ತುಮಕೂರು: ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ತುಮುಲ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 10 ತಾಲ್ಲೂಕು ಸೇರಿದ್ದಂತೆ 10 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ತುಮುಲ್ ಎಲೆಕ್ಷನ್ ಗೆ ನವೆಂಬರ್ 10 ರಂದು ಮತದಾನ ನಡೆದಿತ್ತು.
ಚುನಾವಣೆಯಲ್ಲಿ 21ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1,119 ಮತಗಳ ಪೈಕಿ 1,188 ಮತಗಳು ಚಲಾವಣೆ ಗೊಂಡಿದ್ದವು.
ಫಲಿತಾಂಶದ ವಿವರ:
ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ ಬೆಂಬಲಿಗ ಅಭ್ಯರ್ಥಿಗೆ ಭರ್ಜರಿ ಜಯಗಳಿಸಿದ್ದಾರೆ. 82 ಮತ ಪಡೆದು ಬುಳ್ಳೇನಹಳ್ಳಿ ಪ್ರಕಾಶ್ ಜಯಗಳಿಸಿದ್ದಾರೆ.
ಗುಬ್ಬಿ ಕ್ಷೇತ್ರದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಪತ್ನಿ ಭಾರತಿ ಶ್ರೀನಿವಾಸ್ ಜಯಗಳಿಸಿದ್ದಾರೆ. 68 ಮತಗಳನ್ನ ಪಡೆದು ಭಾರತೀ ಶ್ರೀನಿವಾಸ್ ಗೆಲುವು ದಾಖಲಿಸಿದ್ದಾರೆ.
ತಿಪಟೂರಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಪ್ರಕಾಶ್ ಜಯಗಳಿಸಿದ್ದಾರೆ.
ತುಮಕೂರು ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಂಜೇಗೌಡ ಜಯಗಳಿಸಿದ್ದಾರೆ.
ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿ . ಸಿದ್ದಗಂಗಯ್ಯ ಗೆಲುವು ದಾಖಲಿಸಿದ್ದಾರೆ.
ತುರುವೇಕೆರೆ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಮಹಾಲಿಂಗಯ್ಯ ಭರ್ಜರಿ ಗೆಲುವು.
ಮಧುಗಿರಿಯಲ್ಲಿ ಕೊನೆಗೂ ಕೆ. ಎನ್ ರಾಜಣ್ಣ ಬೆಂಬಲಿಗನ ಜಯಗಳಿಸಿದ್ದಾರೆ. 61 ಮತಗಳನ್ನ ಪಡೆದು ನಾಗೇಶ್ ಬಾಬು ಗೆಲುವು ದಾಖಲಿಸಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಎಂದಿನಂತೆ ಎಸ್.ಆರ್. ಗೌಡ ಗೆಲುವು.
ಕುಣಿಗಲ್ ನಲ್ಲಿ ಎಂದಿನಂತೆ ಡಿ. ಕೃಷ್ಣಕುಮಾರ್ ಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. 126 ಮತಗಳನ್ನ ತೆಗೆದುಕೊಂಡು ಡಿ.ಕೃಷ್ಣಕುಮಾರ್ ಗೆಲುವು ಸಾಧಿಸಿದ್ದಾರೆ.
ಪಾವಗಡದಲ್ಲಿ ಚಂದ್ರಶೇಖರ್ ರೆಡ್ಡಿ ಗೆಲುವು ದಾಖಲಿಸಿದ್ದು, ಒಂದು ಮತದಿಂದ ಗೆಲುವು ಪಡೆದ ಚಂದ್ರಶೇಖರ್ ರೆಡ್ಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx