ತಿಪಟೂರು: ತಾಲೂಕಿನಲ್ಲಿ ಮೂರು ಬಾರಿ ಶಾಸಕರಾಗಿ ಇತಿಹಾಸ ಸೃಷ್ಟಿಸಿರುವ ಶಾಸಕ ಕೆ.ಷಡಕ್ಷರಿ 77ನೇ ಹುಟ್ಟುಹಬ್ಬ ಆಚರಣೆ ಗೆ ಸಕಲ ಸಿದ್ಧತೆಗಳು ನಡೆದಿವೆ ಎಂದು ಶಾಸಕ ಅಭಿಮಾನಿಗಳ ಬಳಗ ತಿಳಿಸಿದರು.
ಕೆ.ಷಡಕ್ಷರಿಯವರು ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಚಯಿಸುವ ಉದ್ದೇಶದಿಂದ ನಾಡಿನ ಎಲ್ಲ ಮಠಮಾನ್ಯಗಳು ಸ್ವಾಮಿಗಳು, ಸಚಿವರು, ಶಾಸಕರುಗಳ ಉಪಸ್ಥಿತಿಯಲ್ಲಿ ಜಾತ್ಯಾತೀತವಾಗಿ ಏಪ್ರಿಲ್ 13 ರಂದು ನಗರದ ವೈಭವ ಮಾಲ್ ಹಿಂಭಾಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ನಗರಸಭಾ ಸದಸ್ಯ ಅಣ್ಣಯ್ಯ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ನಾಡಿನ ಸ್ವಾಮೀಜಿಗಳು ಜಾತ್ಯಾತೀತವಾಗಿ ಆಗಮಿಸುವರು ಸುತ್ತೂರು ಮಠದ ಶಿವರಾತ್ರಿ ದೇಶಿಯ ಕೇಂದ್ರ ಸ್ವಾಮೀಜಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಗುರು ಪರದೇಶಿ ಕೇಂದ್ರ ಸ್ವಾಮೀಜಿ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿರುಶಭ ದೇಶಿ ಕೇಂದ್ರ ಶಿವಯೋಗಿ ಶ್ವರಶಬಕೇಂದ್ರಿಯ ಸ್ವಾಮೀಜಿ, ಆದಿ ಚುಂಚನಗಿರಿಯ ನಿರ್ಮಲಾನಂದಸ್ವಾಮೀಜಿ ನಾಡಿನ ಹಲವಾರು ಸ್ವಾಮೀಜಿಗಳು ಹರ ಗುರು ಚರಣರು ರಾಜಕೀಯ ಧುರೀಣರು ಆಗಮಿಸುವರು ಎಂದು ಅಭಿಮಾನಿ ಬಳಗ ತಿಳಿಸಿದರು.
ಈ ಗೋಷ್ಠಿಯಲ್ಲಿ ಅಣ್ಣಯ್ಯ ಲೋಕನಾಥ್ ಸಿಂಗ್ ಸುಜಿತ್ ಭೂಷಣ್ ತುಮಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಹಲವಾರು ಗಣ್ಯರು ಭಾಗವಹಿಸಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————