ಯುರೋಪಿಯನ್ ದೇಶ ಸ್ವಿಟ್ಜರ್ಲೆಂಡ್ ನಲ್ಲಿ ಹೊಸ ವರ್ಷಕ್ಕೆ ಹೊಸ ಕಾನೂನು ಜಾರಿಯಾಗಿದ್ದು, ಈ ಕಾನೂನು ಇದೀಗ ವಿವಾದಕ್ಕೀಡಾಗಿದೆ. ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ ಮಾಡಲಾಗಿದ್ದು, ಒಂದು ವೇಳೆ ಬುರ್ಖಾ ಧರಿಸಿ ಸಿಕ್ಕಿಬಿದ್ದರೆ 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಈ ಕಾನೂನಿಗೆ ಮುಸ್ಲಿಮ್ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ.
2021ರ ಮಾರ್ಚ್ ನಲ್ಲಿ ಸ್ವಿಸ್ ಸರ್ಕಾರವು ಬುರ್ಖಾವನ್ನು ಧರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಮತದಾನವನ್ನು ನಡೆಸಿತು. ಇದರಲ್ಲಿ 52ರಷ್ಟು ಜನರು ಬುರ್ಖಾ ನಿಷೇಧ ಕಾನೂನಿನ ಪರವಾಗಿ ಮತ ಚಲಾಯಿಸಿದ್ದಾರೆ. 48ರಷ್ಟು ಜನರು ಕಾನೂನಿನ ವಿರುದ್ಧ ಮತ ಚಲಾಯಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆದ ಮತದಾನ ಈಗ ಜಾರಿಯಾಗಿದೆ.
ಸರ್ಕಾರ ಹೊರಡಿಸಿದ ಕಾನೂನಿನ ಅಡಿಯಲ್ಲಿ, ಬುರ್ಖಾ ನಿಷೇಧವು ವಿಮಾನಗಳಲ್ಲಿ ಅಥವಾ ರಾಜತಾಂತ್ರಿಕ ಮತ್ತು ಕಾನ್ಸುಲರ್ ಆವರಣದಲ್ಲಿ ಅನ್ವಯವಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಜನರು ಸ್ವಿಟ್ಜರ್ಲೆಂಡ್ನ ಪೂಜಾ ಸ್ಥಳಗಳಲ್ಲಿ ಅಥವಾ ಯಾವುದೇ ರೀತಿಯ ಜಾತ್ಯತೀತ ಸ್ಥಳಗಳಲ್ಲಿ ತಮ್ಮ ಮುಖಗಳನ್ನು ಮುಚ್ಚಿಕೊಳ್ಳಬಹುದು.
ಈ ಹೊಸ ಕಾನೂನಿನನ್ನು ಮುಸ್ಲಿಂ ಸಮುದಾಯ ಮತ್ತು ಅಮ್ನೆಸ್ಟಿ ಇಂಟರ್ ನ್ಯಾಶನಲ್ನಂತಹ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx