nammatumakuru

    Subscribe to Updates

    Get the latest creative news from FooBar about art, design and business.

    What's Hot

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!

    October 5, 2026
    Facebook Twitter Instagram
    ಟ್ರೆಂಡಿಂಗ್
    • SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!
    • ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!
    • ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!
    • ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು
    • ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ
    • AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?
    • ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?
    • ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಕಲಿ ವೈದ್ಯರಿಗೆ ಕಡಿವಾಣ ಹಾಕಬೇಕೆ?
    ಲೇಖನ October 13, 2024

    ನಕಲಿ ವೈದ್ಯರಿಗೆ ಕಡಿವಾಣ ಹಾಕಬೇಕೆ?

    By adminOctober 13, 2024No Comments3 Mins Read
    n s eshwar prasad

    ಪ್ರತಿಯೊಂದು ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ 1 ರಿಂದ 3/4 ನಕಲಿ ವೈದ್ಯರು ಇರುತ್ತಾರೆ ಇವರಿಗೆ ಆರೋಗ್ಯ ಇಲಾಖೆ ಇವರಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಿರುವುದಿಲ್ಲ, ಇವರಿಗೆ ಯಾವುದೇ ರೀತಿಯ ಅಧಿಕೃತ ತರಬೇತಿ ಇರುವುದಿಲ್ಲ, ಇವರು ಕೆಲವು ಕ್ಲಿನಿಕ್ ಗಳಲ್ಲಿ ಕೆಲಸ ಮಾಡಿ ಆ ಅನುಭವದ ಮೇಲೆ ಚಿಕಿತ್ಸೆ ನೀಡುವುದರಿಂದ ಕೆಲವು ಸಂಧರ್ಭದಲ್ಲಿ ರೋಗಿಗಳ ಸಾವುಗಳು ನೋಡಬಹುದು. ಅಥವ ರಿಯಾಕ್ಷನ್ ಆಗಬಹುದು ಆದುದರಿಂದ ಇವುಗಳನ್ನು ಮುಚ್ಚಿಸಲು ಸಾಮಾಜಿಕ ಕಾರ್ಯಕರ್ತರು ಒತ್ತಾಯ ಮಾಡುತ್ತಾರೆ.

    ಇವರು ಕ್ಲಿನಿಕ್ ನಡೆಸಲು ಸರ್ಕಾರದಿಂದ ಅನುಮತಿ ಪಡೆದಿರುವುದಿಲ್ಲ, ಅದುದರಿಂದ ಇವುಗಳಿಗೆ ಕಡಿವಾಣ ಹಾಕಬೇಕೆಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡುವುದನ್ನು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಕಂಡುಬರುತ್ತದೆ. ಸಾಮಾಜಿಕ ಕಾರ್ಯಕರ್ತರಿಗೆ ಸರ್ಕಾರಿ ನಿಯಮಗಳಿಗೆ ಹಾಗೂ ರೋಗಿಗಳ ಬಗ್ಗೆ ಕಾಳಜಿ ಬಿಟ್ಟರೆ ಇನ್ನು ಯಾವ ಉದ್ದೇಶ ಇರುವುದಿಲ್ಲ, ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯರ ಮೇಲೆ ಕ್ರಮಗಳು ಕಣ್ಣು ಮುಚ್ಚಾಲೆ ತರ ಇರುತ್ತದೆ ಎಂಬುವುದು ಸಾಮಾಜಿಕ ಕಾರ್ಯಕರ್ತರ ಆರೋಪ ಕೇಳಿ ಬರುತ್ತದೆ.

    ಹಿರಿಯ ಅಧಿಕಾರಿಗಳು ನಕಲಿ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಲು ಯಾವುದು ಅಡ್ಡಿಯಾಗಿದೆ? ಜನಪ್ರತಿನಿಧಿಗಳು ಅಥವಾ ಸಚಿವರೆ ಹೇಳಿದರು ಏಕೆ ಹಿಂಜರಿಯುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಹಾಕುವುದು ಇದೆ, ಇದಕ್ಕೆ ಹಿರಿಯ ಅಧಿಕಾರಿಗಳು ಇಲ್ಲಿಯವರೆಗೂ ಸಕಾರಣ ನೀಡಿಲ್ಲ ಎಂಬ ಆರೋಪಗಳು ಇದೆ, ನಕಲಿ ವೈದ್ಯರ ಬಗ್ಗೆ ಸಾಮಾಜಿಕ ಕಾರ್ಯಕರ್ತರಿಗೆ ಯಾವುದೇ ಪೂರ್ವಗ್ರಹ ಪೀಡಿತರಾಗಿ ಮಾತನಾಡುವುದಿಲ್ಲ ರೋಗಿಗಳ ಮೇಲೆ ಇರುವ ಕಾಳಜಿ ಸರ್ಕಾರಿ ನಿಯಮಗಳು ಪಾಲನೆ ಆಗುತ್ತಿಲ್ಲ ಎಂಬ ಪ್ರಶ್ನೆಗಳು ಮಾತ್ರ ಕೇಳಿ ಬರುತ್ತದೆ. ಇದು ನಿರಂತರ ಸಮಸ್ಯೆಯಾಗಿದೆ . ನಕಲಿ ವೈದ್ಯರು ತಮಗೆ ತಿಳಿದಿರುವ ಚಿಕಿತ್ಸೆ ತಿಳಿವಳಿಕೆಗಿಂತ ವಿಶೇಷ ತಜ್ಞರು ರೀತಿಯಲ್ಲಿ ಚಿಕಿತ್ಸೆ ನೀಡಲು ಹೋಗಿ ರೋಗಿಗಳ ಪ್ರಾಣ ಕಳೆದು ದಿದ್ದು ಇದೆ ಇದಕ್ಕೆ ಉದಾ ಯುಟ್ಯೂಬ್ ನಲ್ಲಿ ಅಪರೇಷನ್ ಮಾಡುವುದನ್ನು ನೋಡಿಕೊಂಡು ರೋಗಿಗೆ ಅಪರೇಷನ್ ಮಾಡಲು ಹೋಗಿ ರೋಗಿ ಮರಣ ಹೊಂದಿರುವ ಉದಾಹರಣೆ ಇದೆ.

    ಗ್ರಾಮೀಣ ಪ್ರದೇಶಗಳಿಗೆ ನಕಲಿ ವೈದ್ಯರಿಂದ ರೋಗಿಗೆ ಪ್ರಾಣಕ್ಕೆ ಸಂಚಕಾರ ಬಂದರೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳಲ್ಲಿ ದೂರು ದಾಖಲು ಆಗುವುದು ತೀರ ಅಪರೂಪ ಆಗಿದೆ. ಹಳ್ಳಿಗಳಲ್ಲಿ ರಾಜಿ ಪಂಚಾಯತಿಗಳು ನಡೆದು ತೀಮಾ೯ನ ಆಗುತ್ತಿವೆ. ಎಂಬ ಮಾತುಗಳು ಸಾಮಾಜಿಕ ಕಾರ್ಯಕರ್ತರಿಂದ ಕೇಳಿ ಬರುತ್ತದೆ, ಇದೆಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತು ಇದ್ದರು. ಕ್ರಮ ಕೈಗೊಳ್ಳುದೆ ಇರುವುದು ಆಮಿಷಗಳಿಗೆ ಬಲಿ ಆಗಿದ್ದಾರ ಅಥವಾ ರಾಜಕೀಯ ನಾಯಕರ ಶಿಪಾರಸ್ಸುಗಳು ನಡೆಯಬಹುದೇ ಏಕೆಂದರೆ ಗ್ರಾಮೀಣ ನಕಲಿ ವೈದ್ಯರು ರಾಜಕೀಯ ಪಕ್ಷಗಳೊಂದಿಗೆ ನಂಟು ಬೆಳಸಿಕೊಂಡು ಪ್ರಭಾವಿಗಳು ಆಗಿರುತ್ತಾರೆ ಎಂಬ ಮಾತುಗಳು ನಾಗರೀಕರಿಂದ ತಿಳಿದು ಬಂದಿದೆ ಎನ್ನುವುದು ಸಾಮಾಜಿಕ ಕಾರ್ಯಕರ್ತರಿಂದ ಕೇಳಿ ಬರುತ್ತದೆ. ಏನೇ ಇರಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವ ವ್ಯವಸ್ಥೆ ಸರ್ಕಾರದಿಂದ ಆಗಬೇಕು ಎಂಬ ಮಾತುಗಳು ಕೇಳಿ ಬರುತ್ತದೆ.

    ಸಾಮಾಜಿಕ ಕಾರ್ಯಕರ್ತರ ಕಾಳಜಿ ಒಂದು ಕಡೇ ಇಟ್ಟು ನೋಡಿದರೆ ಆರೋಗ್ಯ ಇಲಾಖೆಯ ವಿಫಲತೆಗಳು ಹೆಚ್ಚಾಗಿ ಕಂಡುಬರುತ್ತದೆ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಅನುಸಾರವಾಗಿ ಕರ್ತವ್ಯ ಮಾಡುವುದು ಅಪರೂಪದ ಪ್ರಸಂಗಗಳು ಆಗುತ್ತಿವೆ. ಪ್ರಾಮಾಣಿಕ ವೈದ್ಯರು ಇದ್ದರು. ಸಂಖ್ಯೆ ವಿರಳ ಎಂಬುದು ನಾಗರೀಕರಿಂದ ಕೇಳಿ ಬರುತ್ತದೆ, ಇಂತ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಅಥವಾ ರೋಗಿಗಳಿಗೆ ತಮ್ಮ ಗ್ರಾಮಗಳಿಗೆ ಹತ್ತಿರ ಇರುವ ಪಂಚಾಯತಿ ಕೇಂದ್ರಗಳಲ್ಲಿ ದೊರೆಯುವ ಈ ( ನಕಲಿ ) ವೈದ್ಯರೇ ದೊರೆಯುತ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವ ವೈದ್ಯರು ಸಮಯ ಪಾಲನೆ ಮಾಡಿಕೊಂಡು ಕಾಳಜಿ ವಹಿಸಿ ಚಿಕಿತ್ಸೆ ನೀಡುವುದು ಕಡಿಮೆ ಇರುವುದರಿಂದ ವ್ಯವಸ್ಥೆ ಅರಿತುಕೊಂಡುವರುವಿಧಿ ಇಲ್ಲದೆ ಖಾಸಗಿ ಕ್ಲಿನಿಕ್ ಗಳು ಆಪತ್ಬಾಂಧವ್ಯಗಳು ಆಗಿವೆ ಎಂಬ ಮಾತು ನಾಗರೀಕ ಕೇಳಿ ಬರುತ್ತದೆ.

    ಸರ್ಕಾರ ಆರೋಗ್ಯ ಇಲಾಖೆಯ ಬಗೆ ಸರಿಯಾದ ಕ್ರಮಗಳು ತೆಗೆದುಕೊಳ್ಳದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು ಇಲ್ಲದಂತೆ ಆಗಿದೆ. ಇಂತ ಸಂದರ್ಭದಲ್ಲಿ ನಕಲಿ ವೈದ್ಯರ ಮೇಲೆ ಕ್ರಮ ಕೈಗೊಂಡರೆ ನಮ್ಮ ಗತಿ ಏನು? ಸಣ್ಣ ಪುಟ್ಟ ಕಾಯಿಲೆಗಳಿಗೆ ತಾಲ್ಲೂಕ್ ಕೇಂದ್ರಗಳಿಗೆ ಹೋಗಲು ಸಾಧ್ಯವೇ ಎಂಬುದು ಸಾಮಾನ್ಯ ಜನರ ಮಾತುಗಳು ಕೇಳಿ ಬರುತ್ತವೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮೀಣ ಆಸ್ಪತ್ರೆಗಳ ಕಡೇ ಗಮನ ನೀಡುವುದು ಅಗಲಿ ತನಿಖೆಯ ರೂಪದಲ್ಲಿ ಗಮನ ಹರಿಸುವುದು ಇಲ್ಲದ ಕಾರಣ ಸರ್ಕಾರಿ ಗ್ರಾಮೀಣ ಅಸ್ಪತ್ರೆ ಕೇಂದ್ರಗಳು ಅಧಿಕಾರಗಳ ಬಗೆ ಕೇರ್ ಮಾಡುವುದಿಲ್ಲ ಎಂಬ ಮಾತುಗಳು ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಾಗರೀಕರು ಪ್ರಶ್ನೆ ಹಾಕುವುದು ಏನೆಂದರೆ ಗ್ರಾಮೀಣ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಗಿಂತ ನಕಲಿ ವೈದ್ಯರ ಕ್ಲಿನಿಕ್ ನಲ್ಲಿ ರೋಗಿಗಳ ಹೆಚ್ಚಾಗಿ ಇರಲು ಕಾರಣವೇನು? ಇದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ.

    ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕ್ರಮಬದ್ದವಾಗಿ ನಡೆಸಬೇಕು ಇಲ್ಲದ ಪಕ್ಷದಲ್ಲಿ ನೆರೆ ರಾಜ್ಯ ಆಂಧ್ರಪ್ರದೇಶಗಳಲ್ಲಿ ಒಂದು ನಿಯಮಿತ ಶಿಕ್ಷಣ ಪಡೆದವರಿಗೆ ತರಬೇತಿ ನೀಡಿ ಅಥವ ಎಂ.ಬಿ.ಬಿ ಎಸ್ . ವೈದ್ಯರ ಹತ್ತಿರ ಅನುಭವ ಪಡೆದ ಯುವಕರಿಗೆ ಒಂದು ಪರೀಕ್ಷೆ ನಡೆಸಿ ( ಆರ್.ಎಂ.ಪಿ) (ಆಂಧ್ರ ಶೈಲಿಯಲ್ಲಿ) ಅದರಲ್ಲಿ ಉತ್ತೀರ್ಣರಾದವರೆಗೆ ಅಧಿಕೃತ ದೃಡೀಕರಣ ಪತ್ರ ನೀಡಿ ನಮ್ಮ ರಾಜ್ಯದಲ್ಲಿ ಸಹಾ ಕ್ಲಿನಿಕ್ ಗಳನ್ನು ನೀಡಿ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮ ಅನಿಸಿಕೆ ವ್ಯಕ್ತಿ ಪಡಿಸುವುದನ್ನು ಕಾಣಬಹುದು. ಸರ್ಕಾರ ಗ್ರಾಮೀಣ ಪ್ರದೇಶದ ಆರೋಗ್ಯ ವಿಷಯದಲ್ಲಿ ಕಾಳಜಿ ವಹಿಸಿ ಕಾರ್ಯ ಮುಖರಾಗಬೇಕೆಂಬುದು ನಾಗರಿಕರಿಂದ ಕೇಳಿಬರುತ್ತದೆ .

    –N.S.ಈಶ್ವರಪ್ರಸಾದ್.

    ನೇರಳೇಕೆರೆ, ಮಧುಗಿರಿ ತಾಲ್ಲೂಕು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?

    October 5, 2026

    ಶಿವನ ಕೊರಳಿನಿಂದ ಬುದ್ಧನ ಧ್ಯಾನದವರೆಗೆ ನಾಗರಹಾವಿನ ನಂಟೇಕೆ? ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿರುವ ನಿಗೂಢ ನಂಬಿಕೆಯ ಕಥೆ ಇಲ್ಲಿದೆ!

    October 4, 2026

    ‘ಕಸ’ವೇ ಇಲ್ಲಿ ಹರಕೆ! ಹಳೆಯ ವಸ್ತುಗಳನ್ನು ದೇವಿಗೆ ಅರ್ಪಿಸುವ ಅಪರೂಪದ ಆಚರಣೆ ಎಲ್ಲಿದೆ ಗೊತ್ತಾ?

    October 2, 2026

    Comments are closed.

    Our Picks

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರ ATM ಬಳಕೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬಂದಿವೆ.…

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!

    October 5, 2026

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.