ಬಾಹ್ಯಾಕಾಶದಲ್ಲಿ ತಂಗಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ಮಲಿಯಮ್ಸ್ ಹಾಗೂ ಬುಚ್ ವಿಲೋರ್ ಅವರು ಮಾರ್ಚ್ ತಿಂಗಳಲ್ಲಿ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಳ ಕಾಲ ಸಿಲುಕಿರುವ ಈ ಇಬ್ಬರು ಗಗನಯಾತ್ರಿಗಳು ತಮ್ಮ ಬಳಿ ಸಾಕಷ್ಟು ಆಹಾರವಿದೆ, ಲಾಂಡ್ರಿ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ ನಾವು ಇಲ್ಲಿ ಅರಾಮಗಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ಜೂನ್ನಲ್ಲಿ ಬೋಯಿಂಗ್ ನ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿರುವ ಅವರು ಕಕ್ಷೆಯ ಪ್ರಯೋಗಾಲಯದಲ್ಲಿ ಕೇವಲ ಎಂಟು ದಿನಗಳನ್ನು ಕಳೆಯಬೇಕಾಗಿತ್ತು. ಆದರೆ ಸ್ಟಾರ್ ಲೈನರ್ ನ ಪೊಪಲ್ಷನ್ ಸಿಸ್ಟಮ್ ನೊಂದಿಗಿನ ಸಮಸ್ಯೆಗಳಿಂದಾಗಿ ಅವರು ಇನ್ನು ಅಲ್ಲೆ ನೆಲೆಸಿದ್ದು, ಈಗ ಮಾರ್ಚ್ ಅಂತ್ಯದಲ್ಲಿ ಹಿಂದಿರುಗುವ ಬಾಹ್ಯಾಕಾಶ ನೌಕೆಯನ್ನು ಸಿದ್ದಪಡಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx