ಪೀಚ್ ಹಣ್ಣಿನ ಪ್ರಯೋಜನಗಳು ಹಲವು!:
ಉಷ್ಣವಲಯದ ಮೂಲ ಪ್ರಭೇದವಾಗಿರುವ ಪೀಚ್ ಹಣ್ಣಿನ್ನು ವಿಶ್ವದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಒಳಗೊಂದು ಸ್ವಲ್ಪ ದೊಡ್ಡ ಬೀಜ, ಸುತ್ತೆಲ್ಲ ತಿರುಳು ಹೊಂದಿರುವ ಈ ಹಣ್ಣಿನ ಮೇಲ್ಮಯಲ್ಲಿ ತುಪ್ಪಳದಂಥ ಸಣ್ಣ ರೋಮಗಳನ್ನು ಕಾಣಬಹುದು. ಸಿಹಿ ರುಚಿಯ, ರಸಭರಿತವಾದ ಈ ಹಣ್ಣು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ. ಹಲವಾರು ವಿಟಮಿನ್ ಗಳು, ಉತ್ಕರ್ಷಣ ನಿರೋಧಕಗಳು, ನಾರು ಸೇರಿದಂತೆ ದೇಹಕ್ಕೆ ಪೋಷಣೆ ಒದಗಿಸಬಲ್ಲದು. ಅದರಲ್ಲೂ ವಿಟಮಿನ್ ಸಿ ಹೇರಳವಾಗಿದ್ದು, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕುಂಬಳಕಾಯಿ ತಿರುಳಿನ ಫೇಸ್ ಪ್ಯಾಕ್ ಮಾಡಿ, ಫುಲ್ ಯಂಗ್ ಆಗಿ!:
ನೈಸರ್ಗಿಕ ಕುಂಬಳಕಾಯಿಯ ತಿರುಳಿನಿಂದ ಮನೆಯಲ್ಲಿ ತಯಾರಿಸಬಹುದು. ಫೇಸ್ ಪ್ಯಾಕ್ ಗಳು ಚರ್ಮವನ್ನು ಯಂ ಆಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಕುಂಬಳಕಾಯಿ ಫೇಸ್ ಪ್ಯಾಕ್ಗಳಲ್ಲಿ ಬಳಸಲು, ಮೊದಲು ಅದನ್ನು ಬೇಯಿಸಿ ಮತ್ತು ಮೃದುವಾದ ಪೇಸ್ಟ್ ಮಾಡಬೇಕು. ಕುಂಬಳಕಾಯಿಯ ತಿರುಳಿನ ಪೇಸ್ಟ್, ಮೊಸರು, ಸ್ವಲ್ಪ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಮುಖದ ಮೇಲೆ ಹಚ್ಚಿ ಉಲ್ಲಾಸಕರ ಅನುಭವ ಜೊತೆಗೆ ಹೊಳೆಯುವ ಚರ್ಮ ಪಡೆಯಿರಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296