nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026
    Facebook Twitter Instagram
    ಟ್ರೆಂಡಿಂಗ್
    • ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ
    • ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
    • ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಪಂಚ ಗ್ಯಾರೆಂಟಿ, ‘ಲಂಚ ಗ್ಯಾರೆಂಟಿ’: ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲೇ ಭ್ರಷ್ಟಾಚಾರಕ್ಕೆ ಸಾಕ್ಷಿ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    • ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    • ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಚೇರಿಯಲ್ಲೇ ಉಳಿದ ಜನರ ದಾಖಲೆಗಳು | ಕೇಳೋರು ಯಾರು ಅಂಚೆ ಇಲಾಖೆಯ ಗೋಳು
    ಕೊರಟಗೆರೆ January 16, 2023

    ಕಚೇರಿಯಲ್ಲೇ ಉಳಿದ ಜನರ ದಾಖಲೆಗಳು | ಕೇಳೋರು ಯಾರು ಅಂಚೆ ಇಲಾಖೆಯ ಗೋಳು

    By adminJanuary 16, 2023No Comments2 Mins Read
    mallekavu
    • ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    ಕೊರಟಗೆರೆ: ನಿಮ್ಮ ಆಧಾರ್ ಕಾರ್ಡು ಮನೆಗೆ ಇನ್ನೂ ಬಂದಿಲ್ವಾ.. ಬ್ಯಾಂಕು ಚೆಕ್ ಬುಕ್ ನಿಮ್ಮ ಕೈಗೆ ಇನ್ನೂ ಸೇರಿಲ್ವಾ.. ರಿಜಿಸ್ಟರ್ ಪೋಸ್ಟ್–ಸ್ಪೀಡ್ ಪೋಸ್ಟ್ ಮನೆಗೆ ಬರ್ತಾ ಇಲ್ವಾ.. ಕೆಲಸದ ಆಹ್ವಾನದ ತುರ್ತುಕರೆ ನಿಮಗೇ ಬರೋದೇ ಇಲ್ಲ ಬಿಡಿ.. ಯಾಕೆ ಗೊತ್ತಾ ಮಲ್ಲೇಕಾವು ಅಂಚೆ ಕಚೇರಿಯ ಅಂಚೆ ಪಾಲಕ ಕಳೆದ 45ದಿನಗಳಿಂದ ಕಚೇರಿಗೆ ಬಂದೇ ಇಲ್ವಂತೆ..!!

    ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ಅಂಚೆ ಕಚೇರಿಯ ಅಂಚೆ ಪಾಲಕ ನಾಗೇಂದ್ರ ಎಂಬಾತ ಕಳೆದ 45 ದಿನಗಳಿಂದ ಕರ್ತವ್ಯಕ್ಕೆ ಗೈರುಹಾಜರಿಯಾಗಿದ್ದು, ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಅಂಚೆ ಪಾಲಕ ಗೈರಾದ ಹಿನ್ನೆಲೆಯಲ್ಲಿ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ.


    Provided by
    Provided by

    ಬ್ಯಾಂಕ್ ಬೆಕ್, ಆಧಾರ್ ಕಾರ್ಡು, ಕೋರ್ಟ್ ನೊಟೀಸ್, ಎಟಿಎಂ ಕಾರ್ಡು, ರೇಷನ್‍ ಕಾರ್ಡು, ಎಲ್‍ ಐಸಿ ಬಾಂಡ್, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಜಾಬ್ ನೊಟೀಸ್, ಕೊರಿಯರ್, ಪಾರ್ಸಲ್‍ ಗಳು, ಹತ್ತಾರು ಗ್ರಾಮದ ನೂರಾರು ಜನ ಗ್ರಾಹಕರ ಕೈಸೇರದೇ ಕಳೆದ 45 ದಿನಗಳಿಂದ ಮಲ್ಲೇಕಾವು ಅಂಚೆ ಕಚೇರಿಯಲ್ಲಿ ಧೂಳು ಹಿಡಿಯುತ್ತಿದ್ದು ಕರ್ತವ್ಯಲೋಪ ಪ್ರಶ್ನಿಸುವ ಅಂಚೆ ನಿರೀಕ್ಷಕರು ನಿರ್ಲಕ್ಷ ವಹಿಸಿದ್ದಾರೆ.

    ಅಂಚೆ ಪಾಲಕ ಕಚೇರಿಗೆ ಬರೋದೆ ಇಲ್ವಂತೆ:

    ಮಲ್ಲೇಕಾವು ಅಂಚೆ ಇಲಾಖೆಯ ಅಂಚೆ ಪಾಲಕನ ತಂದೆಯ ಕೆಲಸವನ್ನು ಮಗ ನಾಗೇಂದ್ರನಿಗೆ ನೀಡಲಾಗಿದೆ. ನಾಗೇಂದ್ರ ತನ್ನ ಕೆಲಸವನ್ನೇ ಮರೆತು ಸಂಬಳ ಪಡೆಯುವುದಕ್ಕೇ ಮಾತ್ರ ಸೀಮಿತ ಆಗಿದ್ದಾರೆ.

    ಅಂಚೆ ಇಲಾಖೆಯ ದಾಖಲೆಗಳು ತನ್ನ ಮನೆಯಲ್ಲಿಯೇ ಶೇಖರಣೆ ಮಾಡಿ ಕೊಂಡಿರುವ ಆರೋಪವು ಸಹ ಇದೆ. 30 ದಿನದ ಹಿಂದೆಯೇ ತನಿಖೆ ನಡೆಸಿರುವ ಅಂಚೆ ನಿರೀಕ್ಷಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಪರಿಣಾಮ ಸಮಸ್ಯೆಯು ದ್ವಿಗುಣವಾಗಿದೆ.

    ಮಲ್ಲೇಕಾವು ಅಂಚೆ ಉಪಕಚೇರಿಯ ಚನ್ನರಾಯನದುರ್ಗ, ಬೇಂಡೋಣಿ, ಮಲ್ಲೇಕಾವು, ಗೌರಿಗಲ್ಲು, ದೊಗ್ಗನಹಳ್ಳಿ, ಹಂಚಿಮಾರನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಇಲಾಖೆಯು ಮೌನಕ್ಕೆ ಶರಣಾಗಿದೆ. ಅಂಚೆ ಆಯುಕ್ತರು ಮತ್ತು ಜಿಲ್ಲಾ ಅಧಿಕ್ಷಕರು ಕೊರಟಗೆರೆ ಅಂಚೆ ನಿರೀಕ್ಷಕ ಹರ್ಷ ಮತ್ತು ಮಲ್ಲೇಕಾವು ಅಂಚೆ ಪಾಲಕ ನಾಗೇಂದ್ರ ಮೇಲೆ ಕರ್ತವ್ಯಲೋಪದ ಅಡಿಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಿದೆ.

    ಅಂಚೆ ನಿರೀಕ್ಷಕನ ದಿವ್ಯ ನಿರ್ಲಕ್ಷ:

    ಕೊರಟಗೆರೆಯ 16 ಅಂಚೆ ಉಪಕಚೇರಿಗಳಿಗೆ ಹರ್ಷ ಎಂಬುವರೇ ಅಂಚೆ ನಿರೀಕ್ಷಕ. ತುಮಕೂರು ನಗರಕ್ಕೆ ಮಾತ್ರ ಸೀಮತವಾಗಿದ್ದು, ಕೊರಟಗೆರೆಗೆ ಸದಾ ಗೈರು. ಇವರು ಕೊರಟಗೆರೆಗೆ ಬರೋದು ಯಾರಿಗೂ ಗೊತ್ತಾಗಲ್ಲ–ಮತ್ತೇ ಹೋಗುವ ದಿನಚರಿಯೇ ತಿಳಿಯೊಲ್ಲ. ಮಲ್ಲೇಕಾವು ಕಚೇರಿಗೆ 30ದಿನದ ಹಿಂದೆಯಷ್ಟೆ ಭೇಟಿ ನೀಡಿ ಹತ್ತಾರು ಸಮಸ್ಯೆಯನ್ನು ಕಣ್ಣಾರೇ ಕಂಡ್ರು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಅಂಚೆ ಇಲಾಖೆಯು ಇವರ ಮೇಲೆ ಮೊದಲು ಶಿಸ್ತು ಕ್ರಮ ಜರುಗಿಸಬೇಕಿದೆ.

    ಅಂಚೆ ಇಲಾಖೆಯಲ್ಲಿ ಮೇಲ್ವಿಚಾರಕ ತನಿಖೆ:

    anche

    ಕೊರಟಗೆರೆ ಅಂಚೆ ನಿರೀಕ್ಷಕ ಹರ್ಷ ಗೈರು ಹಾಜರಿಯಲ್ಲಿ ನೆಪಮಾತ್ರಕ್ಕೆ ಶಿವಕುಮಾರ್ ಮತ್ತು ಮಂಜುನಾಥ ತಂಡದಿಂದ ತನಿಖೆ ನಡೆದಿದೆ. ತನಿಖೆಯ ವೇಳೆ ತಿಂಗಳಿಂದ ಧೂಳು ಹಿಡಿಯುತ್ತಿದ್ದ ಗ್ರಾಹಕರ ನೂರಾರು ದಾಖಲೆಗಳು ದೊರೆತಿವೆ. ತಿಂಗಳ ಹಿಂದೆಯೇ ತನಿಖೆ ನಡೆಸಿದ ಅಂಚೆ ನಿರೀಕ್ಷಕರ ತನಿಖೆಯು ಎಲ್ಲಿಗೇ ಬಂತು ಎಂಬುದೇ ಯಕ್ಷಪ್ರಶ್ನೆಯಾಗಿ ಜನರ ಮುಂದೆ ಉಳಿದಿದೆ.

    ಅಂಚೆ ಇಲಾಖೆ ಮೂಲಕ ಜನರಿಗೆ ತಲುಪುವ ಯಾವುದೇ ದಾಖಲೆ ನಿಗದಿತ ಸಮಯಕ್ಕೆ ಸಿಗುತ್ತಿಲ್ಲ. ಅಂಚೆ ಪಾಲಕ ಕಳೆದ 45ದಿನಗಳಿಂದ ಗೈರು ಹಾಜರಾಗಿ ಸಮಸ್ಯೆ ಸೃಷ್ಟಿಯಾಗಿದೆ. ನೂರಾರು ಜನರ ದಾಖಲೆಗಳು ಅಂಚೆ ಇಲಾಖೆಯಲ್ಲಿ ಕೊಳೆಯುತ್ತಿವೆ. ಕೊರಟಗೆರೆಯ ಅಂಚೆ ನಿರೀಕ್ಷಕರಿಗೆ ಸ್ಥಳೀಯರು ದೂರು ನೀಡಿದ್ರು ಪ್ರಯೋಜನ ಆಗಿಲ್ಲ.

    –ರಾಘವೇಂದ್ರ, ಸ್ಥಳೀಯ ನಿವಾಸಿ, ಸಿ.ಎನ್.ದುರ್ಗ


    ಮಲ್ಲೇಕಾವು ಅಂಚೆ ಪಾಲಕ ಗೈರು ಹಾಜರಿಯ ಬಗ್ಗೆ ಈಗಾಗಲೇ ತನಿಖೆ ನಡೆದಿದೆ. ಅಂಚೆ ಪಾಲಕ ನಾಗೇಂದ್ರಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ತನಿಖೆಯಲ್ಲಿ ಲೋಪದೋಷ ಕಂಡುಬಂದರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ತುರ್ತುಸೇವೆಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಈಗಾಗಲೇ ಅಂಚೆ ನಿರೀಕ್ಷಕರಿಗೆ ಸೂಚಿಸಿದ್ದೇನೆ.

    –ಗೋವಿಂದರಾಜು, ಅಧೀಕ್ಷಕ, ಅಂಚೆ ಇಲಾಖೆ, ತುಮಕೂರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬಸ್‌ ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ತಂಗುದಾಣಗಳಿಲ್ಲದೆ ತೀವ್ರ ತೊಂದರೆಯಾಗುತ್ತಿದೆ.…

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.