ಸಿದ್ಧರಬೆಟ್ಟದ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭವು ಜೂನ್ 9 ರಂದು ಸಿದ್ದರಬೆಟ್ಟದಲ್ಲಿ ನಡೆಯಲಿದೆ. ಜೂನ್ 9 ರಂದು ನಡೆಯಲಿರುವ ಈ ವಾರ್ಷಿಕೋತ್ಸವವು ಭಕ್ತಾದಿಗಳ ಸಹಕಾರದಿಂದ ಕಳೆದ 17 ವರ್ಷಗಳಿಂದ ಬಹಳ ಚೆನ್ನಾಗಿ ನಡೆದುಕೊಂಡು ಬರುತ್ತಿದೆ.
ಶ್ರೀ ಮಠದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀ ಮಠದಲ್ಲಿ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಕ್ತರ ಮನಸ್ಸಿಗೂ ಶ್ರೀಮಠಕ್ಕು ಬಹಳ ಅವಿನಾಭಾವ ಸಂಬಂಧ ಇದೆ.
ಸುಧಾ ಮೂರ್ತಿ ಅವರ ಸಲಹೆ ಮೇರೆಗೆ 18 ವರ್ಷಗಳ ಹಿಂದೆ ಈ ಸಾಮೂಹಿಕ ವಿವಾಹವನ್ನು ಪ್ರಾರಂಭ ಮಾಡಿದ್ದೇವೆ. ಅಲ್ಲಿನಿಂದ ಇಲ್ಲಿಯವರೆಗೂ ಶ್ರೀ ಮಠದಲ್ಲಿ ಸುಮಾರು 800ಕ್ಕೂ ಹೆಚ್ಚು ಸಾಮೂಹಿಕ ವಿವಾಹಗಳು ನಡೆದಿವೆ. ಇದರಿಂದ ಬಡವರಿಗೆ ಬಹಳ ಅನುಕೂಲ ಆಗಿದೆ.
ಹಾಗೆಯೇ ಉನ್ನತ ಮಟ್ಟದ ವ್ಯಾಸಂಗ ಮಾಡುತ್ತಿರುವರಿಗೆ ವಿಷೇಶ ಪ್ರಶಸ್ತಿ ಶ್ರೀ ಮಠವು ಪ್ರತಿ ವರ್ಷ ನೀಡುತ್ತಾ ಬಂದಿದ್ದು, ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ 18ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ಶ್ರೀಮದ್ ರಂಭಾಪುರಿ ವೀರಸಿಂಹಾದೀಶ್ವರ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ವಾದರ ದಿವ್ಯ ಸಾನಿಧ್ಯದಲ್ಲಿ, ದಿನಾಂಕ: 09/06/2024ರ ಭಾನುವಾರ ಸುಮಾರು 50ಕ್ಕೆ ಹೆಚ್ಚು ನವ ವಧು ವರರಿಗೆ, ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಸಿದ್ದರಬೆಟ್ಟದ ಶ್ರೀ ರಂಭಾಪುರಿ ಖಾಸ ಶಾಖ ಮಠದ ಮಠಾಧೀಶರಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ, ಈ ಶುಭ ಉಚಿತ ಸಾಮೂಹಿಕ ಆದರ್ಶ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದೆ.
ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಗಣ್ಯಾದಿ ಗಣ್ಯರು ಮಠದ ಸುತ್ತು ಭಕ್ತರು ಆಗಮಿಸುತ್ತಿದ್ದು, ಸುತ್ತ ಮುತ್ತಲಿನ ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ, ಈ ಶುಭ ವಿವಾಹವನ್ನ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296