ಪೂರ್ತಿ ರಷ್ ಆದ ಬಸ್ ನಲ್ಲಿ ಮಹಿಳೆಯರಿಬ್ಬರು ಸೀಟ್ ಸಿಗದೆ ಮಗುವನ್ನು ಲಗೇಜ್ ಕ್ಯಾರಿಯರ್ ನಲ್ಲಿ ಮಲಗಿಸಿದ ಘಟನೆ ವರದಿಯಾಗಿದೆ. ಸೋಮವಾರ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಯಚೂರಲ್ಲಿ ಬಹುತೇಕ ಸರಕಾರಿ ಬಸ್ ಗಳು ಫುಲ್ ರಶ್ ಆಗಿವೆ. ಹೀಗಾಗಿ ಸೀಟು ಸಿಗದೆ ತಾಯಿಯೊಬ್ಬರು ಲಗೇಜು ಸಮೇತ ಮಗುವನ್ನು ಕ್ಯಾರಿಯರ್ ನಲ್ಲಿ ಮಲಗಿಸಿದ್ದರು.
ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್ ನಲ್ಲಿ ಈ ಘಟನೆ ನಡೆದಿದೆ. ಇನ್ನೂ ಬಸ್ ಹತ್ತಿ ಒಳಗೆ ಬಂದವರೆಲ್ಲರೂ ತಾಯಿಯ ಐಡಿಯಾ ಕಂಡು ಫಿದಾ ಆಗಿದ್ದರು. ತಮ್ಮ ಕೈಯಲ್ಲಿದ್ದ ಮೊಬೈಲ್ ಹಿಡಿದು ವೀಡಿಯೊ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್ ಪ್ರಯಾಣಿಕರಿಂದ ತುಂಬಿ ಹೋಗಿತ್ತು.
ಉಸಿರಾಡಲು ಕಷ್ಟ ಎಂಬಂತೆ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು. ಇದರೊಟ್ಟಿಗೆ ಬಿಸಿಲನಾಡು ಎನ್ನಿಸಿಕೊಂಡಿರುವ ರಾಯಚೂರಿನಲ್ಲಿ ತಾಪಮಾನ ಏರಿಕೆ ಆಗುತ್ತಲೇ ಇದೆ. ಸೀಟ್ ಸಿಗದೆ ನಿಂತಿದ್ದ ಮಹಿಳೆಯೊಬ್ಬರು, ಮಗುವನ್ನು ಹಿಡಿದುಕೊಂಡು ಪ್ರಯಾಣಿಸುವುದು ಕಷ್ಟ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ಕೈಯಲ್ಲಿದ್ದ ಲಗೇಜ್ ಗಳನ್ನು ಕ್ಯಾರಿಯರ್ ನಲ್ಲಿ ಹಾಕಿ, ಮಗುವನ್ನು ಮಲಗಿಸಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296