nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ

    October 10, 2026

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026
    Facebook Twitter Instagram
    ಟ್ರೆಂಡಿಂಗ್
    • ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ
    • ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?
    • ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?
    • ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…
    • ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ
    • ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ
    • ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ
    • ಕೆಇಎ ಯುಜಿ ನೀಟ್ — 2026: ವೈದ್ಯಕೀಯ ಸೀಟುಗಳ ಆನ್‌ ಲೈನ್ ಸ್ಟ್ರೇ ವೇಕೆನ್ಸಿ ಸುತ್ತು ಪ್ರಕಟ; ಅಕ್ಟೋಬರ್ 13 ರಿಂದ ಹೊಸ ನೋಂದಣಿ ಆರಂಭ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಲವು ವಿವಾದಗಳಿಗೆ ಕಾರಣವಾಗಿದ್ದ ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ವರ್ಗಾವಣೆ
    ತುಮಕೂರು December 16, 2023

    ಹಲವು ವಿವಾದಗಳಿಗೆ ಕಾರಣವಾಗಿದ್ದ ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ವರ್ಗಾವಣೆ

    By adminDecember 16, 2023No Comments2 Mins Read
    k shrinivas
    • ನೂತನ ಜಿಲ್ಲಾಧಿಕಾರಿಗಳಾಗಿ  ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ

    ತುಮಕೂರು ಜಿಲ್ಲೆಯಲ್ಲಿ ಹಲವು ವಿವಾದಗಳಿಗೆ ಕಾರಣವಾಗಿದ್ದ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಅವರನ್ನು ವರ್ಗಾವಣೆ ಮಾಡಲಾಗಿದ್ದು,  ಇದೀಗ ತುಮಕೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ  ಶುಭ ಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ಕಳೆದ ಸುಮಾರು 6 ತಿಂಗಳ ಹಿಂದೆ ತುಮಕೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ, ಶ್ರೀನಿವಾಸ್ ಕೆ. ಇವರು,  ಈ ಹಿಂದೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಇನ್ನಿತರೆ ಭಾಗದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

    ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ, ವಿಧಾನ ಸಭಾ ಚುನಾವಣೆಗೂ ಮುನ್ನ, ಮತದಾರರ ಮಾಹಿತಿ ಸಂಗ್ರಹಿಸಿದ ಸಂಸ್ಥೆಗೆ ನೆರವು ನೀಡಿದ ಆರೋಪದ ಮೇಲೆ ಚುನಾವಣಾ ಆಯೋಗದ ನಿರ್ದೇಶನದಂತೆ ಅಮಾನತು ಮಾಡಲಾಗಿತ್ತು.

    ತದ ನಂತರದಲ್ಲಿ, ತುಮಕೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಮಧ್ಯೆ ಕಳೆದ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಆಚರಿಸುವ ನೆಪದಲ್ಲಿ ನಗರದ ಹೊರವಲಯದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ  ಸಿನಿಮಾದ ಅಶ್ಲೀಲ ಹಾಡುಗಳಿಗೆ  ಡಾನ್ಸ್ ಮಾಡಲಾಗಿದೆ ಎಂಬ ವಿಷಯವು ಕೆಲವು ಪತ್ರಿಕೆ, ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ರಾಜ್ಯದ ನೈಜ ಹೋರಾಟಗಾರರ ವೇದಿಕೆಯವರು ಮುಖ್ಯಮಂತ್ರಿಗಳು,  ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಕಂದಾಯ ಮಂತ್ರಿಗಳು, ಡಿಪಿಎಆರ್, ರಾಜ್ಯ  ಪೊಲೀಸ್ ಮಹಾನಿರ್ದೇಶಕರು  ಮತ್ತು ರಾಜ್ಯ  ಮಕ್ಕಳ  ರಕ್ಷಣಾ ಆಯೋಗದಲ್ಲಿ ದೂರು ನೀಡಿದ್ದರು. ಹಾಗೂ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೂಡ ದೂರು ನೀಡಲಾಗಿತ್ತು.

    ಅಲ್ಲದೇ,  ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಈ ಬಗ್ಗೆ  ಸುಮೋಟೋ ಕೇಸು( ಕೇಸ್ ನಂಬರ್: 103/2023) ದಾಖಲಿಸಿಕೊಳ್ಳುವುದರೊಂದಿಗೆ  ತನಿಖೆ ಮತ್ತು ವಿಚಾರಣೆ ನಡೆಸಲು ತ್ರಿಸದಸ್ಯತ್ವ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಹಾಗೂ ದಿನಾಂಕ: 15-12-2023ರಂದು  ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಹಂದ್ರಾಳ್ ನಾಗಭೂಷಣ್ ಅವರ ತಂಡವು ದೂರನ್ನು ಕೂಡ ದಾಖಲಿಸಲಾಗಿದೆ.

    ಈ ಎಲ್ಲ ವಿದ್ಯಮಾನಗಳ ಮೇರೆಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಇವರನ್ನು ಸರ್ಕಾರವು ವರ್ಗಾವಣೆ ಮಾಡಿ, ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಈ ಹಿಂದೆ ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದ ಶುಭಕಲ್ಯಾಣ್ ಐಎಎಸ್  ಇವರನ್ನು ತುಮಕೂರು  ಜಿಲ್ಲಾಧಿಕಾರಿಯಾಗಿ ಸರ್ಕಾರವು ನೇಮಿಸಿದ್ದು,  ನೂತನ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ  ಯಾವ ರೀತಿ ಕೆಲಸ ಮಾಡುತ್ತಾರೆಂದು  ಜನರು ನಿರೀಕ್ಷೆಯಲ್ಲಿದ್ದಾರೆ.

    ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಶುಭ ಕಲ್ಯಾಣ್:

    shubha kalyan ias

    ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್  2014ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿಧರೆ ಆಗಿರುವ ಇವರು, ಈ ಹಿಂದೆ 2020ರ ಜನವರಿಯಿಂದ ಎರಡು ವರ್ಷಗಳ ಕಾಲ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ದರು.

    ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಈ ಆಡಳಿತ ವಿಭಾಗದಲ್ಲಿ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಇವರು ಕೆಲಸ ಮಾಡುತ್ತಿದ್ದರು.

    ಇಂದು ಸಹಕಾರ ಸಚಿವ ರಾಜಣ್ಣ ಅವರು ನೂತನ ಜಿಲ್ಲಾಧಿಕಾರಿ ಶುಭ ಕಲ್ಯಾಣ್   ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.

    admin
    • Website

    Related Posts

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026

    ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ

    October 10, 2026

    ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ

    October 10, 2026

    Comments are closed.

    Our Picks

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026

    ನಾನಾ ಪಾಟೇಕರ್ ಆಸ್ತಿ–ಪಾಸ್ತಿ ಎಷ್ಟು ಗೊತ್ತಾ? ಅವರ ಕುಟುಂಬದ ಬಗ್ಗೆ ಇಲ್ಲಿದೆ ರಹಸ್ಯಕರ ಮಾಹಿತಿ!

    October 9, 2026

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ

    October 10, 2026

    ಬೆಂಗಳೂರು/ತುಮಕೂರು: ಮೈಸೂರು ದಸರೆಯ ಸಾಂಸ್ಕೃತಿಕ ಪರಂಪರೆಯನ್ನು ಕಲ್ಪತರು ನಾಡಿನಲ್ಲೂ ಮರುಸೃಷ್ಟಿಸುವ ಸಂಕಲ್ಪದೊಂದಿಗೆ ರೂಪುಗೊಂಡಿರುವ ‘ತುಮಕೂರು ದಸರಾ–2026’ಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.…

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.