nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ

    April 21, 2026

    ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ

    April 21, 2026

    ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!

    April 21, 2026
    Facebook Twitter Instagram
    ಟ್ರೆಂಡಿಂಗ್
    • ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ
    • ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ
    • ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!
    • ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ
    • ಬಸವಣ್ಣನವರ ವಿಚಾರಧಾರೆ ಸಂವಿಧಾನದಲ್ಲಿ ಅಡಕ: ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ
    • ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ, ಮಾನವೀಯತೆಯ ಸಂದೇಶವಿದೆ: ಡಾ.ಜಿ.ಪರಮೇಶ್ವರ
    • ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್
    • ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ: ಮೇ 10 ಅರ್ಜಿ ಸಲ್ಲಿಸಲು ಕೊನೆಯ ದಿನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ”: 200 ಕೋಟಿ ರೂ. ಮೀಸಲಿಡಲು  ಒತ್ತಾಯ
    ರಾಜ್ಯ ಸುದ್ದಿ November 8, 2024

    “ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ”: 200 ಕೋಟಿ ರೂ. ಮೀಸಲಿಡಲು  ಒತ್ತಾಯ

    By adminNovember 8, 2024No Comments2 Mins Read
    jain

    ಬೆಂಗಳೂರು:  ಪುರಾತನವಾದ ಜೈನ ಧರ್ಮ ರಾಷ್ಟ್ರದ ಅಲ್ಪಸಂಖ್ಯಾತ ಧರ್ಮವಾಗಿದ್ದು ರಾಜ್ಯ ಸರ್ಕಾರ ಸರಿಯಾದ ಸವಲತ್ತುಗಳನ್ನು ನೀಡದೆ ಜೈನ ಧರ್ಮವನ್ನು ವಂಚಿಸುತ್ತಿದೆ. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಸುಮಾರು ವಾರ್ಷಿಕವಾಗಿ 200 ಕೋಟಿ ರೂ.ಗಳನ್ನು ಮೀಸಲಿಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀ ದಿಗಂಬರ್ ಜೈನ ಗ್ಲೋಬಲ್ ಮಹಾಸಭಾ ಅಧ್ಯಕ್ಷ ಮಹೇಶ್ ಜೈನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬೆಂಗಳೂರಿನ ಪ್ರೆಸ್ ಕ್ಲಬ್  ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿವರ್ಷ ಜೈನ ಧರ್ಮದ ಅಲ್ಪಸಂಖ್ಯಾತರಿಗೆ 200 ಕೋಟಿ ರೂಗಳನ್ನು ಮೀಸಲಿಡಬೇಕು, ಸರ್ಕಾರ ರಾಜ್ಯದಲ್ಲಿರುವ 414 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಎರಡು ವಿದ್ಯಾರ್ಥಿ ನಿಲಯಗಳು ಜೈನ ಸಮುದಾಯಕ್ಕೆ ಮೀಸಲಿಡಬೇಕು, ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ ಶೇಕಡ 50ರಷ್ಟು ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು ಎಂದರು.


    Provided by
    Provided by

    ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಜೈನ ಸಮದಾಯಕ್ಕೆ ಸಿಕ್ಕಿಲ್ಲ ಈವರೆಗೆ ನಿಗಮದಲ್ಲಿ ಜೈನ ನಿರ್ದೇಶಕರು ಆಯ್ಕೆಯಾಗಿಲ್ಲ, ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ನೀಡಬೇಕು ಹಾಗೂ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಬೇಕು, ನಿಗಮದ ಅಧ್ಯಕ್ಷ ಸ್ಥಾನ  ಎಲ್ಲಾ ಅಲ್ಪಸಂಖ್ಯಾತ ಜನಾಂಗಗಳಿಗೆ ಸಿಗುವಂತೆ ಕಾನೂನು ಜಾರಿಗೆ ತರಬೇಕು ಎಂದರು.

    ಈವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ಹಾಗೂ ಆಯೋಗದಲ್ಲಿ ಅಲ್ಪಸಂಖ್ಯಾತ ಸದಸ್ಯರ ಆಯ್ಕೆ ಆಗಿಲ್ಲ. ಆಯೋಗಕ್ಕೆ ಜೈನ ಸದಸ್ಯರ ನೇಮಕ ಹಾಗೂ ಆಯೋಗದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವಂತೆ ಕಾನೂನು ಜಾರಿಗೆ ತರಬೇಕು,  ಜೈನ  ಸಮಾಜಕ್ಕೆ ಅಲ್ಪಸಂಖ್ಯಾತರ ವಿಭಾಗದಲ್ಲಿ ಶೇಕಡ  5 ರಷ್ಟು ಮೀಸಲಾತಿ ಇದ್ದು, ಇದನ್ನು ಶೇಕಡ 20ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಪ್ರಾಚೀನ ಜೈನ ಬಸದಿಗಳು ಹಾಗೂ ಅದರ ಆಸ್ತಿ ಸಂರಕ್ಷಣೆಗೆ ಕಠೋರ ಕಾನೂನು ಜಾರಿಗೆ ತರಬೇಕು. ಎಲ್ಲಾ ಪ್ರಾಚೀನ ಬಸದಿಗಳು ಹಾಗೂ ಆಸ್ತಿಗಳನ್ನು ಸರ್ವೆ ಮಾಡಿ ಅತಿಕ್ರಮಣ ತೆರವಿಗೆ ಹಾಗೂ ಬಸದಿಗಳು ಮತ್ತು ಆಸ್ತಿಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಕಾನೂನು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು.

    ಕರ್ನಾಟಕ ರಾಜ್ಯ ಸರ್ಕಾರ  ಮುಸ್ಲಿಂ ಹಾಗೂ  ಕ್ರಿಶ್ಚಿಯರನ್ನ ಮಾತ್ರ ಅಲ್ಪಸಂಖ್ಯಾತರ ಧರ್ಮದವರು, ಅಲ್ಪಸಂಖ್ಯಾತರ  ವಿಭಾಗಕ್ಕೆ ಈ ಎರಡು ವರ್ಗಗಳು ಮಾತ್ರ ಸೀಮಿತವಾಗಿವೆ ಎಂದು ಜೈನರನ್ನು ಮೂಲೆ ಗುಂಪು ಮಾಡುತ್ತಾ ತಾರತಮ್ಯ ಮಾಡುತ್ತಿದೆ ಎಂದರು.

    ಅಲ್ಪಸಂಖ್ಯಾತ ವಿಭಾಗದ ಸಚಿವ ಪದವಿ, ಅಲ್ಪಸಂಖ್ಯಾತರ ಆಯೋಗಗಳ ಎಲ್ಲಾ ಮಹತ್ವದ ಹುದ್ದೆಗಳು,  ಪದವಿಗಳು ಕೇವಲ ಮುಸ್ಲಿಮರಿಗೆ ಸರ್ಕಾರ ನೀಡುತ್ತಿದೆ ,ಎಲ್ಲಾ ಅಲ್ಪಸಂಖ್ಯಾತರ ಕಚೇರಿಯಲ್ಲಿ ಅವರದ್ದೇ ಮುಸ್ಲಿಂ  ಜನರು ಇದ್ದಾರೆ. ಅಲ್ಪಸಂಖ್ಯಾತರ ನಿಗಮದಲ್ಲಿ   6  ಜನ ಮುಸ್ಲಿಮರು  1  ಕ್ರಿಶ್ಚಿಯನ್ ರನ್ನ ಆಯ್ಕೆ ಮಾಡಿಕೊಂಡಿದ್ದಾರೆ, ಆದರೆ ಜೈನರಿಗೆ ಯಾವುದೇ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ಆಯೋಗದಲ್ಲಿ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ವಿಭಾಗದ ಯೋಜನೆ ಗಳಲ್ಲಿ ಶೇಕಡ  5. ರಷ್ಟುಮೀಸಲಾತಿ ಮಾತ್ರ ನೀಡಿದ್ದಾರೆ ಎಂದರು.

    ಎಲ್ಲಾ ಯೋಜನೆಗಳಲ್ಲೂ ಒಂದೇ ಸಮುದಾಯದ ಫಲಾನುಭವಿಗಳು ಇದ್ದಾರೆ ,ಕ್ರಿಶ್ಚಿಯನ್ ಅಭಿವೃದ್ಧಿಗೆ ಸರ್ಕಾರ ಪ್ರತಿ ವರ್ಷ  200 ಕೋಟಿ ರೂ. ಗಳನ್ನ ಸರ್ಕಾರ ಕೊಡುತ್ತಿದೆ ಆದರೆ ಸರ್ಕಾರ ಜೈನರ ಬೇಡಿಕೆಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ,ಈ ಬೇಡಿಕೆಗಳನ್ನ ಈಡೇರಿಕೆಗೆ ಸರ್ಕಾರ ಒಂದು ತಿಂಗಳ ಗಡುವು ನೀಡುತ್ತಿದೆ. ಮುಂದಿನ ಒಂದು ತಿಂಗಳೊಳಗೆ ಬೇಡಿಕೆಗಳನ್ನ ಈಡೇರಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಅಥವಾ ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ  ವಿಧಾನಸಭಾ ಅಧಿವೇಶನದ ಸಮಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ವಿಭಾಗದ ದಿಗಂಬರ ಜೈನ್ ಗ್ಲೋಬಲ್ ಮಹಾಸಭಾ  ಸದಸ್ಯರಾದ ಡಾ.ರೇಣುಕಾ ರಾಂಕ್  ಜೈನ್,  ವಸಂತಿ ಚೋಪ್ರಾ ಜೈನ್ ,  ಸತೀಶ್ ಜೈನ್,  ಮಿಥುನ್ ಜೈನ್, ಸಾಮಾಜಿಕ ಹೋರಾಟಗಾರ  ಪಚ್ಚೆಶ್ ಜೈನ್ ಮಾತನಾಡಿದರು. ಮಾಳ ಹರ್ಷೇಂದ್ರ ಜೈನ್ ಉಪಸ್ಥಿತರಿದ್ದರು.

    ವರದಿ: ಜೆ. ರಂಗನಾಥ, ತುಮಕೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!

    April 20, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ

    April 21, 2026

    ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ಜಮೀನಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

    ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ

    April 21, 2026

    ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!

    April 21, 2026

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.