ಶ್ರೀ ವೀರೇಂದ್ರ ಹೆಗಡೆಯವರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ,ಸಾಂಸ್ಕೃತಿಕ ರಂಗಗಳಲ್ಲಿ ಸೇವೆಯನ್ನು ಗುರುತಿಸಿ ಧರ್ಮಸ್ಥಳದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ್ದು, ಅವರ ಸೇವೆಗಳು ನಡವಳಿಕೆಗಳು ಸಾಮಾಜಿಕ ಪ್ರಜ್ಞೆಗಳು ಇದಕ್ಕೆ ಪೂರಕವಾಗಿವೆ ಎಂದು ಶ್ರೀ ಕ್ಷೇತ್ರ ಮೂಡುಬಿದರೆ ಜೈನಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟರಕ ಪಂಡಿತಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಧರ್ಮಸ್ಥಳ ಸಭಾಭವನದಲ್ಲಿ ನಡೆದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಡೆಯವರ 57ನೇ ವರ್ಧಂನ್ಯೋತ್ಸವ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಹುಮುಖಿ ಸಮಾಜ ಸೇವಾ ಕಾರ್ಯದಿಂದ ವಿಶ್ವಮಾನವರಾಗಿರುವ ಇವರು ಚತುರ್ವಿದ ದಾನ ಪರಂಪರೆ ಹೊಂದಿದ್ದಾರೆ ಎಂದರು.
ಡಾ.ವೀರೇಂದ್ರ ಹೆಗ್ಗಡೆಯವರ ಪ್ರತಿಮೆ ಅನಾವರಣ ಮಾಡಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್ .ಮಂಜುನಾಥ್ ಮಾತನಾಡಿ, ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯ ಅಗತ್ಯ. ನಮ್ಮ ಧರ್ಮಸ್ಥಳ ಮಾನಸಿಕ , ಶಾಂತಿ ,ನೆಮ್ಮದಿ ನೀಡುವ ತಾಣವಾಗಿದ್ದು ಶ್ರೀ ಹೆಗ್ಗಡೆಯವರ ಹತ್ತಾರು ಧರ್ಮಕಾರ್ಯಗಳು ಸಮಾಜಕ್ಕೆ ನಂದಾದೀಪವಾಗಿದ್ದು ಇವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ವಿಧಾನಪರಿಷತ್ ಸದಸ್ಯಕ್ಕೆ ಪ್ರತಾಪ್ ಸಿಂಗ್ ನಾಯಕ್ ಮಾತನಾಡಿ, ಹೆಗ್ಡೆಯವರ ಬಹುಮುಖ ಸಮಾಜ ಸೇವೆಗೆ ಅಭಿನಂದನೆ ಸಲ್ಲಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮಸ್ಥಳದಲ್ಲಿ ಆಧುನಿಕ ವಿಜ್ಞಾನ ತಂತ್ರಜ್ಞಾನ ಬಳಕೆ ಮಾಡಿ ಭಕ್ತರಿಗೆ ಹಲವಾರು ಸವಲತ್ತುಗಳನ್ನು ಒದಗಿಸಲಾಗಿದೆ . ನವಂಬರ್ ನಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಗಮಿಸಲಿದ್ದಾರೆ. ಆರಾಮದಾಯಕ ಸರಥಿ ಸಾಲಿನ ಸೌಲಭ್ಯ ಒದಗಿಸಲಿದ್ದು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 120 ಹೊಸ ರುಡ್ ಸೆಟ್ ಸಂಸ್ಥೆಗಳನ್ನು ಪ್ರಾರಂಭಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಡಾ. ಹೇಮಾವತಿ ವಿ.ಹೆಗಡೆ , ಧರ್ಮಸ್ಥಳ ಸುರೇಂದ್ರ ಕುಮಾರ್, ಡಿ .ಹರ್ಷೇಂದ್ರ ಕುಮಾರ್ ಭಾಗವಹಿಸಿದ್ದರು. ಪ್ರೊ. ಎಸ್. ಸತೀಶ್ ಚಂದ್ರ ಸ್ವಾಗತಿಸಿದರು ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀನಾರಾಯಣ ವಂದಿಸಿದರು.
ವರದಿ: ಜೆ .ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q