nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ತುಮಕೂರು ನಗರಕ್ಕೆ ಶೀಘ್ರದಲ್ಲೇ 50 ಹೊಸ ಇ–ಬಸ್‌ ಗಳ ಭಾಗ್ಯ; ಪ್ರಯಾಣಿಕರ ಪರದಾಟಕ್ಕೆ ಸಿಗಲಿದೆ ಮುಕ್ತಿ!

    November 11, 2026

    ಶಿವನ ಹಣೆಯ ಮಧ್ಯೆ ಮೂರನೇ ಕಣ್ಣು ಉದಯಿಸಿದ್ದೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    November 10, 2026
    Facebook Twitter Instagram
    ಟ್ರೆಂಡಿಂಗ್
    • ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?
    • ತುಮಕೂರು ನಗರಕ್ಕೆ ಶೀಘ್ರದಲ್ಲೇ 50 ಹೊಸ ಇ–ಬಸ್‌ ಗಳ ಭಾಗ್ಯ; ಪ್ರಯಾಣಿಕರ ಪರದಾಟಕ್ಕೆ ಸಿಗಲಿದೆ ಮುಕ್ತಿ!
    • ಶಿವನ ಹಣೆಯ ಮಧ್ಯೆ ಮೂರನೇ ಕಣ್ಣು ಉದಯಿಸಿದ್ದೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!
    • ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?
    • ದೀಪಾವಳಿಯ ಪಾಡ್ಯ ಪೂಜೆಯ ವಿಶೇಷವೇನು? ಬಲಿ ಚಕ್ರವರ್ತಿಯ ಆರಾಧನೆಯ ಹಿಂದಿದೆ ಪೌರಾಣಿಕ ಕಥೆ!
    • ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!
    • ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು
    • ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ನಗರಕ್ಕೆ ಶೀಘ್ರದಲ್ಲೇ 50 ಹೊಸ ಇ–ಬಸ್‌ ಗಳ ಭಾಗ್ಯ; ಪ್ರಯಾಣಿಕರ ಪರದಾಟಕ್ಕೆ ಸಿಗಲಿದೆ ಮುಕ್ತಿ!
    ತುಮಕೂರು November 11, 2026

    ತುಮಕೂರು ನಗರಕ್ಕೆ ಶೀಘ್ರದಲ್ಲೇ 50 ಹೊಸ ಇ–ಬಸ್‌ ಗಳ ಭಾಗ್ಯ; ಪ್ರಯಾಣಿಕರ ಪರದಾಟಕ್ಕೆ ಸಿಗಲಿದೆ ಮುಕ್ತಿ!

    By adminNovember 11, 2026No Comments2 Mins Read
    ksrtc

    ತುಮಕೂರು ನಗರದಲ್ಲಿ ಬಸ್ ‌ಗಳ ಕೊರತೆಯಿಂದಾಗಿ ಪ್ರತಿನಿತ್ಯ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಶೀಘ್ರದಲ್ಲೇ ನೆಮ್ಮದಿ ಸಿಗುವ ನಿರೀಕ್ಷೆ ಮೂಡಿದೆ. ನಗರದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪರಿಸರ ಸ್ನೇಹಿ ಸಂಚಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ ಆರ್‌ ಟಿಸಿ) 50 ಹೊಸ ಎಲೆಕ್ಟ್ರಿಕ್ ಬಸ್‌ ಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸಿದೆ.

    ಕೇಂದ್ರ ಸರ್ಕಾರದ ‘ಪಿಎಂ ಇ–ಬಸ್ ಸೇವಾ’ ಯೋಜನೆಯಡಿ ತುಮಕೂರು ನಗರ ಸಾರಿಗೆಗೆ 50 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವಂತೆ ಕೆಎಸ್‌ ಆರ್‌ ಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಗೆ ಅನುಮೋದನೆ ದೊರೆತು ಬಸ್ ‌ಗಳು ಕಾರ್ಯಾಚರಣೆ ಆರಂಭಿಸಿದರೆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ.

    ಸದ್ಯ ತುಮಕೂರು ನಗರ ಸಾರಿಗೆಯಲ್ಲಿ ಕೇವಲ 60 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ನಗರದ ಜನಸಂಖ್ಯೆ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬಸ್‌ಗಳ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಳವಾಗಿಲ್ಲ. ಪರಿಣಾಮವಾಗಿ ಸೂಕ್ತ ಸಮಯಕ್ಕೆ ಬಸ್‌ಗಳು ಸಿಗದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ 50 ಹೊಸ ಇ-ಬಸ್‌ಗಳು ಸೇರ್ಪಡೆಯಾದರೆ ಬಸ್‌ಗಳ ಕೊರತೆ ಬಹುಮಟ್ಟಿಗೆ ನೀಗುವ ನಿರೀಕ್ಷೆಯಿದೆ.

    ಡೀಸೆಲ್ ಬಸ್ ‌ಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ನಗರದ ಬಾಳೇಕಟ್ಟೆಯಲ್ಲಿರುವ ಕೆಎಸ್‌ಆರ್‌ಟಿಸಿಯ ಹಳೆಯ ಬಸ್ ನಿಲ್ದಾಣವನ್ನು ಇ-ಬಸ್ ಡಿಪೋವನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಬಳಕೆಯಾಗದೆ ಉಳಿದಿದ್ದ ಈ ಜಾಗವನ್ನು ಇದೀಗ ಹೊಸ ಉದ್ದೇಶಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಡಿಪೋ ಅಭಿವೃದ್ಧಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

    ಇ–ಬಸ್‌ಗಳ ಕಾರ್ಯಾಚರಣೆಗೆ ಅಗತ್ಯವಿರುವ ಚಾರ್ಜಿಂಗ್ ಮೂಲಸೌಕರ್ಯ ಕಲ್ಪಿಸಲು 11 ಕೆ.ವಿ. ವಿದ್ಯುತ್ ಫೀಡರ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಬೆಸ್ಕಾಂ ಸಂಸ್ಥೆಯು 3,000 ಕೆ.ವಿ.ಎ ವಿದ್ಯುತ್ ಪೂರೈಕೆಗೆ ಅಗತ್ಯ ಸಿದ್ಧತೆ ನಡೆಸುತ್ತಿದೆ.ಸದ್ಯ ತುಮಕೂರು ಜಿಲ್ಲೆಯಾದ್ಯಂತ ಒಟ್ಟು 711 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಮೊದಲ ಹಂತದಲ್ಲಿ ಪ್ರಸ್ತಾವಿತ 50 ಎಲೆಕ್ಟ್ರಿಕ್ ಬಸ್‌ಗಳನ್ನು ತುಮಕೂರು ನಗರ ಸಾರಿಗೆಗೆ ಮಾತ್ರ ಬಳಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ನಗರದ ಸುತ್ತಮುತ್ತಲಿನ ತಾಲೂಕುಗಳಿಗೂ ಇ-ಬಸ್ ಸೇವೆಯನ್ನು ವಿಸ್ತರಿಸುವ ಯೋಜನೆಯಿದೆ ಎಂದು ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ತಿಳಿಸಿದ್ದಾರೆ.

    50 ಇ—ಬಸ್ ‌ಗಳ ಸೇರ್ಪಡೆಯಿಂದ ತುಮಕೂರು ನಗರದ ಸಾರಿಗೆ ವ್ಯವಸ್ಥೆ ಸುಧಾರಿಸುವ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ. ಆದರೆ ಈ ಬಸ್‌ಗಳು ಯಾವಾಗ ಅಧಿಕೃತವಾಗಿ ರಸ್ತೆಗಿಳಿಯಲಿವೆ ಎಂಬುದಕ್ಕೆ ಕೆಎಸ್ ‌ಆರ್‌ ಟಿಸಿಯ ಅಂತಿಮ ವೇಳಾಪಟ್ಟಿಗಾಗಿ ಪ್ರಯಾಣಿಕರು ಕಾಯುತ್ತಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು

    November 8, 2026

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    November 8, 2026

    ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

    November 8, 2026

    Leave A Reply Cancel Reply

    Our Picks

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ಮತ್ತು ಅವರ ಪತ್ನಿ ಅನ್ನಾ…

    ತುಮಕೂರು ನಗರಕ್ಕೆ ಶೀಘ್ರದಲ್ಲೇ 50 ಹೊಸ ಇ–ಬಸ್‌ ಗಳ ಭಾಗ್ಯ; ಪ್ರಯಾಣಿಕರ ಪರದಾಟಕ್ಕೆ ಸಿಗಲಿದೆ ಮುಕ್ತಿ!

    November 11, 2026

    ಶಿವನ ಹಣೆಯ ಮಧ್ಯೆ ಮೂರನೇ ಕಣ್ಣು ಉದಯಿಸಿದ್ದೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    November 10, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.