nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಾವಗಡ: ಶಾಲೆಗಳಲ್ಲಿ ಅಣುಕು ಮತದಾನ: ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪರಿಣಾಮಕಾರಿ ಪ್ರಯೋಗ

    July 4, 2026

    ಎಲ್ಲ ದಾನಗಳಿಗಿಂತ ಅನ್ನ, ನೀರು ಹಾಗೂ ವಸ್ತ್ರ ದಾನ ಶ್ರೇಷ್ಠ: ಸೌಮ್ಯ ಅನಿಲ್ ಚಿಕ್ಕಮಾದು

    July 4, 2026

    ಮಾದರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ: ಅಧ್ಯಕ್ಷ ಗೋಪಾಲಯ್ಯ ವಿರುದ್ಧ ಬಾಣದ ರಂಗಯ್ಯ ಆಕ್ರೋಶ

    July 4, 2026
    Facebook Twitter Instagram
    ಟ್ರೆಂಡಿಂಗ್
    • ಪಾವಗಡ: ಶಾಲೆಗಳಲ್ಲಿ ಅಣುಕು ಮತದಾನ: ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪರಿಣಾಮಕಾರಿ ಪ್ರಯೋಗ
    • ಎಲ್ಲ ದಾನಗಳಿಗಿಂತ ಅನ್ನ, ನೀರು ಹಾಗೂ ವಸ್ತ್ರ ದಾನ ಶ್ರೇಷ್ಠ: ಸೌಮ್ಯ ಅನಿಲ್ ಚಿಕ್ಕಮಾದು
    • ಮಾದರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ: ಅಧ್ಯಕ್ಷ ಗೋಪಾಲಯ್ಯ ವಿರುದ್ಧ ಬಾಣದ ರಂಗಯ್ಯ ಆಕ್ರೋಶ
    • ಮಧುಗಿರಿ ಬಿಜೆಪಿ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಆಯ್ಕೆಗೆ ತಾತ್ಕಾಲಿಕ ತಡೆ: ಬಿ.ಎಚ್. ಅನಿಲ್ ಕುಮಾರ್
    • ಮತದಾರರ ಪರಿಷ್ಕರಣೆಯಿಂದ ಬಾಂಗ್ಲಾ ದೇಶದ ವಲಸೆಗಾರರನ್ನು ಹೊರಗಿಡಿ: ಜೆಡಿಎಸ್ ಒತ್ತಾಯ
    • ಮಕ್ಕಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಶಿಕ್ಷಣಾಧಿಕಾರಿ ಮಮತಾಮಣಿ ಕರೆ
    • ಸರ್ಕಾರಿ ಶಾಲೆಗಳ ಅಳಿವು — ಉಳಿವು ಸರ್ಕಾರದ ನಿರ್ಧಾರದಲ್ಲಿದೆ: ಪೋಷಕರು—ಶಿಕ್ಷಕರು ಎಚ್ಚರವಹಿಸಿ: ಶ್ರೀ ರುದ್ರಮುನಿ ಸ್ವಾಮೀಜಿ
    • ಮಿಡಿಗೇಶಿ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ವಿರುದ್ಧ ಪ್ರಕರಣ ದಾಖಲು
    ರಾಜ್ಯ ಸುದ್ದಿ July 17, 2023

    ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ವಿರುದ್ಧ ಪ್ರಕರಣ ದಾಖಲು

    By adminJuly 17, 2023No Comments2 Mins Read
    palanivel muthuvel

    ಪಾನಮತ್ತರಾಗಿ ಚಾಲನೆ ಮಾಡಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು, ಔಡಿ ಕಾರು ಜಪ್ತಿ ಮಾಡಿದ್ದಾರೆ.

    ಕಾರು ಜಪ್ತಿ ವಿಚಾರವಾಗಿ ಸಂಚಾರ ಪೊಲೀಸರು ಹಾಗೂ ಸ್ಥಳೀಯರ ನಡುವೆ ಜಟಾಪಟಿ ನಡೆದಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ಜಟಾಪಟಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ‘ರಾಜಕಾರಣಿಯೊಬ್ಬರಿಂದ ಕಾನ್‌ ಸ್ಟೆಬಲ್ ಗೆ ಕರೆ ಮಾಡಿಸಿದ್ದ ಪಳನಿವೇಲ್, ಪಾನಮತ್ತ ಸ್ಥಿತಿಯಲ್ಲಿ ಕಾರು ಸಮೇತ ಸ್ಥಳದಿಂದ ಹೊರಟು ಹೋಗಲು ಪ್ರಯತ್ನಿಸಿದ್ದ. ಇದಕ್ಕೆ ಕೆಲ ಪೊಲೀಸರು ಸಹಕರಿಸಿದ್ದರು. ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯವೇ? ‘ ಎಂದು ಸ್ಥಳೀಯರು ದೂರು ನೀಡಿದ್ದಾರೆ.

    ಪ್ರತಿದೂರು ನೀಡಿರುವ ಪೊಲೀಸರು, ‘ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಕೆಲ ಸ್ಥಳೀಯರು, ಮಾಧ್ಯಮದವರ ಹೆಸರು ಹೇಳಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಾವು ಪುನೀತ್ ಕೆರೆಹಳ್ಳಿ ಕಡೆಯವರೆಂದು ಅವರೆಲ್ಲ ಹೇಳುತ್ತಿದ್ದರು’ ಎಂದು ಆರೋಪಿಸಿದ್ದಾರೆ.

    ಅಪಘಾತದ ಸಂದರ್ಭದಲ್ಲಿ ಪರಾರಿಗೆ ಯತ್ನ: ‘ಆಸ್ಪತ್ರೆಯೊಂದರ ವಿಭಾಗದ ಮುಖ್ಯಸ್ಥರೆಂದು ಹೇಳಿಕೊಳ್ಳುವ ಪಳನಿವೇಲ್, ಶುಕ್ರವಾರ ರಾತ್ರಿ ಮದ್ಯ ಸೇವಿಸಿ ತಮ್ಮ ಔಡಿ ಕಾರು (ಕೆಎ 03 ಎನ್‌ಸಿ 8338) ಚಲಾಯಿಸಿಕೊಂಡು ಹೊರಟಿದ್ದರು. ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದರು. ಅದನ್ನು ನೋಡಿದ್ದ ಸ್ಥಳೀಯರು, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

    ‘ಕಾರು ತಡೆದಿದ್ದ ಪೊಲೀಸರು, ಪಳನಿವೇಲ್‌ ನನ್ನು ವಿಚಾರಿಸುತ್ತಿದ್ದರು. ಅದೇ ವೇಳೆ ಸಮೀಪದಲ್ಲಿಯೇ ವಾಹನವೊಂದು ಉರುಳಿಬಿದ್ದು ಅಪಘಾತವಾಗಿತ್ತು. ರಕ್ಷಣೆಗೆಂದು ಎಲ್ಲ ಪೊಲೀಸರು, ಸ್ಥಳಕ್ಕೆ ಓಡಿ ಹೋಗಿದ್ದರು. ಆಗ ಪಳನಿವೇಲ್, ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು’ ಎಂದು ಹೇಳಿವೆ. ಕಾರು ಅಡ್ಡಗಟ್ಟಿ ಪೊಲೀಸರಿಗೆ ತರಾಟೆ,
    ಪಳನಿವೇಲ್ ಕಾರು ಅಡ್ಡಗಟ್ಟಿದ್ದ ಸ್ಥಳೀಯರು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಳನಿವೇಲ್ ಪರಾರಿಯಾಗುತ್ತಿದ್ದರೂ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದರು. ಇ

    ದೇ ವಿಚಾರವಾಗಿ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳೀಯರ ಎದುರೇ ಆಲೋಮೀಟರ್ ಹಿಡಿದು ಪಳನಿವೇಲ್ ಅವರನ್ನು ಪೊಲೀಸರು ತಪಾಸಣೆ ನಡೆಸಿದರು. ಮದ್ಯ ಕುಡಿದಿದ್ದು ಗೊತ್ತಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು, ಕಾರು ಜಪ್ತಿ ಮಾಡಿದರು. ನ್ಯಾಯಾಲಯದಲ್ಲಿ ದಂಡ ಪಾವತಿಸಿ ಕಾರು ಬಿಡಿಸಿಕೊಳ್ಳುವಂತೆ ನೋಟಿಸ್ ನೀಡಿ ಕಳುಹಿಸಿದರು ಎಂಬುದಾಗಿ ಮೂಲಗಳು ಹೇಳಿವೆ.

    ಕಮಿಷನ್ ವಂಚನೆ: ಕೆಲಸದಿಂದ ವಜಾ ‘ಸ್ಪರ್ಶ ಆಸ್ಪತ್ರೆಯ ಬ್ರಾಂಡಿಂಗ್ ಮುಖ್ಯಸ್ಥ’ರಾಗಿ ಪಳನಿವೇಲ್ ಕೆಲಸ ಮಾಡುತ್ತಿದ್ದರು. 2022-23ನೇ ಸಾಲಿನಲ್ಲಿ ಆಸ್ಪತ್ರೆಯ ಬ್ರಾಂಡಿಂಗ್ ಕೆಲಸಕ್ಕಾಗಿ ಸುಮಾರು 1 8 ಕೋಟಿ ಬಜೆಟ್ ಮಾಡಿ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರರಿಂದ ಶೇ 4ರಿಂದ ಶೇ 10ರಷ್ಟು ಕಮಿಷನ್ ಪಡೆದು ಆಸ್ಪತ್ರೆಗೆ ವಂಚಿಸಿದ್ದರು. ಈ ಸಂಬಂಧ ಆಸ್ಪತ್ರೆಯ ಸಿಇಒ ಜೋಸೆಫ್ ಅವರು ವಿಧಾನಸೌಧ ಠಾಣೆಗೆ ಫೆ. 3ರಂದು ದೂರು ನೀಡಿದ್ದರು. ಇದಾದ ನಂತರ ಪಳನಿವೇಲ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಔಡಿ ಕಾರು ಖರೀದಿಸಿದ್ದ ಪಳನಿವೇಲ್ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಮೂಲಗಳು ಹೇಳಿವೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


    Provided by
    Provided by
    admin
    • Website

    Related Posts

    ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ

    July 3, 2026

    SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!

    June 30, 2026

    10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!

    June 30, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಪಾವಗಡ: ಶಾಲೆಗಳಲ್ಲಿ ಅಣುಕು ಮತದಾನ: ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪರಿಣಾಮಕಾರಿ ಪ್ರಯೋಗ

    July 4, 2026

    ಪಾವಗಡ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಮಹತ್ವದ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲು ಶಾಲೆಗಳಲ್ಲಿ ಅಣುಕು ಮತದಾನ (Mock…

    ಎಲ್ಲ ದಾನಗಳಿಗಿಂತ ಅನ್ನ, ನೀರು ಹಾಗೂ ವಸ್ತ್ರ ದಾನ ಶ್ರೇಷ್ಠ: ಸೌಮ್ಯ ಅನಿಲ್ ಚಿಕ್ಕಮಾದು

    July 4, 2026

    ಮಾದರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ: ಅಧ್ಯಕ್ಷ ಗೋಪಾಲಯ್ಯ ವಿರುದ್ಧ ಬಾಣದ ರಂಗಯ್ಯ ಆಕ್ರೋಶ

    July 4, 2026

    ಮಧುಗಿರಿ ಬಿಜೆಪಿ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಆಯ್ಕೆಗೆ ತಾತ್ಕಾಲಿಕ ತಡೆ: ಬಿ.ಎಚ್. ಅನಿಲ್ ಕುಮಾರ್

    July 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.