ನಗರದ ಹೊರವಲಯದಲ್ಲಿ ಉದ್ದೇಶಿತ ವರ್ತುಲ ರಸ್ತೆ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳಲಿರುವ ಮಾಲೀಕರು ಹಾಗೂ ರೈತರ ಜತೆ ಡಿ. ಕೆ ಶಿವಕುಮಾರ್ ಅವರು ಸೋಮವಾರ ಸಂವಾದ ನಡೆಸಿದರು. ಬಳಿಕ ಮಾತನಾಡಿ, 18 ವರ್ಷದಿಂದ ಪೆರಿಫೆರಲ್ ರಸ್ತೆ ನೆನೆಗುದಿಗೆ ಬಿದ್ದಿದೆ.
ಅನೇಕ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಂಡಿದೆ. ಕೋರ್ಟ್ ಆದೇಶ ಕೂಡ ಕೊಟ್ಟಿದೆ. ರೈತರಿಗೆ ಸಹಾಯ ಆಗುತ್ತಿಲ್ಲ. ರೈತರು ಎನ್ ಒ ಸಿ ಕೇಳುತ್ತಿದ್ದು, ಕೊಡುವುದಕ್ಕೆ ಆಗಲ್ಲ ಅಂತ ಹೇಳಿದ್ದೇವೆ. ನನ್ನ ಕಾಲದಲ್ಲಿ ಡಿನೋಟಿಫಿಕೇಷನ್ ಮಾಡಲು ಆಗಲ್ಲ. 2013ರ ಕಾಯ್ದೆ ಪ್ರಕಾರ ಪರಿಹಾರ ಕೇಳಿದ್ದಾರೆ.
ಇದರ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇನೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಆರಂಭಕ್ಕೆ ಚಾಲನೆ ಕೊಡುತ್ತೇವೆ. ಹಾಗು 24 ಗಂಟೆ ಹೋಟೆಲ್ ಗಳಿಗೆ ವ್ಯಾಪಾರ ಮಾಡಲು ಬಿಡುವ ಬಗ್ಗೆ ಮುಂದೆ ನೋಡಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


