು ಪ್ರಧಾನಿಗಳ ಶ್ರಮವೇ ಇಂದು ನರೇಂದ್ರಮೋದಿ ವಿಶ್ವ ಶೃಂಗಾಸಭೆಯ ಅಧ್ಯಕ್ಷರಾಗಲು ಕಾರಣ. ಅಂಬೇಡ್ಕರ್ ಹೇಳಿದ ಹಾಗೇ ಶಿಕ್ಷಣವು ನಮಗೆ ಆತ್ಮಬಲ ನೀಡಲಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋದ್ರು ನಮ್ಮ ದೇಶದ ಅಧಿಕಾರಿಗಳೇ ಸೀಗ್ತಾರೇ. ಪ್ರಪಂಚದ ಯಾವುದೇ ಬದಲಾವಣೆಗೆ ಭಾರತವೇ ಪ್ರಮುಖ ಕಾರಣ ಆಗಿದೆ ಎಂದು ಹೇಳಿದರು.
    ಈ ಕಾರ್ಯಕ್ರಮದಲ್ಲಿ ತುಮಕೂರು ಜಿಪಂ ಸಿಇಓ ಡಾ.ವಿದ್ಯಾಕುಮಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಉದ್ದೇಶ್, ಕೊರಟಗೆರೆ ತಹಶೀಲ್ದಾರ್ ನಾಹೀದಾ ಜಮ್ ಜಮ್, ತಾಪಂ ಇಓ ದೊಡ್ಡಸಿದ್ದಯ್ಯ, ಬಿಇಓ ಸುಧಾಕರ್, ಕೃಷಿ ಇಲಾಖೆ ನಾಗರಾಜು, ಅರಣ್ಯ ಇಲಾಖೆ ಸುರೇಶ್, ಸಿಡಿಪಿಓ ಅಂಬಿಕಾ, ಸಿಪಿಐ ಸುರೇಶ್, ಪಿಎಸೈ ಚೇತನ್, ಪಿಎಸೈ ಮಹಾಲಕ್ಷ್ಮೀ, ಎಎಸ್ಐ ಯೋಗೀಶ್, ಮಂಜುನಾಥ್ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ ನವೀನ್ ಕುಮಾರ್, ಉಪಾದ್ಯಕ್ಷ ಅಖಂಡರಾದ್ಯ ಮತ್ತು ಸರ್ವ ಸದಸ್ಯರು ಇತರರು ಹಾಜರಿದ್ದರು.
    ಕೈ-ಕಮಲ ಕಾರ್ಯಕರ್ತರ ಕಿತ್ತಾಟ:
    ನರಸಾಪುರ ವಸತಿಶಾಲೆಯ ವೇದಿಕೆ ಕಾರ್ಯಕ್ರಮದ ವೇಳೆ ಕೇಸರಿ ಶಾಲಿನ ವಿಚಾರಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ದಾದ ಪ್ರಾರಂಭವಾಯ್ತು. ಅಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಾಮಫಲಕದ ವಿಚಾರಕ್ಕೂ ಗಲಾಟೆ ಆಗಿದೆ. ನಂತರವು ನೇಗಲಾಲದ ವಸತಿ ಶಾಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಶಕ್ತಿ ಪ್ರದರ್ಶನಕ್ಕೆ ತಮ್ಮ ನಾಯಕರ ಪರವಾಗಿ ಜೈಕಾರ ಕೂಗಿದ್ದಾರೆ.
    ಮುಗ್ಧ ಮಕ್ಕಳ ಮುಂದೆ ರಾಜಕೀಯ ಪೌರುಷ:
    ಹಾಲಿ ಮತ್ತು ಮಾಜಿ ಗೃಹ ಸಚಿವರ ಸ್ವಾಗತಕ್ಕಾಗಿ ಕಾದು ಕುಳಿತ್ತಿದ್ದ ನೂರಾರು ಜನ ಪುಟಾಣಿ ಮಕ್ಕಳನ್ನು ಲೆಕ್ಕಿಸದ ಕೈ-ಕಮಲ ಕಾರ್ಯಕರ್ತರು, ತಮ್ಮ ನಾಯಕರ ಪರವಾಗಿ ಏರಿದ ಧ್ವನಿಯಲ್ಲಿ ಜೈಕಾರ ಹಾಕಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬಾವುಟಗಳನ್ನು ಶಾಲೆಯ ಆವರಣದಲ್ಲಿ ಹಾರಿಸುವ ಮೂಲಕ ಜ್ಞಾನ ದೇಗುಲದಲ್ಲೂ ತಮ್ಮ ರಾಜಕೀಯ ಶಕ್ತಿ ಪ್ರದರ್ಶನವನ್ನು ಮಾಡಿದ ಘಟನೆಯು ನಡೆಯಿತು. ಪುಟಾಣಿ ಮಕ್ಕಳನ್ನು ರಕ್ಷಿಸಿಕೊಳ್ಳಲು ಶಿಕ್ಷಕರು ಮತ್ತು ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

    ಸ್ವಾಮೀಜಿಗಳ ಮುಂದೆ ಶಕ್ತಿ ಪ್ರದರ್ಶನ:
    ನರಸಾಪುರದಲ್ಲಿ ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ನೇಗಲಾಲದ ಸಮಾರಂಭದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯ ಇದ್ರು ಸಹ ಕೈ-ಕಮಲ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಸ್ವಾಮೀಜಿಗಳು ಇದ್ರು ಗೌರವ ನೀಡದೇ ಎರಡು ಪಕ್ಷದ ಮುಖಂಡರು ತಮ್ಮ ನಾಯಕರ ಪರವಾಗಿ ಜೈಕಾರ ಕೂಗುತ್ತಾ ತಳ್ಳಾಟ-ನೋಕಾಟ ನಡೆಸಿರುವ ಘಟನೆಯು ಜ್ಞಾನ ದೇಗುಲಕ್ಕೆ ಅಗೌರವ ತೋರಿದಂತಿತ್ತು.


    Provided by

    ಇನ್ನೂ ಯಾರಿಗೆ ಯಾವ ಪಕ್ಷದಿಂದ ಟಿಕೆಟ್ ಕೋಡ್ತಾರೋ ಇಲ್ವೋ ನನಗೇ ಗೊತ್ತಿಲ್ಲ. ನನ್ನದೇ ಇನ್ನೂ ಗ್ಯಾರಂಟಿ ಆಗಿಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ದಯವಿಟ್ಟು ಯಾರು ಕಿತ್ತಾಡಬೇಡಿ. ಮತದಾರ ಯಾರಿಗೆ ಮತ ಹಾಕುತ್ತಾನೋ ಅದು ಇನ್ನೂ ಗೌಪ್ಯ. ದಯವಿಟ್ಟು ಎಲ್ಲರೂ ಸುಮ್ಮನಿರಿ ಈಗ ಕಾರ್ಯಕ್ರಮ ಮುಗಿಸೋಣ.
    -ಡಾ.ಜಿ.ಪರಮೇಶ್ವರ್. ಶಾಸಕ. ಕೊರಟಗೆರೆ..

    ವಿಧಾನಸಭೆ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿಯಿದೆ. ಚುನಾವಣೆ ಬಂದಾಗ ನಾವೆಲ್ಲರೂ ರಾಜಕೀಯ ಮಾಡೋಣ. ಕಾರ್ಯಕ್ರಮ ನಡೆಸಲು ಗದ್ದಲ ನಡೆಸದೇ ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವಕಾಶ ಮಾಡಿಕೊಡಿ. ವಸತಿ ಶಾಲೆಯಲ್ಲಿ ಪುಟಾಣಿ ಮಕ್ಕಳು ಇದಾರೇ ದಯವಿಟ್ಟು ಪಕ್ಷದ ಬಾವುಟಗಳ ಪ್ರದರ್ಶನ ಬೇಡ.
    -ಅರಗ ಜ್ಞಾನೇಂದ್ರ. ಗೃಹ ಸಚಿವ. ಕರ್ನಾಟಕ..

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ..


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಸಿದ್ಧತೆ ನಡೆಸಿದೆ: ಪ್ರಲ್ಹಾದ್ ಜೋಶಿ ಆರೋಪ

    November 8, 2024

    ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ರವರನ್ನು ಆಯ್ಕೆ ಮಾಡಿ: ಶಾಸಕ ಅನಿಲ್ ಚಿಕ್ಕಮಾದು

    April 16, 2024

    ಸರಗೂರು: ಶಿವಯೋಗಿ ಸಿದ್ಧರಾಮೇಶ್ವರರ 852 ನೇ  ಜಯಂತೋತ್ಸವ 

    February 7, 2024
    Our Picks

    ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!

    June 16, 2025

    ಸೇತುವೆ ಕುಸಿದು 6 ಮಂದಿ ಪ್ರವಾಸಿಗರು ಸಾವು

    June 16, 2025

    ಪತನಗೊಂಡ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು: ಅಮಿತ್ ಶಾ

    June 13, 2025

    ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ

    June 12, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ

    June 16, 2025

    ಕೊರಟಗೆರೆ: ತಾಲೂಕಿನ ದೇವರಹಳ್ಳಿ ಬಳಿ ಇರುವ ಮುಕುಂದರಾಯನ ಬೆಟ್ಟದಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಅಂಗವಾಗಿ ಬೀಜದ…

    ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ: ಸಿ.ಐ.ಸುರೇಶ್ ಖಡಕ್ ಎಚ್ಚರಿಕೆ

    June 16, 2025

    ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

    June 16, 2025

    ನೀರಿನ ವಿಚಾರದಲ್ಲಿ ಸರ್ಕಾರ ರಾಜಕಾರಣ ಮಾಡಬಾರದು: ತುಮಕೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ

    June 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.