ಬೆಳಗಾವಿ: ಜೆಡಿಎಸ್ ಪಂಚರತ್ನ ಯಾತ್ರೆ ಮಾಡುವ ಬದಲು ನವಗ್ರಹ ಯಾತ್ರೆ ಮಾಡಲಿ. ಕರ್ನಾಟಕದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಸಚಿವ ಪ್ರಹ್ಲಾದ ಜೋಷಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಬಿಜೆಪಿಯು ದೇಶದ ಅಭಿವೃದ್ಧಿಯಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡಿದ್ದ ಆರ್ಟಿಕಲ್ 370ಯನ್ನು ಕಿತ್ತೆಸೆದಿದ್ದು ಇಂದಿಗೂ ಪ್ರಂಶಂಸನಾರ್ಹ. ಕಿತ್ತೂರ ರಾಣಿ ಚೆನ್ನಮ್ಮ ನಾಡಿನಲ್ಲಿ ಕಾಂಗ್ರೆಸ್ ಬಡವರನ್ನ ನಿರ್ಮೂಲನೆ ಮಾಡಿದ್ದಾರೆ.
ಕಾಂಗ್ರೆಸ್ ತಮ್ಮ ಟೈಮ್ ನಲ್ಲಿ ಕರೆಂಟ್ ಉಚಿತ ಕೊಡಲಿಲ್ಲ ಇವಾಗ ಫ್ರೀ ಆಮಿಷ ಒಡ್ಡಿದ್ದಾರೆ. ಸುಳ್ಳು ಹೇಳುವುದರಲ್ಲೇ ಕಾಂಗ್ರೆಸ್ ಜೀವನ ಕಳೆದಿದೆ ಇನ್ನು ಜೆ ಡಿಎಸ್ ಮೇಲೆ ಡೈರೆಕ್ಟ್ ವಾರ್ ಮಾಡಿದ ಅವರು “ಪಂಚ ರತ್ನ ಅಲ್ಲ ನವ ಗ್ರಹ ಯಾತ್ರೆ ಮಾಡಲಿ” ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


