ದೇಶಾದ್ಯಂತ ಜಿಯೋ ಸರ್ವರ್ ಡೌನ್ ಆಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಎಕ್ಸ್, ಸ್ನ್ಯಾಪ್ಚಾಟ್, ಯೂಟ್ಯೂಬ್ ಮತ್ತು ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನ ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.
ಕಳೆದ ಬಾರಿ ಏಪ್ರಿಲ್‌ನಲ್ಲೂ ಇದೇ ರೀತಿ ಜಿಯೋ ಸರ್ವರ್ ಸ್ಥಗಿತಗೊಂಡಿದ್ದು, ಈ ಬಾರಿಯೂದೇಶಾದ್ಯಂತ ಸಾವಿರಾರು ಜಿಯೋ ಬಳಕೆದಾದರು ಇದು ಇಂಟರ್ ನೆಟ್ ಸೇವೆಯಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆಂದು ವರದಿಯಾಗಿದೆ. ಹಾಗಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ #JioDown ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ರೋಲ್ ಮಾಡಿದ್ದರು.
ಡೌನ್ ಡೆಕ್ಟ್ ವರದಿಯ ಪ್ರಕಾರ 54% ಬಳಕೆದಾರರು ಮೊಬೈಲ್ ಇಂಟರ್ ನೆಟ್ ಸಮಸ್ಯೆಗಳನ್ನು ಎದುರಿಸಿದರೆ, 38% ಜನರು ಜಿಯೋ ಫೈಬರ್ ಸಮಸ್ಯೆಗಳನ್ನು ಎದುರಿಸಿದ್ದಾರೆ. 7% ಮೊಬೈಲ್ ನೆಟ್ ವರ್ಕ್ ಅಡೆತಡೆಗಳನ್ನು ಅನುಭವಿಸಿದ್ದಾರೆ. ಆದರೂ ಈ ಸಮಸ್ಯೆಗಳ ಬಗ್ಗೆ ಇನ್ನು ಕೂಡಾ ಜಿಯೋ ಕಂಪನಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಮಧ್ಯಾಹ್ನ 1:42 ರ ಸುಮಾರಿಗೆ ಸಮಸ್ಯೆ ಉತ್ತುಂಗಕ್ಕೇರಿತು, ಇದರ ಪರಿಣಾಮವಾಗಿ ಅಗತ್ಯ ಸಂವಹನ ಮತ್ತು ಇಂಟರ್ನೆಟ್ ಪ್ರವೇಶಕ್ಕಾಗಿ ನೆಟ್ವರ್ಕ್ ಅನ್ನು ಅವಲಂಬಿಸಿರುವ ಬಳಕೆದಾರರಿಗೆ ವ್ಯಾಪಕ ಅಡಚಣೆ ಉಂಟಾಯಿತು. ಜಿಯೋ ಸೇವೆಗಳೊಂದಿಗೆ ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿರುವ 2,437 ವ್ಯಕ್ತಿಗಳಿಂದ ದೂರುಗಳನ್ನು ದಾಖಲಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


