ಉದ್ಯೋಗಕ್ಕೆ ಕಂಪನಿಗಳ ಮೊರೆ ಹೋಗದೆ ಸಮಾಜಮುಖಿ ವಕೀಲ ವೃತ್ತಿಗೆ ಕಾನೂನು ಪದವೀಧರರು ಬರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್. ಟಿ. ನರೇಂದ್ರ ಪ್ರಸಾದ್ ಹೇಳಿದರು.
ಸಿಡೆದಹಳ್ಳಿಯ ಸೌಂದರ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ವಕೀಲರಿಗೆ ಕೆಲಸವಿಲ್ಲವೆಂಬ ತಪ್ಪು ಭಾವನೆಯಿದೆ. ಅದು ಸುಳ್ಳಾಗಿದೆ. ಉದಾಹರಣೆಗೆ ಅಮೆರಿಕದಲ್ಲಿ 250 ಜನರಿಗೆ ಒಬ್ಬ ವಕೀಲರಿದ್ದಾರೆ. ಇಂಗ್ಲೆಂಡ್ ನಲ್ಲಿ 500 ಜನರಿಗೆ ಒಬ್ಬ ವಕೀಲನಿದ್ದರೆ, ಭಾರತದಲ್ಲಿ ಒಂದು ಸಾವಿರ ಜನರಿಗೆ ಒಬ್ಬರಿದ್ದಾರೆ. ಇದನ್ನು ಮನಗಂಡು ಪ್ರತಿಯೊಬ್ಬ ಕಾನೂನು ಪದವೀಧರರು ಸಮಾಜಮುಖಿಯಾದ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆಶಿಸುತ್ತೇನೆ’ ಎಂದರು.
ಕಾಲೇಜಿನ ಸಂಸ್ಥಾಪಕ ಪಿ. ಮಂಜಪ್ಪ ಮಾತನಾಡಿ ನೂತನ ಆವಿಷ್ಕಾರಗಳು ಬಂದಾಗ ಅದನ್ನು ನಾವು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಕಾಲೇಜಿನ ಸಿಇಒ ಎಂ. ಕೀರ್ತನ್ ಕುಮಾರ್ ಮಾತನಾಡಿದರು. ಪ್ರಾಂಶುಪಾಲ ಡಾ. ಮಹೇಶ್, ಟ್ರಸ್ಟಿ ವರುಣ್ ಕುಮಾರ್, ಬಿಸಿಎ ವಿಭಾಗದ ಮುಖ್ಯಸ್ಥೆ ರೇಖಾ, ಸಿಮ್ಸ್ ಕಾಲೇಜಿನ ನಿರ್ದೇಶಕ ವಾಸು, ಪ್ರಾಂಶುಪಾಲ ಸಂಜೀವ್ ಸಾಲಂಕಿ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


