ತಿಪಟೂರು: ಬೀದಿಯಲ್ಲಿ ಆಟವಾಡುತ್ತಿದ್ದ 6ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯನ್ನ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ.
ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯನವರ ಮಗಳು 6 ವರ್ಷದ ನವ್ಯ ಬೀದಿನಾಯಿಗಳ ದಾಳಿಗೊಳಗಾದ ನತದೃಷ್ಟೆ. ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಅಯ್ಯನ ಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿವೆ. ದಾಳಿ ನಡೆಸಿದ ನಾಯಿಗಳು ಮಗುವಿನ ತಲೆಯ ಚರ್ಮವನ್ನ ಸಂಪೂರ್ಣವಾಗಿ ಕಿತ್ತುಹಾಕಿದ್ದು. ಮಗುವಿನ ಹೊಟ್ಟೆ ಭಾಗ ಕಿತ್ತು ತಿಂದಿದೆ. ಬೀದಿ ನಾಯಿಗಳ ದಾಳಿಯಿಂದ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ.
ಬೀದಿ ನಾಯಿಗಳು ಮಗುವಿನ ಹೊಟ್ಟೆಯನ್ನು ಕಿತ್ತು ಕರುಳು ಆಚೆಬರುವಂತೆ ಮಾಡಿವೆ. ಮಗುವಿನ ಮುಖ ಹಾಗೂ ಕೈ.ಕಾಲು ತೊಡೆಭಾಗವನ್ನ ಕಿತ್ತು ಹಾಕಿವೆ. ರಕ್ತದ ಮಡುವಿನಲ್ಲಿ ಕೀರಾಡುತ್ತಿದ್ದ ಮಗುವನ್ನ ಕಂಡ ಸಾರ್ವಜನಿಕರು.ನಾಯಿಗಳನ್ನು ಓಡಿಸಿ ಮಗುವನ್ನ ತಕ್ಷಣ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು. ಮಗು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW