nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    • ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ
    • ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು
    • ತುಮಕೂರು ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಆಕ್ರೋಶ: ‘ನಾಯಕರಿಂದಲೇ ಚುನಾವಣೆ ಗೆಲ್ಲಿಸಿಕೊಳ್ಳಿ’ ಎಂದು ಕಾರ್ಯಕರ್ತರ ಸವಾಲು
    • ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ದಿನಾಂಕ ಬದಲಿಸಲು ಒತ್ತಾಯ
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಂಪ್ ಸೆಟ್ ಕಳ್ಳತನ ಆರೋಪ: ಸೊಸೈಟಿ ಚುನಾವಣೆಯಲ್ಲಿ ಸೋತವರಿಂದ ಹತಾಶ ಹೇಳಿಕೆ: ರಂಗಾಪುರ ಗ್ರಾ.ಪಂ. ಅಧ್ಯಕ್ಷ ಹೊಸಳ್ಳಿ ವಿಶ್ವನಾಥ್
    ತಿಪಟೂರು March 24, 2025

    ಪಂಪ್ ಸೆಟ್ ಕಳ್ಳತನ ಆರೋಪ: ಸೊಸೈಟಿ ಚುನಾವಣೆಯಲ್ಲಿ ಸೋತವರಿಂದ ಹತಾಶ ಹೇಳಿಕೆ: ರಂಗಾಪುರ ಗ್ರಾ.ಪಂ. ಅಧ್ಯಕ್ಷ ಹೊಸಳ್ಳಿ ವಿಶ್ವನಾಥ್

    By adminMarch 24, 2025No Comments2 Mins Read
    tipaturu

    ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ರಂಗಾಪುರ ಗ್ರಾಮ ಪಂಚಾಯಿತಿ ಮುಂದೆ ಕೆಲವರು ಪ್ರಚಾರ ಪಡೆಯಲೆಂದು ಕುಡಿಯುವ ನೀರಿನ ಮೋಟಾರ್ ಪಂಪ್ ಸೆಟ್ ಕಳ್ಳತನವಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದ್ದು, ಸತ್ಯಕ್ಕೆ ದೂರವಾದ ಸಂಗತಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊಸಳ್ಳಿ ವಿಶ್ವನಾಥ್ ತಿಳಿಸಿದರು.

    ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಇತ್ತೀಚೆಗೆ ನಮ್ಮ ರಂಗಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸಹಕರಿಸಿದೆ ಎಂದು, ಸೋತ ಅಭ್ಯರ್ಥಿಗಳು ಮತ್ತು ಅಭಿವೃದ್ಧಿ ಸಹಿಸದೆ ಪ್ರಚಾರ ಪಡೆಯಲು ಕೆಲ ನಮ್ಮ ಪಂಚಾಯಿತಿಯ ಸದಸ್ಯರು ಇಲ್ಲಸಲ್ಲದ ಆರೋಪ ಮಾಡಿ ನನ್ನ ಮತ್ತು ಪಿಡಿಓ ಮೇಲೆ ಕುಡಿಯುವ ನೀರಿನ ಪಂಪ್ ಸೆಟ್ ಕಳ್ಳತನವಾಗಿದೆ ಎಂಬ ಆರೋಪಿಸಿ, ಪ್ರತಿಭಟನೆಗೆ ಮುಂದಾಗಿರುವುದು ಇವರ ಮನಸ್ಥಿತಿ ಯಾವ ಮಟ್ಟಿಗೆ ಇದೆ ಎಂಬುದು ನೀವೇ ಅರ್ಥೈಸಿಕೊಳ್ಳಿ. ಅಭಿವೃದ್ಧಿಗೆ ಅಡ್ಡಗಾಲು ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹೊಸಹಳ್ಳಿ ಗ್ರಾಮದಲ್ಲಿರುವ ಸುಮಾರು ಎರಡು ವರ್ಷದಿಂದ ನಿಷ್ಕ್ರಿಯವಾಗಿದ್ದ ಕುಡಿಯುವ ನೀರಿನ ಕೊಳವೆ ಬಾವಿಯ   ಪಂಪ್ ಸೆಟ್ ನ್ನು ತೆಗೆದು, ಉಪಯೋಗಕ್ಕೆ ಬರುವ ಕೊಳವೆ ಬಾವಿಗೆ ಬಿಡಲೆಂದು ತಿಳಿಸಿದ್ದು, ಯಾವುದೇ ಕಾರಣಕ್ಕೂ ಅದು ಕಳ್ಳತನ, ಮಾರಾಟಕ್ಕೆ ಯತ್ನಿಸಿಲ್ಲ. ಇದರಲ್ಲಿ ಯಾವುದೇ ಅನುಮಾನ ಬಂದರೆ ಸಂಬಂಧಪಟ್ಟ ಪಿಡಿಓ ಮತ್ತು ತಾಲೂಕು ಪಂಚಾಯಿತಿ ಇಓ ರವರನ್ನು ಸಂಪರ್ಕಿಸಿ ಅವರೇ ಸ್ಪಷ್ಟವಾದ ಉತ್ತರ ನೀಡುತ್ತಾರೆ. ನನ್ನ ಹೆಸರಿಗೆ ಕಳಂಕ ತರಲೆಂದು, ಹೀಗೆ ಮುಂದುವರೆದರೆ ಅವರುಗಳ ಮೇಲೆ ಕಾನೂನು ಹೋರಾಟದ ಅಸ್ತ್ರ ಉಪಯೋಗಿಸುತ್ತೇನೆ ಎಂದು ತಿಳಿಸಿದರು.


    Provided by
    Provided by

    ಬಿಜೆಪಿ ಮುಖಂಡ ಸುಗುಣೇಂದ್ರ ಪಾಟೀಲ್ ಮಾತನಾಡಿ, ರಂಗಾಪುರ ಸೊಸೈಟಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹತಾಶೆಯಲ್ಲಿ ಈ ರೀತಿ ಹೇಳಿಕೆಗಳನ್ನು ನೀಡುತ್ತಾ, ಪ್ರತಿಭಟನೆಗೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಪಂಚಾಯ್ತಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಮತ್ತು ಅಧಿಕಾರ ಸಿಗಲಿಲ್ಲ ಎಂಬ  ದುರುದ್ದೇಶದಿಂದ ಕೂಡಿದ್ದು, ಪಂಚಾಯಿತಿಯಲ್ಲಿ ಯಾವುದೇ ಹಣ ದುರುಪಯೋಗ ವಾಗಿರುವುದಿಲ್ಲ. ಸತ್ಯಸತ್ಯತೆ ಅರಿತು ಮಾತನಾಡಿದರೆ ಒಳ್ಳೆಯ ಬೆಳವಣಿಗೆ.  ಇವರದ್ದು ಕೀಳುಮಟ್ಟದ ರಾಜಕೀಯ ಪ್ರಜ್ಞೆಯಾಗಿದ್ದು, ಯಾವುದೋ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡುತ್ತಿರುವುದು ಗ್ರಾಮ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಬಿಜೆಪಿ ಪಕ್ಷದ ಹೆಸರಿಗೆ ಕಳಂಕ ತರಲೆಂದು ಯತ್ನಿಸುತ್ತಿರುವ ಅವಿವೇಕಿಗಳಿಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

    ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಹರೀಶ್ ಮಾತನಾಡಿ, ನಮ್ಮ ಅವಧಿಯಲ್ಲಿ ಈ ರೀತಿ ಪ್ರತಿಭಟನೆ ಮತ್ತು ಸುಳ್ಳು ಆರೋಪಗಳು ನಡೆದಿರುವುದಿಲ್ಲ. ಆದರೆ ಈಗ ಅಧ್ಯಕ್ಷರಾಗಿ ವಿಶ್ವನಾಥ್ ಆಯ್ಕೆ ಆದ ಮೇಲೆ ಮತ್ತು ಪಿಡಿಓ ರವರ ಮೇಲೆ ಇಲ್ಲಸಲ್ಲದ ದುರುದ್ದೇಶದ ಹೇಳಿಕೆ ನೀಡುತ್ತಾ ಪ್ರತಿಭಟನೆ ಮುಂದಾಗಿರುವುದು ಸಮಂಜಸವಲ್ಲ. ಸೊಸೈಟಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ನಕಲಿ ಬಿಲ್ ಮಾಡಿ ಕೊಡುವಂತೆ ಒತ್ತಾಯಿಸಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಅಧ್ಯಕ್ಷರು ಒಪ್ಪದೇ ಇದ್ದಾಗ ಈ ಪ್ರತಿಭಟನೆ ಮಾಡಿರಬಹುದು ಎಂಬುದು  ಗೊತ್ತಾಗುತ್ತದೆ. ಇದು ದುರುದ್ದೇಶದ ಪ್ರತಿಭಟನೆ. ನಮ್ಮ ಪಂಚಾಯಿತಿಗೆ ತಾಲೂಕಿನಲ್ಲಿ ಒಳ್ಳೆ ಹೆಸರಿದ್ದು, ಆ ಹೆಸರಿಗೆ ಯಾರೇ ಆಗಲಿ ಕೆಟ್ಟ ಹೆಸರನ್ನು ತರಲು ಯತ್ನಿಸಿದರೆ, ನಾವುಗಳು ಕಾನೂನಿನ ರುಚಿ ತೋರಿಸುತ್ತೇವೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬಿಂದುಶ್ರೀ, ಮಾಜಿ ಅಧ್ಯಕ್ಷೆ ಮಮತ, ಮಾಜಿ ಉಪಾಧ್ಯಕ್ಷೆ ಇಂದ್ರಾಣಿ ಮತ್ತು  ಸದಸ್ಯ ಆನಂದ್ ಕುಮಾರ್,  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜು ಕೆರಗೋಡಿ, ನಿರ್ದೇಶಕರಾದ ವಿಜಯಕುಮಾರ್, ವಿಶ್ವನಾಥ್, ಪರಮಶಿವಯ್ಯ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಧ್ರುವ ಕುಮಾರ್, ಮುಖಂಡರಾದ ವಸಂತ ಕುಮಾರ್, ಆಲದಹಳ್ಳಿ ಹರೀಶ್ ಮತ್ತು ದಲಿತ ಮುಖಂಡ ಪುನೀತ್ ರಂಗಾಪುರ ಸೇರಿದಂತೆ ಸದಸ್ಯರು ಮತ್ತು ಮುಖಂಡರು ಹಾಜರಿದ್ದರು.

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ತಿಪಟೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಫೆ.12ರಂದು ಸ್ವಯಂ ಪ್ರೇರಿತ ಬಂದ್, ಮುಷ್ಕರ

    February 6, 2026

    ತಿಪಟೂರಿನಲ್ಲಿ ಬೃಹತ್ ಉದ್ಯೋಗ ಮೇಳ: 396 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ

    February 1, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ತಿಪಟೂರು: ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ…

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.