nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾಳೆ(ಜು.6) ಸಿಎಂ ಡಿ.ಕೆ.ಶಿವಕುಮಾರ್ ಬೀದರ್ ಪ್ರವಾಸ: ನೂತನ ಅನುಭವ ಮಂಟಪ ಕಾಮಗಾರಿ ಪರಿಶೀಲನೆ

    July 5, 2026

    ಸಮಾಜದ ಹಿತಕ್ಕಾಗಿ ಪತ್ರಿಕೋದ್ಯಮ ಬಳಕೆಯಾಗಲಿ: ರಶ್ಮಿ ಎಸ್.

    July 5, 2026

    ಶೀಘ್ರವೇ ಕಾಡುಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರಿಸಲು ಕ್ರಮ: ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ

    July 5, 2026
    Facebook Twitter Instagram
    ಟ್ರೆಂಡಿಂಗ್
    • ನಾಳೆ(ಜು.6) ಸಿಎಂ ಡಿ.ಕೆ.ಶಿವಕುಮಾರ್ ಬೀದರ್ ಪ್ರವಾಸ: ನೂತನ ಅನುಭವ ಮಂಟಪ ಕಾಮಗಾರಿ ಪರಿಶೀಲನೆ
    • ಸಮಾಜದ ಹಿತಕ್ಕಾಗಿ ಪತ್ರಿಕೋದ್ಯಮ ಬಳಕೆಯಾಗಲಿ: ರಶ್ಮಿ ಎಸ್.
    • ಶೀಘ್ರವೇ ಕಾಡುಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರಿಸಲು ಕ್ರಮ: ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ
    • ತುಮಕೂರು: ನಿರಾಶ್ರಿತರ ಕೇಂದ್ರದಲ್ಲಿದ್ದ ಅಪರಿಚಿತರಿಬ್ಬರು ಸಾವು: ವಾರಸುದಾರರಿಗೆ ವಿಶೇಷ ಸೂಚನೆ
    • ಎಸ್ ಐಆರ್ | ಬಿಎಲ್‌ ಒಗಳ ಕರ್ತವ್ಯಕ್ಕೆ ಜೆಡಿಎಸ್ ಕಾರ್ಯಕರ್ತರಿಂದ ಅಡ್ಡಿ: ಕಾಂಗ್ರೆಸ್ ವಕ್ತಾರ ಎಚ್.ಎಸ್.ದೀಪಕ್‌ ಗೌಡ ಗಂಭೀರ ಆರೋಪ
    • ಗ್ರಾಮೀಣ ಮಹಿಳೆಯರು ಅಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯಿರಿ: ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ನಂಜೇಗೌಡ ಕರೆ
    • ವೈದ್ಯರ, ಔಷಧಿಗಳ ಕೊರತೆ ಪರಿಹರಿಸಲು ಶೀಘ್ರ ಕ್ರಮ: ಟಿ.ಬಿ.ಜಯಚಂದ್ರ
    • ತೆಂಗಿನಕಾಯಿ ಸಂಸ್ಕರಣಾ ಕಾರ್ಖಾನೆ ಮೇಲೆ ದಾಳಿ: 7 ಬಾಲ ಕಾರ್ಮಿಕರ ರಕ್ಷಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿಯೂ ಕಮೀಷನ್ ದಂಧೆ: ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ
    ರಾಜ್ಯ ಸುದ್ದಿ August 5, 2023

    ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿಯೂ ಕಮೀಷನ್ ದಂಧೆ: ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ

    By adminAugust 5, 2023No Comments2 Mins Read
    kumaraswami 2

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಮಾಡುವ ಮಹಾನುಭಾವರು ಬಿಬಿಎಂಪಿಯಲ್ಲಿ 710 ಕೋಟಿ ರೂಪಾಯಿ ಗುತ್ತಿಗೆದಾರರ ಹಣವನ್ನು ಯಾಕೆ ಬಿಡುಗಡೆ ಮಾಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

    ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಬಿಜೆಪಿ ಸರ್ಕಾರ ಇದ್ದಾಗ ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈಗೆಲ್ಲಿದ್ದಾರೆ ಎಂದು ಕೇಳಿದರು.

    ಗುತ್ತಿಗೆದಾರರ ಬಾಕಿ ಬಿಲ್ಲುಗಳನ್ನು ಯಾಕೆ ತಡೆ ಹಿಡಿದ್ದಾರೆ? ಬೆಂಗಳೂರು ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 710 ಕೋಟಿ ಹಣ ರಿಲೀಸ್ ಮಾಡಿಸಿಲ್ಲ. ಇದರ ಹಿಂದಿರುವ ಅಸಲಿ ಕಾರಣವನ್ನು ಜನರಿಗೆ ಕೊಂಚ ಹೇಳಬೇಕಲ್ಲವೇ ಎಂದು ಅವರು ಒತ್ತಾಯಿಸಿದರು.

    ಕಳೆದ ಮೇ ತಿಂಗಳಲ್ಲಿ ಗುತ್ತಿಗೆದಾರರಿಗೆ 710 ಕೋಟಿ ರೂ. ಬಿಡುಗಡೆ ಆಯಿತು. ಅವತ್ತಿನ ದಿನವೇ ಕಾಂಗ್ರೆಸ್ ಪಕ್ಷದ ಎಂಪಿ ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು. ನಮ್ಮ ಸರ್ಕಾರ ಬರ್ತಾ ಇದೆ, ಒಂದು ರೂಪಾಯಿ ಬಿಡುಗಡೆ ಆಗಬಾರದು ಅಂತ ತಾಕೀತು ಮಾಡಿದರು. ಆ ಹಣವನ್ನು ಹಾಗೆಯೇ ಬ್ಯಾಂಕ್ ಖಾತೆಯಲ್ಲಿ ಇಟ್ಟರು. ಆ ಹಣ ಬಿಡುಗಡೆಗೆ ಹಲವಾರು ಸಭೆಗಳು ಆದವು. 5 ಪರ್ಸೆಂಟ್ ನಿಂದ 10 ಪರ್ಸೆಂಟ್ ಡಿಮ್ಯಾಂಡ್ ಮಾಡಲಾಗುತ್ತಿದೆ ಈಗ. ಗುತ್ತಿಗೆದಾರರ ಪರವಾಗಿ ಒಬ್ಬ ಅಧಿಕಾರಿ ಹೋದರೆ, 10ರಿಂದ 15 ಪರ್ಸೆಂಟ್ ಕೊಟ್ಟರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿ ಕಳಿಸಿದ್ದಾರೆ. ಇವರು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಅವರ ಮನೆಯಲ್ಲಿ ಸಿಸಿಟಿವಿ ಇದೆಯಾ? ಇದ್ದರೆ ಯಾರು ಅವರ ಮನೆಗೆ ಹೋಗಿದ್ದರು ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದರು ಅವರು.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ ಸುರ್ಜೇವಾಲ ಅವರನ್ನು ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಕೂರಿಸಿಕೊಂಡಿದ್ದಿರಿ? ನಿನ್ನೆ ಹೇಳಿದ್ದರಲ್ಲ, ಅಣ್ಣ ಹೇಳಿದರೆ ತಮ್ಮ ಕೇಳಬೇಕು ಅಂತಾ, ಆವರಿಗೆ ಹೇಳಲು ಬಯಸುತ್ತೇನೆ. ಮೊದಲು ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ, ಒಂದು ಮಾಡಲು ಆಗದಿದ್ದರೆ ಅದಕ್ಕಿರುವ ಕಾರಣವನ್ನದಾರೂ ತಿಳಿಸಿ ಎಂದು ಅವರು ಟಾಂಗ್ ನೀಡಿದರು.

    ಪ್ರತಿಯೊಂದಕ್ಕೂ ಕೈ ಚಾಚುವ, ಜನರ ರಕ್ತ ಹೀರುವ ಇಂಥ ದರಿದ್ರ ಸರ್ಕಾರ, ಇಂತಹ ಕೆಟ್ಟ ಸರ್ಕಾರವನ್ನು ನಾನು ಎಲ್ಲಿಯೂ ನೋಡಿಲ್ಲ. ಅದು ಗೊತ್ತಿದ್ದರೂ ನನ್ನ ಕೆಣಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಣಕಲಿ, ಕಾಯ್ತಾ ಇದ್ದೇನೆ. ಕೆಣಕಲಿ, ಸೂಟ್ ಕೇಸ್ ಗಟ್ಟಲೇ ದಾಖಲೆ‌ಗಳು ನನ್ನ ಬಳಿ ಇವೆ ಎಂದು ಎಚ್ಚರಿಕೆ ನೀಡಿದರು ಕುಮಾರಸ್ವಾಮಿ.

    ನಾನು ಈ ಕೂಡಲೇ ದಾಖಲೆ ಬಿಡುಗಡೆ ಮಾಡುತ್ತೇನೆ. ಆರೋಪಿತ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವ ಧೈರ್ಯ ಸಿಎಂಗೆ ಇದೆಯಾ? ಒಂದು ವೇಳೆ ನಾನು ದಾಖಲೆ ಬಿಡುಗಡೆ ಮಾಡಿದರೆ ನಕಲಿ ಅಂತಾರೆ, ಮಿಮಿಕ್ರಿ ಅಂತಾರೆ. ಅದಕ್ಕೆ ಕಾದು ಸರಿಯಾದ ಸಮಯದಲ್ಲಿಯೇ ಪೆನ್ ಡ್ರೈವ್ ಹೊರ ಬಿಡುತ್ತೇನೆ. ನನ್ನ ಬಳಿ ಇರುವುದು ಎಸ್ ಪಿ ರೋಡ್ ಪೆನ್ ಡ್ರೈವ್ ಅಲ್ಲ, ಆ ರಸ್ತೆಗೆ ಹೋಗಿ ಪೆನ್ ಡ್ರೈವ್ ತಯಾರು ಮಾಡುವ ಕರ್ಮ ನನಗೇಕೆ? ಅವರ ಪಕ್ಷದವರೇ ತಯಾರು ಮಾಡುತ್ತಿದ್ದಾರಲ್ಲ ಎಂದು ತಮ್ಮ ಟೀಕಾಕಾರರಿಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ ಅವರು.

    ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಕಮೀಷನ್ ದಂಧೆ ಶುರುವಾಗಿದೆ. ಅದಕ್ಕಾಗಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದಾರೆ! ಅದಕ್ಕಾಗಿ 15-20 ವರ್ಷ ಕೆಲಸ ಮಾಡಿರುವ ಒಬ್ಬ ಚೀಫ್ ಎಂಜಿನಿಯರ್ ಒಬ್ಬರನ್ನು ಇಟ್ಟುಕೊಂಡಿದ್ದಾರೆ. ಅಲ್ಲಿ ಫೈಲ್ ಟ್ರಾನ್ಸ್‌ಫರ್ ಮಾಡೋದಕ್ಕೆ 15% ಕೊಡಬೇಕಿದೆ. ಕೆ.ಟಿ ನಾಗರಾಜ್ ಎಂಬುವರ ಮೂಲಕ 15% ಕಮೀಷನ್ ಪಡೆಯಲಾಗುತ್ತಿದೆ ಎಂದು ಎಂದು ಅವರು ಆರೋಪ ಮಾಡಿದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


    Provided by
    Provided by
    admin
    • Website

    Related Posts

    ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ

    July 3, 2026

    SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!

    June 30, 2026

    10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!

    June 30, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ನಾಳೆ(ಜು.6) ಸಿಎಂ ಡಿ.ಕೆ.ಶಿವಕುಮಾರ್ ಬೀದರ್ ಪ್ರವಾಸ: ನೂತನ ಅನುಭವ ಮಂಟಪ ಕಾಮಗಾರಿ ಪರಿಶೀಲನೆ

    July 5, 2026

    ಬೀದರ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಜುಲೈ 6ರ ಸೋಮವಾರದಂದು ಬೀದರ್ ಜಿಲ್ಲೆಗೆ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದಾರೆ. ಮುಖ್ಯಮಂತ್ರಿಗಳ…

    ಸಮಾಜದ ಹಿತಕ್ಕಾಗಿ ಪತ್ರಿಕೋದ್ಯಮ ಬಳಕೆಯಾಗಲಿ: ರಶ್ಮಿ ಎಸ್.

    July 5, 2026

    ಶೀಘ್ರವೇ ಕಾಡುಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರಿಸಲು ಕ್ರಮ: ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ

    July 5, 2026

    ತುಮಕೂರು: ನಿರಾಶ್ರಿತರ ಕೇಂದ್ರದಲ್ಲಿದ್ದ ಅಪರಿಚಿತರಿಬ್ಬರು ಸಾವು: ವಾರಸುದಾರರಿಗೆ ವಿಶೇಷ ಸೂಚನೆ

    July 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.