nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ
    • ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಗರ ಸ್ಥಳೀಯ ಸಂಸ್ಥೆ: ಅನಧಿಕೃತ ಆಸ್ತಿಗಳನ್ನು ಬಿ–ಖಾತೆಯಲ್ಲಿ ದಾಖಲಿಸಲು 3 ತಿಂಗಳ ಕಾಲಾವಕಾಶ
    ತುಮಕೂರು February 19, 2025

    ನಗರ ಸ್ಥಳೀಯ ಸಂಸ್ಥೆ: ಅನಧಿಕೃತ ಆಸ್ತಿಗಳನ್ನು ಬಿ–ಖಾತೆಯಲ್ಲಿ ದಾಖಲಿಸಲು 3 ತಿಂಗಳ ಕಾಲಾವಕಾಶ

    By adminFebruary 19, 2025No Comments2 Mins Read
    shubha kalyan

    ತುಮಕೂರು:  ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳನ್ನು ಹೊಂದಿರುವವರು ಬಿ–ಖಾತಾಗೆ ದಾಖಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ಕೊಟ್ಟಿದೆ. ಬಿ–ಖಾತಾ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು/ನಿವೇಶನದಾರರು ಮೂರು ತಿಂಗಳೊಳಗೆ ಬಿ–ಖಾತಾಗೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


    Provided by
    Provided by

    ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು/ನಿವೇಶನದಾರರಿಗೆ ಬಿ–ಖಾತಾ ನೀಡಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 18ರಿಂದ ಮೂರು ತಿಂಗಳೊಳಗೆ ನಗರ ಸ್ಥಳೀಯ ಸಂಸ್ಥೆಯ ಅನಧಿಕೃತ ಬಡಾವಣೆಯಲ್ಲಿನ ನಿವೇಶನದಾರರಿಗೆ ಬಿ–ಖಾತಾ ನೀಡುವ ಕಾರ್ಯವನ್ನು ಆಂದೋಲನ ರೀತಿಯಲ್ಲಿ ಆರಂಭಿಸಿದ್ದೇವೆ ಎಂದು ಹೇಳಿದರು.

    ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 70,000ಕ್ಕೂ ಅಧಿಕ ಅನಧಿಕೃತ ಆಸ್ತಿಗಳಿದ್ದು, ಅರ್ಹವಾದ ಆಸ್ತಿಗಳಿಗೆ ಬಿ-ಖಾತಾ ನೀಡಲು ಫೆ.18ರಿಂದ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

    ಆಸ್ತಿದಾರರು 2024ರ ಸೆಪ್ಟೆಂಬರ್ 10ಕ್ಕಿಂತ ಮುಂಚೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ–ಖಾತಾ ಮಾಡಿಸಲು ಅರ್ಹರಿರುತ್ತಾರೆ. ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಹಾಗೂ ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿ ಬಿ–ಖಾತಾದಲ್ಲಿ ನಮೂದಿಸಲಾಗುವುದು ಎಂದು ತಿಳಿಸಿದರು.

    ಬಿ–ಖಾತಾದಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ 2ರಷ್ಟು ತೆರಿಗೆಯನ್ನು ಹಾಗೂ ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. ಬಿ–ಖಾತಾದಲ್ಲಿ ದಾಖಲಿಸಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸ್ವಾಧೀನಪಡಿಸುವ ನೋಂದಾಯಿತ ಮಾರಾಟ ಪತ್ರ/ದಾನ ಪತ್ರ/ವಿಭಾಗ ಪತ್ರಗಳನ್ನು ಹೊಂದಿರಬೇಕು. ಸರ್ಕಾರಿ ಜಾಗದಲ್ಲಿರುವ ಸ್ವತ್ತು, ಸರ್ಕಾರದ ನಿಗಮ ಮಂಡಳಿಗಳ ಜಾಗ, ನಗರ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿರುವ ಸ್ವತ್ತುಗಳನ್ನು ಬಿ-ಖಾತಾದಲ್ಲಿ ನಮೂದಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

    ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮಾತನಾಡಿ, ಅನಧಿಕೃತ ಸ್ವತ್ತುಗಳಿಗೆ ನಮೂನೆ–2ಎ/3ಎ ನೀಡಿದ್ದಲ್ಲಿ ಸದರಿ ಆಸ್ತಿಯನ್ನು ಸಕ್ರಮಗೊಳಿಸಲಾಗಿದೆ ಎಂದು ಆಸ್ತಿ ಮಾಲೀಕರು ಭಾವಿಸುವಂತಿಲ್ಲ. ಬಿ–ಖಾತಾಗೆ ಅನಧಿಕೃತ ಆಸ್ತಿಯನ್ನು ದಾಖಲಿಸಲಿಚ್ಛಿಸುವವರಿಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಕೌಂಟರ್‌ ಗಳನ್ನು ತೆರೆಯಲಾಗುವುದು. ಈ ಕೌಂಟರ್‌ಗಳು ರಜಾ ದಿನಗಳಂದೂ ಸಹ ಕಾರ್ಯನಿರ್ವಹಿಸಲಿವೆ. ಆಸ್ತಿದಾರರು ಬಿ–ಖಾತೆಗೆ ದಾಖಲಿಸಲು ಮದ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

    ಆಸ್ತಿದಾರರು ಬಿ–ಖಾತಾಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ತುಮಕೂರು ಮಹಾನಗರ ಪಾಲಿಕೆ (9945212919 / 9449872599), ತಿಪಟೂರು ನಗರಸಭೆ(9448596379), ಸಿರಾ ನಗರಸಭೆ(8133270041), ಕುಣಿಗಲ್ ಪುರಸಭೆ(08132-220225), ಪಾವಗಡ ಪುರಸಭೆ (9742821910), ಚಿಕ್ಕನಾಯಕನಹಳ್ಳಿ ಪುರಸಭೆ (8660353951), ಮಧುಗಿರಿ ಪುರಸಭೆ (6361773631) ಕೊರಟಗೆರೆ ಪಟ್ಟಣ ಪಂಚಾಯಿತಿ (9964645923) ಗುಬ್ಬಿ ಪಟ್ಟಣ ಪಂಚಾಯಿತಿ (7406644909), ತುರುವೇಕೆರೆ ಪಟ್ಟಣ ಪಂಚಾಯಿತಿ (7026250340) ಹುಳಿಯಾರು ಪಟ್ಟಣ ಪಂಚಾಯಿತಿ(8133256056)ಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ

    June 12, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು…

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.