ತುಮಕೂರು: ಮೇ 19 ರಂದು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ‘ಸಾಧನ ಸಮಾವೇಶ’ಕ್ಕೆ ಸರ್ಕಾರಿ ನೌಕರರನ್ನು ಬಳಸಿಕೊಳ್ಳುತ್ತಿರುವ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಬಿಜೆಪಿ ಮುಖಂಡ ಗೌಡೇಟಿ ಪ್ರಭಾಕರ ಗುಡುಗಿದ್ದಾರೆ.
“ಕಾಂಗ್ರೆಸ್ ಪಕ್ಷ ತನ್ನ ಸಾಧನೆ ಹೇಳಿಕೊಳ್ಳಲು ಸಮಾವೇಶ ಮಾಡಿಕೊಳ್ಳಲಿ. ಆದರೆ ಡಿಸಿ, ಎಸಿ, ತಹಶೀಲ್ದಾರ್ ಸೇರಿ ಸರ್ಕಾರಿ ಸಂಬಳ ತೆಗೆದುಕೊಳ್ಳುವ ನೌಕರರನ್ನು ಪಕ್ಷದ ಕಾರ್ಯಕ್ರಮಕ್ಕೆ ದುಡಿಸಿಕೊಳ್ಳುವುದು ಕರ್ನಾಟಕ ನಾಗರಿಕ ಸೇವಾ ನಿಯಮ 1966 ಕ್ಕೆ ವಿರುದ್ಧ. ಇದು ನೇರವಾಗಿ ಸರ್ಕಾರಿ ಯಂತ್ರದ ದುರ್ಬಳಕೆ” ಎಂದು ಪ್ರಭಾಕರ ಆರೋಪಿಸಿದರು.
“ಸರ್ಕಾರಿ ನೌಕರರು ರಾಜಕೀಯವಾಗಿ ತಟಸ್ಥವಾಗಿರಬೇಕು. ಅವರನ್ನು ಸಮಾವೇಶದ ಬ್ಯಾನರ್ ಕಟ್ಟೋದ್ರಿಂದ ಹಿಡಿದು ಜನ ಸೇರಿಸೋವರೆಗೂ ಬಳಸಲಾಗುತ್ತಿದೆ. ಇದರ ದಾಖಲೆಗಳನ್ನು ಕಲೆ ಹಾಕಿದ್ದೇವೆ. ವಕೀಲರ ತಂಡದ ಜೊತೆ ಚರ್ಚಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.
ಮೇ 19 ರಂದು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ನ 3 ವರ್ಷದ ಸಾಧನ ಸಮಾವೇಶ ನಡೆಯಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಜಿಲ್ಲೆಯಾದ್ಯಂತ ಫಲಾನುಭವಿಗಳನ್ನು ಕರೆತರಲು ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ ಎಂಬುದು ಬಿಜೆಪಿಯ ಆರೋಪ.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


