ವಯನಾಡು: ಮಹಿಳೆಯೊಬ್ಬರನ್ನು ಕೊಂದು ತಿಂದಿದ್ದ ನರಭಕ್ಷಕ ಹುಲಿಯೊಂದರ ಹೊಟ್ಟೆಯಲ್ಲಿ ಕಿವಿಯೋಲೆ, ಕೂದಲು, ಬಟ್ಟೆ ಪತ್ತೆಯಾಗಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ.
ಕೇರಳದ ವಯನಾಡಿನ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಸತ್ತು ಬಿದ್ದಿದ್ದ ಹುಲಿಯ ಹೊಟ್ಟೆಯಲ್ಲಿ ಮಹಿಳೆಯೊಬ್ಬರ ಕಿವಿಯೋಲೆ, ಕೂದಲು ಮತ್ತು ಬಟ್ಟೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹುಲಿ ಕಳೆದ ಎರಡು ದಿನಗಳ ಹಿಂದೆ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ರಾಧಾ ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿ ಎಳೆದೊಯ್ದಿತ್ತು. ಇದೀಗ ಹುಲಿ ಸಾವಿಗೀಡಾಗಿದ್ದು, ಇದೀಗ ಹುಲಿಯ ಹೊಟ್ಟೆಯಲ್ಲಿ ಮಹಿಳೆ ದೇಹದ ಭಾಗಗಳು ಪತ್ತೆಯಾಗಿದೆ.
ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿಯ ತಂಡ ಗುರುತಿಸಿ ಬೆನ್ನಟ್ಟಿದ್ದರು. ನಂತರ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಹುಲಿ ಸಾವಿಗೀಡಾಗಿದೆ ಎಂದು ಖಚಿತ ಪಡಿಸಿಕೊಂಡ ಅಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು. ಈ ವೇಳೆ ಹುಲಿ ಹೊಟ್ಟೆಯಲ್ಲಿ ಮಹಿಳೆಯ ಕಿವಿಯೋಲೆ, ಕೂದಲು ಮತ್ತು ಬಟ್ಟೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4