ಮಧುಗಿರಿ : ಸ್ವಂತ ‘ ಮನೆಗೆ ಓಡಾಡಲು ಇದ್ದ ರಸ್ತೆಗೆ ಕೆಲವರು ಗುಂಡಿ ತೆಗೆದ ಕಾರಣ ಮಹಿಳೆಯೊಬ್ಬರು ಠಾಣೆ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಘಟನೆ ನಡೆದಿದೆ.ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಎಸ್. ಅಪ್ಪೇನಹಳ್ಳಿ ವಾಸಿ ರತ್ನ ‘ ಎಂಬುವ ಮಹಿಳೆಯೇ ಧರಣಿ ಕೂತವರು , ಈಕೆ ತಾಲೂಕು ಬಿಜೆಪಿ ಪಕ್ಷದ ಮಾಜಿ ಮಹಿಳಾ ಅಧ್ಯಕ್ಷಿಯಾಗಿದ್ದರು .
ಘಟನ ಹಿನ್ನಲೆ :
ಸ್ವಗ್ರಾಮ ಎಸ್ ಅಷ್ಟೇನಹಳ್ಳಿಯಲ್ಲಿ ಇವರು ರಸ್ತೆ ಬದಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಹಲವಾರು ವರ್ಷದಿಂದ ರಸ್ತೆ ಬದಿಯ ಜಾಗದಲ್ಲೇ ಮನೆಗೆ ಓಡಾಡುತ್ತಿದ್ದರು . ಆದರೆ ಈ ಜಾಗ ಗ್ರಾಮ ಠಾಣಾಜಾಗವಾಗಿದ್ದು, ದಾಖಲೆಯಲ್ಲಿ ಸರಕಾರಿ ಜಾಗವೆಂದು ನಮೂದಾಗಿದೆ. ಆದರೆ ಇದು ನಮ್ಮ ಜಾಗವೆಂದು ಅದೇ ಗ್ರಾಮದ ಹನುಮಕ್ಕ ಎಂಬುವವರು ಕೋರ್ಟ್ ಮೊರೆ ಹೋಗಿದ್ದರು . ಈಗ ಕೋರ್ಟ್ ತೀರ್ಪು ನಮ್ಮ ಪರವಾಗಿದೆ ಎಂದು ಇಬ್ಬರೂ ವಾದಿಸುತ್ತಿದ್ದು , ಇದಕ್ಕೆ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ರತ್ನ ಎಂಬುವವರ ಓಡಾಡುವ ರಸ್ತೆಗೆ ಗುಂಡಿ ತೆಗೆದಿದ್ದು , ಓಡಾಡಲು ಈಗ ಜಾಗವಿಲ್ಲದಾಗಿದೆ .
ಮೂಲಭೂತ ಹಕ್ಕಿಗೆ ರತ್ನ ಮನವಿ :
ದೇಶದಲ್ಲಿ ಪ್ರತಿ ಪ್ರಜೆಗೆ ಕುಡಿಯುವ ನೀರು ನಿವೇಶನ , ಮನೆ, ಮನೆ ಹಾಗೂ ಜಮೀನಿಗೆ ರಸ್ತೆ ಪಡೆಯುವುದು ನಂವಿಧಾನ ನೀಡಿರುವ ಮೂಲಭೂತ ಹಕ್ಕು , ನಾವು ಯಾವುದೇ ಗ್ರಾಮ ಠಾಣಾ ಜಾಗ ಕೇಳುತ್ತಿಲ್ಲ . ನಾವು ವಾಸಿಸುವ ಮನೆಗೆ ಓಡಾಡಲು ರಸ್ತೆ ಕೇಳುತ್ತಿದ್ದು ಅದನ್ನು ಕೊಡಿಸುವಂತೆ ಕೇಳುತ್ತಿದ್ದೇನೆ ಗ್ರಾ.ಪಂ. ಹಾಗೂ ಪೊಲೀಸರು ಈ ವಿಚಾರದಲ್ಲಿ ನ್ಯಾಯ ಸಮ್ಮತವಾಗಿ ನಡೆದುಕೊಂಡು ನಮಗೆ ರಸ್ತೆ ಬಿಡಿಸಿಕೊಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ , ಆದರೆ ಹನುಮಕ್ಕ ಎಂಬುವವರು ಸರಕಾರಿ ಜಾಗ ಎಂಬ ಸ್ಥಳವನ್ನು ಇದು ನಮ್ಮ ಪೂರ್ವಜನರು ನಮಗೆ ನೀಡಿರುವ ಜಾಗವಾಗಿದ್ದು ಕೋರ್ಟಿನಲ್ಲಿ ನಮ್ಮ ಪರವಾಗಿದೆ ಎಂದು ಹೇಳುತ್ತಿದ್ದು ಅಧಿಕಾರಿಗಳು ಮೂಲಭೂತ ಹಕ್ಕುಗಳ ರಕ್ಷಣೆ ಮಾಡುತ್ತಾರೆ ಎಂಬುದು ನೋಡಬೇಕಿದೆ .
ಈ ಜಾಗ ಸರಕಾರಿ ಜಾಗವಾಗಿದ್ದು , ಸುಮಾರು ವರ್ಷದಿಂದ ಹನುಮಕ್ಕನವರ ಪೂರ್ವಜರದ್ದು ಎಂದು ಹೇಳುತ್ತಿದ್ದಾರೆ . ರತ್ನ ಎಂಬುವವರ ಮನೆಗೆ ಹಿಂದೆಲ್ಲ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು . ಆದರೆ ಪ್ರಕರಣ ಕೋರ್ಟ್ನಲ್ಲಿರುವ ಕಾರಣ ಮುಂದಿನ ಆದೇಶ ನೋಡಿ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಬೇಡತ್ತೂರು ಪಿಡಿಓ ದಿವಾಕರ್ ಹೇಳಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


