ತಿಪಟೂರು: ಗಂಗನಘಟ್ಟ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಉತ್ಸವಮೂರ್ತಿ ಗಂಗನ ಘಟ್ಟದ ಒಡೆತನದ ವಿವಾದಕ್ಕೆ ಜಿಲ್ಲಾಧಿಕಾರಿಗಳು ಆದೇಶ ಪ್ರಕಟಿಸಿದ್ದು, ಉತ್ಸವ ಮೂರ್ತಿ ಸಾಸಲಹಳ್ಳಿಗ್ರಾಮಕ್ಕೆ ಸೇರಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಪೊಲೀಸ್ ಸಮ್ಮುಖದಲ್ಲಿ ಗಂಗನಘಟ್ಟಗ್ರಾಮದಲ್ಲಿರುವ ಉತ್ಸವ ಮೂರ್ತಿಯನ್ನು ಸಾಸಲಹಳ್ಳಿಯಲಿ ಇಡಬೇಕೆಂದು ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾಕ್ಟರ್ ಜಿ.ಬಿ. ವಿವೇಚನ ಅವರು, ಈ ಉತ್ಸವಮೂರ್ತಿ ಸಾಸಲ ಹಳ್ಳಿಗೆ ಸೇರಿದ್ದಲ್ಲ ಜಿಲ್ಲಾಧಿಕಾರಿಗಳು ಏಕ ಪಕ್ಷೀಯವಾಗಿ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೋರಿದ್ದಾರೆ.
ತಲೆಮಾರುಗಳಿಂದ ಗಂಗನಘಟ್ಟ ಬಾರೆ ಮೇಲೆ ಶ್ರೀ ರಂಗನಾಥ ಸ್ವಾಮಿ ಮೂಲ ದೇವಾಲಯವಿದ್ದು, ಇಲ್ಲಿಂದ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಅರ್ಚಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಾಸಲಹಳ್ಳಿಯಲ್ಲಿ ಇರಿಸಲಾಗಿತ್ತೇ ವಿನಃ ಗಂಗನಘಟ್ಟ ಗ್ರಾಮಸ್ಥರು ತಲೆಮಾರುಗಳಿಂದ ಪೂಜಿಸಿಕೊಂಡು ಬಂದಿರುವ ಮೂರ್ತಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ, ಪ್ರಾಣ ಕೊಟ್ಟೆವೇ ವಿನಃ ಉತ್ಸವ ಮೂರ್ತಿಯನ್ನು ಬಿಟ್ಟು ಕೊಡುವುದಿಲ್ಲ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆಮಾಡಿ ವಾಸ್ತವ ಸಂಗತಿ ತಿಳಿದುಕೊಳ್ಳುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೋವಿಂದಸ್ವಾಮಿ, ಗುಡಿ ಗೌಡ ರಂಗಸ್ವಾಮಿ, ಹೇಮಂತ್ ಕುಮಾರ್, ಹೇಮಾಚಲ ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4