ಪಾವಗಡ: ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿಯ ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ, ಶ್ರೀ ಚೌಡೇಶ್ವರಿ ಅಮ್ಮನವರ 60ನೇ ಜ್ಯೋತಿ ಉತ್ಸವವನ್ನು ಸೋಮವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಉತ್ಸವ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮಧ್ಯಾಹ್ನ 2 ಗಂಟೆಯ ವೇಳೆ ದೇವಾಲಯದಲ್ಲಿ ಕೊನೆಗೊಂಡಿತು. ಉತ್ಸವದ ಉದ್ದಕ್ಕೂ ಹರಕೆ ಹೊತ್ತ ಭಕ್ತಾಧಿಗಳು ನಾರದ ಹಾಕಿಸಿಕೊಂಡು ಹರಕೆ ತೀರಿಸಿದರು. ಗ್ರಾಮಕ್ಕೆ ದುಷ್ಟಶಕ್ತಿಗಳ ಹಾವಳಿ ಬಾರದಿರಲೆಂದು ಪೂಜಾನ್ನವನ್ನು ಹಾಕಲಾಯಿತು.
ಮೆರವಣಿಗೆಯಲ್ಲಿ ತೊಗಟವೀರ ಸಮುದಾಯ ಆನಂದ ಪದಗಳನ್ನು ಹಾಡುತ್ತ ದೇವಿಯ ಮೂರ್ತಿಗೆ ಶಕ್ತಿ ತುಂಬಿದರು. ಹಬ್ಬದ ಅಂಗವಾಗಿ ಮೂಲ ದೇವತಾ ಮೂರ್ತಿಗೆ ‘ಅರಶಿಣ ಕುಂಕುಮ’ದ ಅಲಂಕಾರ ಮಾಡಲಾಗಿತ್ತು.
ವರದಿ : ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4