ಪಾವಗಡ: ಹೇಳಿ ಕೇಳಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಬರದ ನಾಡು ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶವಾಗಿದೆ. ಇದು ಹೀಗಿದ್ದರೆ ತಾಲೂಕಿನ ನಾಗಲಮಡಿಕೆ ಹೋಬಳಿಯ ರ್ಯಾಪ್ಟೆ ಗ್ರಾಪಂ ವ್ಯಾಪ್ತಿಯ ನಾಗೇನಹಳ್ಳಿಯ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನೀರಿಗೆ ಹಾಹಾಕಾರ ಉಂಟಾಗಿದೆ.
ಈ ಗ್ರಾಮದಲ್ಲಿ ಎರಡು ಬೋರ್ ಗಳಿಂದ ಗ್ರಾಮದ ಜನರಿಗೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದ್ರೆ ಕಳೆದ ಐದು ದಿನಗಳ ಹಿಂದೆ ಕುಡಿಯುವ ನೀರಿನ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದು, ಮೋಟರನ್ನು ರಿಪೇರಿ ಮಾಡಲು ತೆಗೆದುಕೊಂಡು ಹೋಗಿದ್ದ ಮೆಕಾನಿಕ್ ರಿಪೇರಿ ಮಾಡದೆ ಮೋಟರನ್ನು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾನೆ .
ಈ ಬಗ್ಗೆ ಗ್ರಾಮಸ್ಥರು ಕೇಳಿದರೆ ನನಗೆ ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಮೋಟಾರ್ ಗಳನ್ನ ರಿಪೇರಿ ಮಾಡಿದ ಸಾಕಷ್ಟು ಹಣ ಬರಬೇಕಿದೆ, ಆ ಹಣ ಬರುವವರೆಗೂ ನಾನು ಇದನ್ನು ರಿಪೇರಿ ಮಾಡುವುದಿಲ್ಲ, ಅವರಿಗೆ ಕೊಡುವುದಿಲ್ಲ ಎಂಬ ಉತ್ತರವನ್ನು ಹೇಳಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು, ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಪಿಡಿಒ ಗ್ರಾಮಸ್ಥರ ನೆರವಿಗೆ ಬರುತ್ತಿಲ್ಲ ಫೋನನ್ನು ಸಹ ಸ್ವೀಕರಿಸುತ್ತಿಲ್ಲ ಇದರಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಭಾನುವಾರ ಸಂಜೆ ಐದು ಗಂಟೆಯಲ್ಲಿ ಪಕ್ಕದ ಗ್ರಾಮಗಳಿಗೆ ಟ್ರ್ಯಾಕ್ಟರ್ ನಲ್ಲಿ ತೆರಳಿ ಡ್ರಮ್ ಬಿಂದಿಗೆಯನ್ನು ಹಿಡಿದು ನೀರು ತರುವಂತಹ ಪರಿಸ್ಥಿತಿ ನಾಲ್ಕು ಮನೆಯವರು ಮಾಡುತ್ತಿದ್ದು, ಇನ್ನುಳಿದ ಮನೆಗಳ ಪರಿಸ್ಥಿತಿ ಏನು ಎಂಬುದು ಸದ್ಯ ಪ್ರಶ್ನೆಯಾಗಿದೆ.
ಸಂಬಂಧ ಪಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ತಾರೆ ಜನರ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.
ವರದಿ: ನಂದೀಶ್ ನಾಯ್ಕ, ಪಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4