ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ ಭೀಕರ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಪತಿ ಸೆಲ್ವಿನ್ ಫ್ರಾನ್ಸಿಸ್ ಹಾಗೂ ಮೃತ ಪತ್ನಿ ಇಂದು ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ 6 ತಿಂಗಳಿಂದ ದೂರವಾಗಿದ್ದರು. ನೆನ್ನೆ ಪತ್ನಿ ಜೊತೆ ಜಗಳ ತೆಗೆದು ಡಿಸಿಪಿ ಕಚೇರಿಯ ಪಕ್ಕದ ರಸ್ತೆಯಲ್ಲಿ ಇರಿದು ಕೊಂದಿದ್ದಾನೆ. ಸ್ಥಳಕ್ಕೆ ಕೋರಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲ ತಿಂಗಳಿಂದ ಗಂಡನಿಂದ ದೂರವಿದ್ದರೂ, ತಾನು ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆ ಮಾಡುತ್ತಿದ್ದಾನೆಂದು ಪತಿ ವಿರುದ್ಧ ಕೋರಮಂಗಲ ಠಾಣೆಗೆ ನಿನ್ನೆ ಮಧ್ಯಾಹ್ನ ಬಂದು ಪತ್ನಿ ದೂರು ನೀಡಿದ್ದಾರೆ. ದೂರು ಹಿನ್ನೆಲೆ ಪತಿ ಸೆಲ್ವಿನ್ ಫ್ರಾನ್ಸಿಸ್ ಗೆ ಕೋರಮಂಗಲ ಠಾಣೆಯಿಂದ ಕರೆ ಬಂದಿದೆ. ಈ ವೇಳೆ ನಾನು ದೂರದಲ್ಲಿದ್ದೇನೆ ಎಂದು ಪೊಲೀಸರಿಗೆ ಹೇಳಿ, ಠಾಣೆ ಬಳಿಯೇ ಸೆಲ್ವಿನ್ ಬಂದಿದ್ದಾನೆ. ಪತ್ನಿ ಠಾಣೆಯಿಂದ ಹೊರ ಬರುವುದನ್ನೇ ಕಾದು ಕುಳಿತಿದ್ದ ಆತ, ಪತ್ನಿ ಹೊರ ಬರುತ್ತಿದ್ದಂತೆ ಮಾತನಾಡಿ ಕೊಂಚ ದೂರ ಕರೆದೊಯ್ದಿದ್ದಾನೆ. ನಂತರ ಚಾಕುವಿನಿಂದ ದಾಳಿ ಮಾಡಿ ಪತ್ನಿ ಇಂದು ಹತ್ಯೆಗೈದು ಎಸ್ಕೇಪ್ ಆಗಿದ್ದಾನೆ. ಇದೀಗ ಪರಾರಿಯಾಗಿರುವ ಸೆಲ್ವಿನ್ ಫ್ರಾನ್ಸಿಸ್ ಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA