nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳಮೀಸಲಾತಿ:  ರಾಜ್ಯ ಸರ್ಕಾರ ಮಾದಿಗರ ತಾಳ್ಮೆ ಪರೀಕ್ಷಿಸುತ್ತಿದೆ: ಪಿ.ಎನ್.ರಾಮಯ್ಯ ಕಿಡಿ

    March 30, 2026

    ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

    March 30, 2026

    ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: ನಿಯಮ ಗಾಳಿಗೆ ತೂರಿದ ಸಿಬ್ಬಂದಿ

    March 30, 2026
    Facebook Twitter Instagram
    ಟ್ರೆಂಡಿಂಗ್
    • ಒಳಮೀಸಲಾತಿ:  ರಾಜ್ಯ ಸರ್ಕಾರ ಮಾದಿಗರ ತಾಳ್ಮೆ ಪರೀಕ್ಷಿಸುತ್ತಿದೆ: ಪಿ.ಎನ್.ರಾಮಯ್ಯ ಕಿಡಿ
    • ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
    • ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: ನಿಯಮ ಗಾಳಿಗೆ ತೂರಿದ ಸಿಬ್ಬಂದಿ
    • ಮುಕ್ತ ವಿವಿ ಪ್ರವೇಶಾತಿಗೆ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನ
    • ಮಾ.31ರಂದು ಭಗವಾನ್ 1008 ಶ್ರೀ ಮಹಾವೀರ ಸ್ವಾಮಿಯವರ ಜನ್ಮ ಜಯಂತಿ ಮಹೋತ್ಸವ
    • ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧ: ರಾಜ್ಯಮಟ್ಟದ ಸಮಾವೇಶದ ಪೋಸ್ಟರ್ ಬಿಡುಗಡೆ
    • ಏ.15ರಿಂದ 29ರವರೆಗೆ ಮಕ್ಕಳ ಬೇಸಿಗೆ ಶಿಬಿರ: 60 ಮಕ್ಕಳಿಗೆ ಅವಕಾಶ, ನೋಂದಾಯಿಸುವುದು ಹೇಗೆ?
    • ಶಾಸಕ ಅನಿಲ್ ಚಿಕ್ಕಮಾದು ಅಭಿವೃದ್ಧಿ ಕಾರ್ಯ ಸಹಿಸಲಾಗದೇ ವಿರೋಧ ಪಕ್ಷಗಳಿಂದ ಟೀಕೆ: ಪ.ಪಂ. ಸದಸ್ಯ ಶ್ರೀನಿವಾಸ ಕಿಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’: ಅಂಬೇಡ್ಕರ್ ರಥ
    ತುರುವೇಕೆರೆ April 19, 2022

    ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’: ಅಂಬೇಡ್ಕರ್ ರಥ

    By adminApril 19, 2022No Comments2 Mins Read
    ambedkar chinthana manthana

    ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ‘ಅಂಬೇಡ್ಕರ್ ಚಿಂತನ – ಮಂಥನ’ ಹಮ್ಮಿಕೊಳ್ಳಲಾಗಿತ್ತು.

    ಅಂಬೇಡ್ಕರ್ ರಥವು ಜೈ ಭೀಮ್ ಘೋಷಣೆಯೊಂದಿಗೆ ದಲಿತ ಕೇರಿಯಿಂದ ಹೊರಟು ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ  ಜನತೆಯನ್ನು ಆಕರ್ಷಿಸಿತು. ಮುಸ್ಲಿಮರು ಕೂಡ ಕೂಡಾ ಜೈ ಭೀಮ್ ಮೆರವಣಿಗೆಯಲ್ಲಿ ಪಾಲ್ಗೊಂಡು ಅಂಬೇಡ್ಕರ್ ರಥಕ್ಕೆ ಗೌರವ ಸಲ್ಲಿಸಿದರು.


    Provided by
    Provided by

    ಚಿಂತನ – ಮಂಥನ ವೇದಿಕೆಯಲ್ಲಿ  ಶಾಖ್ಯಗೌತಮ್ ರವರು ಮಾತನಾಡಿ, ಅಂಬೇಡ್ಕರ್ ಚಿಂತನೆಯ ಜೊತೆ ಜೊತೆಗೆ ಆದಿ ಕರ್ನಾಟಕ ಮತ್ತು ಆದಿದ್ರಾವಿಡ  ಮತ್ತು ಮುಸಾಲ್ಮಾನ್ ಬಾಂಧವರ ಇತಿಹಾಸವನ್ನು ತೆರದಿಟ್ಟರು. ಭಾರತವನ್ನು ಆಳಿದ ಮೊದಲಿಗರು ನಾವು. ರಾಜವಂಶಸ್ಥರು ಇಂದು ಈ ಮನುವಾದಿಗಳ ಸೃಷ್ಟಿಸಿದ ಶಾಸ್ತ್ರ ಪುರಾಣಗಳಿಂದ ನಾವು ಅಸ್ಪೃಶ್ಯರಾದೆವು. ಇಂದು ನಾವುಗಳು ನಮ್ಮ ಇತಿಹಾಸವನ್ನು ಮರು ಕಟ್ಟಬೇಕಾಗಿದೆ. ಮತ್ತೆ ನಾವು ರಾಜರಾಗಬೇಕಿದೆ. ಅದಕ್ಕಾಗಿ ನಾವು ಎಲ್ಲಾರು ಅಂಬೇಡ್ಕರ್ ಕೊಟ್ಟ ಚಿಂತನೆಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. 

    ಶತಮಾನದಿಂದ ಅಕ್ಷರವಂಚಿತರಾದ ನಮಗೆ  ಶಿಕ್ಷಣವನ್ನು ಕೊಟ್ಟಿದ್  ಬ್ರಿಟಿಷರು. ಮೂರನೇ ಮಾರಾಠ್-ಆಂಗ್ಲೋ ಯುದ್ಧದಲ್ಲಿ ಮಹರ್ ಜನಾಂಗದ 500 ಸೈನಿಕರು ವೀರವೇಶದಿಂದ ಹೋರಾಡಿ ವಿಜಯಶಾಲಿಯಾದ ಕಾರಣವಾಗಿ ರಾಣಿ ಎಲಿಜಬೆತ್ ನಿಮಗೆ ಏನು ಬೇಕಾದರೂ  ಕೇಳಿ ನಾವು ಕೊಡುವುದಕ್ಕೆ ಸಿದ್ಧ ಎಂದಾಗ ನಮ್ಮ ಭಾರತೀಯರೆಲ್ಲರಿಗೂ ಶಿಕ್ಷಣವನ್ನು ಕೊಡಿ ಎಂದದ್ದು ಮಹರ್ ಸೈನಿಕರ  ನಿಸ್ವಾರ್ಥ ಮತ್ತು ಸ್ವಾಭಿಮಾನದ ಶೌರ್ಯವನ್ನು ತೋರುತ್ತದೆ. ಇಂದು ನಾವು ಎಲ್ಲರೂ ಶಿಕ್ಷಿತರಾಗಲು ಕಾರಣವೇ ಆ ಮಹರ್ ಜನಾಂಗದ ಯುದ್ಧ ಎಂಬುದನ್ನು ನೆನಪಿಸಿದರು. ನಮ್ಮನ್ನು ಜ್ಞಾನವಂತರನ್ನಾಗಿ ಮಾಡಿದ್ದು ಗಣೇಶ, ಶಾರದಾದೇವಿಯಲ್ಲ, ಬದಲಾಗಿ ಜ್ಯೋತಿ ಬಾ ಪುಲೆ ಮತ್ತು ಸಾವಿತ್ರ ಬಾಯಿ ಪುಲೆ ಎಂಬ ನೈಜ ಇತಿಹಾಸವನ್ನು ಭೀಮವಾದದೊಂದಿಗೆ ಹಂಚಿಕೊಂಡರು. ‘ ಇತಿಹಾಸ ಮರೆತವರು ಇತಿಹಾಸದ ಸೃಷ್ಟಿಸಲಾರರು’ ಎಂಬ ಭೀಮಚಿಂತನೆಯೊಂದಿಗೆ ಮಾತಿಗೆ ವಿರಾಮಕೊಟ್ಟರು.

    ಕೆ. ಧರ್ಮರತ್ನರವರು ಮಾತನಾಡಿ, ಇಂದು ಸಂವಿಧಾನವನ್ನು ಬದಲಾಯಿಸುವ ಮಾತುಗಳು ಸಂವಿಧಾನದಡಿಯಲ್ಲಿಯೇ ಬದುಕನ್ನು ಕಟ್ಟಿಕೊಂಡಿರುವವರ ನಾಲಗೆಯಲ್ಲಿ ಪುನಾರವರ್ತನೆಯಾಗುತ್ತವೆ. ಸಂವಿಧಾನವನ್ನು ಬದಲಾಯಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಕೋಮು ಗಲಭೆ, ಜಾತಿಜಾತಿಯ ನಡುವೆ ವೈರತ್ವ, ಮತ್ತು ಮೀಸಲಾತಿಯು ಕೇವಲ ಪರಿಶಿಷ್ಟ ಜಾತಿ ,ಪ‌.ಪಂಗಡದವರಿಗೆ ಮಾತ್ರ ಸೀಮಿತವಾಗಿದೆ ಎಂಬುದಾಗಿ ಸುಳ್ಳು ಆರೋಪಿಸಿ ಪ್ರಜಪ್ರಭುತ್ವವನ್ನು ದಾರಿತಪ್ಪಿಸುವ ಅಜೆಂಡಾಗಳು ನಮ್ಮೊಂದಿಗೆ ಇವೆ. ಆಗಾಗಿ ನಾವು ಒಟ್ಟಾಗಿದ್ದರೆ ಸಂವಿಧಾನವು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಚಟುವಟಿಕೆಯ ಮೂಲಕ ಜನಸಾಮಾನ್ಯರಿಗೆ ಅರ್ಥೈಯಿಸಿದರು. ಅಂಬೇಡ್ಕರ್ ಕೊಟ್ಟ ಆಶಯದಂತೆ ನಾವು ಜಾಗೃತರಾಗಿ , ಚಿಂತಿಸಿ,  ಒಂದಾಗಿ ಎಂಬುದಾಗಿ ಅಭಿಪ್ರಾಯಪಟ್ಟರು.

    ಗಂಗಾಧರ ನಿರೂಪಿಸಿದರು.  ಕೃಷ್ಣ ಮಾದಿಗ ವಂದಿಸಿದರು.  ಮುಖ್ಯ ಅತಿಥಿಗಳಾಗಿ

    ಕರ್ನಾಟಕ ಬುದ್ಧ ಸಮಾಜ ಸಂಚಾಲಕ ಸಾಕ್ಯ ಗೌತಮ್, ಕರ್ನಾಟಕ ಬೌದ್ಧ ಧರ್ಮ ಸಮಾಜ ಸಂಚಾಲಕ ಪಿ.ಕೆ. ದಮ್ಮ ರತ್ನ, ಕರ್ನಾಟಕ ಬೌದ್ಧ ಸಮಾಜದ ಸುರೇಶ್ ಮಹೇಶ, ಅಂಬೇಡ್ಕರ್ ವಿಚಾರವಾದಿ ನವೀನ್ ಕುಮಾರ್, ದಲಿತ ಮುಖಂಡ ರಾಘು ಯಗಚಿಕಟ್ಟೆ, ಪಟ್ಟಣ ಪಂಚಾಯತಿ ಅಧ್ಯಕ್ಷ ಚಿದಾನಂದ್ , ಲೋಕೇಶ್ ಗ್ರಾಮ ಪಂಚಾಯತ್ ಸದಸ್ಯರು ಬಾಣಸಂದ್ರ ಭೀಮ ಪಡೆ ಹೇಮಂತ್ ರಂಗಸ್ವಾಮಿ ಕೋಳಿ ಕಿರಣ್ ಗೋವಿಂದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಣಸಂದ್ರ ಲಕ್ಷ್ಮೀದೇವಮ್ಮ, ಮುಸ್ಲಿಮ್  ಮುಖಂಡ  ರಿಯಾಜ್ ಹಾಗೂ ಊರಿನ ಎಲ್ಲಾ ಮುಖಂಡರು ಭಾಗವಹಿಸಿದ್ದರು.

    ವರದಿ: ಸುರೇಶ್ ಬಾಬು ಎಂ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

     

    admin
    • Website

    Related Posts

    ಮಾ. 24 ರಂದು ತುರುವೇಕೆರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ಕುಂದು ಕೊರತೆ ಸಭೆ

    March 22, 2026

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    ಹಂಪಲಾಪುರ: ಭೂಮಿ ಹಕ್ಕಿಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

    March 10, 2026

    Leave A Reply Cancel Reply

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಒಳಮೀಸಲಾತಿ:  ರಾಜ್ಯ ಸರ್ಕಾರ ಮಾದಿಗರ ತಾಳ್ಮೆ ಪರೀಕ್ಷಿಸುತ್ತಿದೆ: ಪಿ.ಎನ್.ರಾಮಯ್ಯ ಕಿಡಿ

    March 30, 2026

    ತುಮಕೂರು: ರಾಜ್ಯ ಸರ್ಕಾರ ಮಾ.27 ರಂದು ಸಚಿವ ಸಂಪುಟದ ಸಭೆ ನಡೆಸಿ, ಒಳಮೀಸಲಾತಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ, ಜಾರಿ…

    ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

    March 30, 2026

    ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: ನಿಯಮ ಗಾಳಿಗೆ ತೂರಿದ ಸಿಬ್ಬಂದಿ

    March 30, 2026

    ಮುಕ್ತ ವಿವಿ ಪ್ರವೇಶಾತಿಗೆ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನ

    March 30, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.