nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಜೂ. 19ರಂದು ರಾಷ್ಟ್ರೀಯ PM-VBRY ಕಾರ್ಯಕ್ರಮ: ಫಲಾನುಭವಿಗಳಿಗೆ ₹2,400 ಕೋಟಿ ಪ್ರೋತ್ಸಾಹ ಧನ ವಿತರಿಸಲಿರುವ ಪ್ರಧಾನಿ ಮೋದಿ

    June 18, 2026

    ಕರ್ನಾಟಕ ವಿಧಾನ ಪರಿಷತ್ ಚುನಾವಣೆ ವೇಳೆ ನಡೆದ ಹಲವು ಸ್ವಾರಸ್ಯಕರ ಘಟನೆಗಳು ಇಲ್ಲಿವೆ!

    June 18, 2026

    ದಸಂಸ ಎಲ್ಲಾ ಬಣಗಳನ್ನು ಒಗ್ಗೂಡಿಸಿ ತಾಲೂಕು ಒಕ್ಕೂಟ ರಚನೆಗೆ ಸರಗೂರಿನಲ್ಲಿ ಪೂರ್ವಭಾವಿ ಸಭೆ

    June 18, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಜೂ. 19ರಂದು ರಾಷ್ಟ್ರೀಯ PM-VBRY ಕಾರ್ಯಕ್ರಮ: ಫಲಾನುಭವಿಗಳಿಗೆ ₹2,400 ಕೋಟಿ ಪ್ರೋತ್ಸಾಹ ಧನ ವಿತರಿಸಲಿರುವ ಪ್ರಧಾನಿ ಮೋದಿ
    • ಕರ್ನಾಟಕ ವಿಧಾನ ಪರಿಷತ್ ಚುನಾವಣೆ ವೇಳೆ ನಡೆದ ಹಲವು ಸ್ವಾರಸ್ಯಕರ ಘಟನೆಗಳು ಇಲ್ಲಿವೆ!
    • ದಸಂಸ ಎಲ್ಲಾ ಬಣಗಳನ್ನು ಒಗ್ಗೂಡಿಸಿ ತಾಲೂಕು ಒಕ್ಕೂಟ ರಚನೆಗೆ ಸರಗೂರಿನಲ್ಲಿ ಪೂರ್ವಭಾವಿ ಸಭೆ
    • ಬೀದರ್: ಬೀಜ ವಿತರಣೆಯಲ್ಲಿ ರೈತರಿಗೆ ವಂಚನೆ
    • ತಿಪಟೂರು: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ ಬುಕ್, ಲೇಖನಿ ಸಾಮಗ್ರಿ ವಿತರಣೆ
    • ರದ್ದಾದ ಪತ್ರಿಕೆಗಳ ಶೀರ್ಷಿಕೆಗಳ ಮರುಸ್ಥಾಪನೆಗೆ ದಂಡ ಪಾವತಿಸಲು ಜೂನ್ 30 ಕೊನೆಯ ದಿನ
    • ಕುರುಗೋಡಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ: ಜಾಗೃತಿ ಜಾಥಾ, ಉದ್ದಿಮೆಗಳ ಮೇಲೆ ದಾಳಿ: ಬಾಲಕನ ರಕ್ಷಣೆ
    • ಬಳ್ಳಾರಿಯಲ್ಲಿ ಜೂನ್ 19ರಂದು ಪಿಎಂ: ವಿಬಿಆರ್‌ ವೈ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಾಂಧಿ ಎಂಬ ಅಸ್ತ್ರದಿಂದಲೇ ಭದ್ರ ಭಾರತದ ಬುನಾದಿ
    ರಾಷ್ಟ್ರೀಯ ಸುದ್ದಿ October 2, 2023

    ಗಾಂಧಿ ಎಂಬ ಅಸ್ತ್ರದಿಂದಲೇ ಭದ್ರ ಭಾರತದ ಬುನಾದಿ

    By adminOctober 2, 2023No Comments2 Mins Read
    gandhi

    Provided by
    Provided by

    ಮೋಹನ್ ದಾಸ್ ಕರಮ್ ಚಂದ್ರ ಗಾಂಧಿ ಎನ್ನುವುದು ಕೇವಲ ಹೆಸರಲ್ಲ ಇದು ಭಾರತದ ಆತ್ಮ. ಸ್ವತಂತ್ರ ಹೋರಾಟದ ಅಸ್ತ್ರವಾಗಿದ್ದ ಗಾಂಧಿ ವಿಚಾರಗಳು ಇಂದಿಗೂ ಪ್ರಸ್ತುತ.

    ಅಕ್ಟೋಬರ್ 2 ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದು ಇಡೀ ಮಾನವ ಕುಲಕ್ಕೆ ನೀಡಿದ ಕೊಡುಗೆಗಳ ಸ್ಮರಣೆ ಮಾಡಲೇಬೇಕು. ಈ ದಿನವನ್ನ ಇಡೀ ವಿಶ್ವವೇ ಶಾಂತಿ ದಿನವೆಂದು ಆಚರಣೆ ಮಾಡುತ್ತದೆ. ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗಗಳು ಜಗತ್ತಿನ ಅನೇಕ ನಾಯಕರುಗಳನ್ನು ಮಹಾತ್ಮರ ವ್ಯಕ್ತಿತ್ವಕ್ಕೆ ಪ್ರಭಾವಿತಗೊಳಿಸಿದ್ದವು.

    ಗ್ರಾಮೀಣ ಸರ್ವಾಂಗಿನ ಅಭಿವೃದ್ಧಿ ಇಂದಾಗಿ ದೇಶದ ಅಭಿವೃದ್ಧಿವಾಗಲಿದೆ ಎಂಬ ದೃಢವಾದ ನಂಬಿಕೆ ಅವರದಾಗಿತ್ತು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಶತಕಗಳ ಹಿಂದೆಯೇ ಯೋಚನೆ ಮಾಡಿದ್ದರು.

    ಅದರಂತೆ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಮಹತ್ವವನ್ನು ಗಾಂಧೀಜಿಯವರು ನೀಡುತ್ತಿದ್ದರು. ಅದರ ಪರಿಕಲ್ಪನೆಯ ಪಲವಾಗಿ ಈಗ ಪಂಚಾಯತ್ ರಾಜ್ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಸದೃಢವಾಗಿ ಮತ್ತು ಪ್ರಗತಿ ಪರವಾಗಿ ನಡೆಸಿಕೊಂಡು ಬರುತ್ತಿದೆ.

    ಪ್ರಜಾಪ್ರಭುತ್ವದ ತಳಹದಿಯ ಮೇಲೆ ಗ್ರಾಮ ಸ್ವರಾಜ್ ಗಾಂಧೀಜಿ ಕಂಡ ಕಲ್ಪನೆಯ ವಾಸ್ತುವತೆಯನ್ನು ದೇಶ ನೋಡುತ್ತಿದೆ.ಮಹಾತ್ಮ ಗಾಂಧೀಜಿಯವರ ಕರ್ನಾಟಕದ ನೆಲದಲ್ಲಿ ಅದು ಬೆಳಗಾವಿ ನಗರದಲ್ಲಿ ಮೊದಲ ಬಾರಿಗೆ ಗಾಂಧೀಜಿಯವರ 1924 ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.

    ಈ ಅಧಿವೇಶನಕ್ಕೆ ಈಗ ಒಂದು ನೂರು ವರ್ಷಗಳು ತುಂಬುತ್ತಿವೆ. ಬೆಳಗಾವಿ ಹಾಗೂ ಕರ್ನಾಟಕದ ಜನತೆಯ ಹೆಮ್ಮೆಯ ವಿಷಯವಾಗಿದೆ.

    1918ರಲ್ಲಿ ಬಿಹಾರ್ ಮತ್ತು ಚಂಪಾರನ್ ಚಳುವಳಿ, ಅಸಹಕಾರ ಚಳುವಳಿ, ನಾಗರಿಕ ಅಸಹಕಾರ ಚಳುವಳಿ, ಸ್ವರಾಜ್ ಮತ್ತು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಗಾಂಧೀಜಿ ವಹಿಸಿದ ಪ್ರಮುಖ ಸ್ವಾತಂತ್ರ್ಯ ಚಳುವಳಿಗಳಾಗಿದ್ದವು.

    ಗಾಂಧೀಜಿಯವರು ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಅವರ ನೇತೃತ್ವ ಎಷ್ಟು ಪ್ರಮುಖವಾಗಿತ್ತು ಎಂದರೆ ಜಗತ್ತೇ ಅವರ ಕಡೆ ನೋಡುವಂತಾಗಿತ್ತು. ಬ್ರಿಟಿಷರು ಅರೆ ಬತ್ತಲೆ ಪಕೀರ ನಮ್ಮನ್ನು ಏನು ಮಾಡಬಲ್ಲ ಎಂಬ ಭ್ರಮೆಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಅಪಹಾಸ್ಯ ಮಾಡುತ್ತಿತ್ತು. ಆದರೆ ಮಹಾತ್ಮ ಗಾಂಧಿ ಸತ್ಯ ಮತ್ತು ಅಹಿಂಸ ಚಳುವಳಿಗಳಿಂದ ಸೂರ್ಯ ಮುಳುಗಲಾರದ ಸಾಮ್ರಾಜ್ಯವನ್ನು ಯಾವುದೇ ಅಸ್ತ್ರ ಶಸ್ತ್ರ ಗಳಿಲ್ಲದೆ ಕೊನೆಗೊಳಿಸಿದರು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಗಡಿನಾಡಿನ ಗಾಂಧಿ ಅಬ್ದುಲ್ ಗಫಾರ್ ಖಾನ್ ಪಂಡಿತ್ ಜವಾಹರ್ಲಾಲ್ ನೆಹರು ಸರ್ದಾರ್ ವಲ್ಲಭ ಪಟೇಲ್ ಮೌಲಾನ ಅಜಾದ್ ಸರೋಜಿನಿ ನಾಯ್ಡು ಅನೇಕ ಅನೇಕ ಸ್ವತಂತ್ರ ಸೇನಾನಿಗಳು ಅವರ ನೇತೃತ್ವದಲ್ಲಿ ಸ್ವತಂತ್ರ ಸಂಗ್ರಾಮಕ್ಕೆ ಧುಮಿಕಿದರು.

    ಹಲವಾರು ಬಾರಿ ಜೈಲವಾಸ ಅನುಭವಿಸಿದ ಗಾಂಧೀಜಿಯವರು ಅನೇಕ ಉಪವಾಸ ಸತ್ಯಾಗ್ರಗಳನ್ನು ಕೂಡ ಮಾಡಿದರು. ಅದರಲ್ಲಿ ಮಹಾರಾಷ್ಟ್ರದ ಪುಣೆ ಅಲ್ಲಿ ನಡೆದಿರುವಂತಹ 21 ದಿನಗಳ ಉಪವಾಸ ಮತ್ತು ಭಾರತ ಸ್ವತಂತ್ರ ನಂತರ 1947 ರಲ್ಲಿ ಭಾರತ ವಿಭಜನೆಯಾದ ನಂತರ ಕೋಮಗಲಭೆಗಳನ್ನು ನಿಯಂತ್ರಿಸಲು ಗಾಂಧೀಜಿ ಮತ್ತೆ ತಮ್ಮ ಸತ್ಯ ಮತ್ತು ಅಹಿಂಸೆ ಅಸ್ತ್ರಗಳನ್ನು ಹಿಡಿದು ಉಪವಾಸ ಮಾಡಿದರು.

    ಆ ಕರಾಳ ದಿನಗಳಲ್ಲಿ ಅದೆಂತ ಧೈರ್ಯ ಬಾಪೂಜಿಯವರಾಗಿತ್ತೆಂದರೆ ನಂಬಿದ ಸಿದ್ಧಾಂತಗಳನ್ನು ಅಂತಹ ಕಠೋರ ವ್ಯಕ್ತಿಗಳು ಕೂಡ ಮನ್ನಣೆ ನೀಡುತ್ತಾರೆ ಎಂಬುದೇ ಆ ಕ್ಷಣಗಳಲ್ಲಿ ಸಾಕ್ಷಿ ಉಪವಾಸ ಸತ್ಯಾಗ್ರಹದಿಂದ ಕೋಮ ದಂಗೆಗಳನ್ನು ನಿಲ್ಲಿಸಿದ ಹೆಗ್ಗಳಿಕೆ ಮಹಾತ್ಮ ಗಾಂಧೀಜಿಯವರದಾಗಿತ್ತು. ಮಹಾತ್ಮ ಗಾಂಧೀಜಿಯವರನ್ನು 1948 ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿದ ಆದರೆ ಈ ಜಗತ್ತು ಆ ಮೂರು ಗುಂಡುಗಳನ್ನು ಮೂರು ಪದಕಗಳೆಂದು ಮಾರ್ಮಿಕವಾಗಿ ಹೇಳಿತು.

    admin
    • Website

    Related Posts

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಜೂ. 19ರಂದು ರಾಷ್ಟ್ರೀಯ PM-VBRY ಕಾರ್ಯಕ್ರಮ: ಫಲಾನುಭವಿಗಳಿಗೆ ₹2,400 ಕೋಟಿ ಪ್ರೋತ್ಸಾಹ ಧನ ವಿತರಿಸಲಿರುವ ಪ್ರಧಾನಿ ಮೋದಿ

    June 18, 2026

    ತುಮಕೂರು: ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜಾರ್ ಯೋಜನೆ (PM–VBRY)ಯ ಯಶಸ್ವಿ ಅನುಷ್ಠಾನದ ಅಂಗವಾಗಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ…

    ಕರ್ನಾಟಕ ವಿಧಾನ ಪರಿಷತ್ ಚುನಾವಣೆ ವೇಳೆ ನಡೆದ ಹಲವು ಸ್ವಾರಸ್ಯಕರ ಘಟನೆಗಳು ಇಲ್ಲಿವೆ!

    June 18, 2026

    ದಸಂಸ ಎಲ್ಲಾ ಬಣಗಳನ್ನು ಒಗ್ಗೂಡಿಸಿ ತಾಲೂಕು ಒಕ್ಕೂಟ ರಚನೆಗೆ ಸರಗೂರಿನಲ್ಲಿ ಪೂರ್ವಭಾವಿ ಸಭೆ

    June 18, 2026

    ಬೀದರ್: ಬೀಜ ವಿತರಣೆಯಲ್ಲಿ ರೈತರಿಗೆ ವಂಚನೆ

    June 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.