nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅರಕಲಗೂಡು: ಚಿರತೆ ದಾಳಿಗೆ ನಡುಗಿದ ಗ್ರಾಮಸ್ಥರು; ಜಾನುವಾರು ಸಾವು, ಅರಣ್ಯ ಇಲಾಖೆಯಿಂದ ಪಂಜರ ಸ್ಥಾಪನೆ

    August 26, 2026

    ಹೊಳೆನರಸೀಪುರ ಪುರಸಭೆ: ಶಾಸಕರ ಅಸಮಾಧಾನಕ್ಕೆ ಬಲಿಯಾಯಿತೇ ಅಧಿಕಾರಿಯ ದಕ್ಷತೆ? ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ!

    August 25, 2026

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026
    Facebook Twitter Instagram
    ಟ್ರೆಂಡಿಂಗ್
    • ಅರಕಲಗೂಡು: ಚಿರತೆ ದಾಳಿಗೆ ನಡುಗಿದ ಗ್ರಾಮಸ್ಥರು; ಜಾನುವಾರು ಸಾವು, ಅರಣ್ಯ ಇಲಾಖೆಯಿಂದ ಪಂಜರ ಸ್ಥಾಪನೆ
    • ಹೊಳೆನರಸೀಪುರ ಪುರಸಭೆ: ಶಾಸಕರ ಅಸಮಾಧಾನಕ್ಕೆ ಬಲಿಯಾಯಿತೇ ಅಧಿಕಾರಿಯ ದಕ್ಷತೆ? ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ!
    • ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
    • ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ
    • ಹೊಳೆನರಸೀಪುರ: ತಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: ವೈದ್ಯರ ನೇಮಕಕ್ಕೆ ಗುರುವಾರದವರೆಗೆ ಗಡುವು ನೀಡಿದ ಗ್ರಾಮಸ್ಥರು
    • ತುಮಕೂರು: ಪೆಟ್ರೋಲ್ ಸುರಿದು ಮಹಿಳೆ ಕೊಲೆಗೈದಿದ್ದ ಆರೋಪಿ ಸೆರೆ
    • ಮತದಾರರ ಕರಡು ಪಟ್ಟಿ ಪ್ರಕಟ: 2.37 ಲಕ್ಷ ಮತದಾರರು ಕರಡಿನಿಂದ ಡಿಲೀಟ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ಕೊನೆಯ ದಿನ
    • “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಚಿಕ್ಕನಾಯಕನ ಹಳ್ಳಿ ತಹಶೀಲ್ದಾರ್ ವಿರುದ್ಧ ದೂರು ನೀಡಿದ ಅಲೆಮಾರಿ ಕುಟುಂಬದ ಸದಸ್ಯರು
    ಚಿಕ್ಕನಾಯಕನಹಳ್ಳಿ December 23, 2021

    ಚಿಕ್ಕನಾಯಕನ ಹಳ್ಳಿ ತಹಶೀಲ್ದಾರ್ ವಿರುದ್ಧ ದೂರು ನೀಡಿದ ಅಲೆಮಾರಿ ಕುಟುಂಬದ ಸದಸ್ಯರು

    By adminDecember 23, 2021No Comments2 Mins Read
    chikkanayakana halli

    namma tumakuru

    ತುಮಕೂರು: ತಮ್ಮ ವಿರುದ್ಧ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ರವರು ಏಕಾಏಕಿ ನಿಂದಿಸಿ ಅವಮಾನಗೊಳಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ಅಲೆಮಾರಿ ಜನಾಂಗದ ಕುಟುಂಬಸ್ಥರು ಎಸ್.ಪಿ.ರವರಿಗೆ ದೂರು ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಕಳೆದ ತಿಂಗಳು ಸುರಿದ ಕುಂಭದ್ರೋಣ ಮಳೆಯಿಂದಾಗಿ ಚಿ.ನಾ.ಹಳ್ಳಿ ತಾಲ್ಲೋಕಿನ ಕಡೆಗೆಹಳ್ಳಿ ಗ್ರಾಮದ ಗುಂಡು ತೋಪಿನಲ್ಲಿ ಅಲೆಮಾರಿ ಜನಾಂಗದವರು ವಾಸಿಸುತ್ತಿದ್ದ ಗುಡಿಸಲುಗಳು ಜಲಾವೃತವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಸೂರು ಕಲ್ಪಿಸಲಾಗಿತ್ತು. ನಂತರ ಕೆಲ ದಿನಗಳ ನಂತರ ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್ ಬಂದು ಕೂಡಲೇ ತಮ್ಮ ಗುಡಿಸಲುಗಳಿಗೆ ತೆರಳುವಂತೆ ಒತ್ತಡ ಹೇರಿದ್ದಾರೆ.

    ಇದಕ್ಕೂ‌ ಮುನ್ನ ಅಲೆಮಾರಿ ಜನಾಂಗದ ಪರಮೇಶ್ ಎಂಬಾತ ತಹಶೀಲ್ದಾರ್ ರವರಿಗೆ ಮಳೆಯಿಂದಾಗಿ ಗುಡಿಸಲು ನಾಶವಾಗಿದೆ, ಈಗ ಗುಡಿಸಲಿಗೆ ಹೋಗಲು ಸಾಧ್ಯವಾಗುವುದಿಲ್ಲ, ಕನಿಷ್ಠ ಅದಕ್ಕೆ ಪರಿಹಾರ ನೀಡಿದರೆ ಗುಡಿಸಲು ಮರು ನಿರ್ಮಾಣ ಮಾಡಿಕೊಂಡು  ಬದುಕುತ್ತೇವೆಂದು ಮನವಿ ಸಲ್ಲಿಸಿರುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕಚೇರಿಗೆ ಬಂದು ಪರಿಹಾರದ ಚೆಕ್ ಪಡೆದುಕೊಂಡು ಹೋಗು ಎಂದು ತಿಳಿಸಿರುತ್ತಾರೆ.

    ಪರಿಹಾರ ಪಡೆಯಲು ಮರುದಿನ ಕಚೇರಿಗೆ ತೆರಳಿದ ಸಂದರ್ಭದಲ್ಲಿ ಏಕಾಏಕಿ ಪರಮೇಶ್ ಗೆ ಸಾರ್ವಜನಿಕರ ಮುಂದೆ ನಿಂದಿಸಿ 107, 109, ರೌಡಿಶೀಟರ್, ಗಡಿಪಾರು ಈ ಪದಗಳು ಗೊತ್ತಿಲ್ಲ ನಿನಗೆ, ಇವಲ್ಲವನ್ನೂ ನಿನ್ನ ಮೇಲೆ ಹಾಕಿಸುತ್ತೇನೆಂದು ಮನಸೋ ಇಚ್ಛೆ ನಿಂದಿಸಿದರು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿ.ನಾ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಬಂದಿರುವುದಾಗಿ ತಿಳಿಸಿದರು.

    ಇನ್ನು ನೊಂದವರ ಪರವಾಗಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ನಿಂತಿದ್ದು ವೇದಿಕೆಯ ಜಿಲ್ಲಾಧ್ಯಕ್ಷ ನಾಗಭೂಷಣ್ ಹಂದ್ರಾಳ್ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ನೌಕರ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ. ಕೂಡಲೇ ತಹಶೀಲ್ದಾರ್ ರವರ ಮೇಲೆ ಎಫ್.ಐ.ಆರ್.ದಾಖಲಿಸಬೇಕು.. ಇಲ್ಲವಾದಲ್ಲಿ ತಾವು ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದರು

    ಬಡವರ ನೆರವಿಗೆ ಧಾವಿಸಬೇಕಾದ ಅಧಿಕಾರಿಗಳೇ ಹೀಗೆ ಸೌಜನ್ಯ ಇಲ್ಲದ ರೀತಿಯಲ್ಲಿ ವರ್ತಿಸಿದರೆ ದಲಿತರು ನೊಂದವರು ಯಾರಬಳಿ ನ್ಯಾಯ ಕೇಳಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ

     ವರದಿ: ರಾಜೇಶ್ ರಂಗನಾಥ್ ತುಮಕೂರು

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಡೈರಿ ಕಟ್ಟಡದ ಪಿಲ್ಲರ್ ಕುಸಿದು ಬಿದ್ದು 10 ವರ್ಷದ ಶಾಲಾ ಬಾಲಕ ಸ್ಥಳದಲ್ಲೇ ಸಾವು!

    August 19, 2026

    ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ

    August 8, 2026

    ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!

    July 31, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಅರಕಲಗೂಡು: ಚಿರತೆ ದಾಳಿಗೆ ನಡುಗಿದ ಗ್ರಾಮಸ್ಥರು; ಜಾನುವಾರು ಸಾವು, ಅರಣ್ಯ ಇಲಾಖೆಯಿಂದ ಪಂಜರ ಸ್ಥಾಪನೆ

    August 26, 2026

    ಅರಕಲಗೂಡು: ತಾಲ್ಲೂಕಿನ ಕೊಣನೂರು ಹೋಬಳಿಯ ಕಟ್ಟೆಪುರ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಜಾನುವಾರುಗಳನ್ನು ತಿಂದುಹಾಕಿರುವ ಘಟನೆ ನಡೆದಿದ್ದು, ಇದರಿಂದ ಗ್ರಾಮದಲ್ಲಿ ತೀವ್ರ…

    ಹೊಳೆನರಸೀಪುರ ಪುರಸಭೆ: ಶಾಸಕರ ಅಸಮಾಧಾನಕ್ಕೆ ಬಲಿಯಾಯಿತೇ ಅಧಿಕಾರಿಯ ದಕ್ಷತೆ? ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ!

    August 25, 2026

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.