ಸಿರಾ: ಹೆತ್ತ ಮಗಳನ್ನು ಕೊಂದು ಹಾಕಿ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ತಂದೆಯೇ ದೂರು ನೀಡಿದ ಘಟನೆ ಸಿರಾ ತಾಲೂಕು ಬುಕ್ಕಾಪಟ್ಟಣ ಹೊಬಳಿ ನಿಂಬೆ ಮರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಘನಾ(17) ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಸಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ನಿಂಬೆಮರದಹಳ್ಳಿ ಗ್ರಾಮದ ತಿಮ್ಮರಾಯಪ್ಪ ರವರ ಪುತ್ರಿ ಮೇಘನಾ(17) ತಾಯಿಯ ಸಂಬಂಧಿ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ವಿಚಾರಕ್ಕೆ ಮೇಘನಾ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಹಾಗೂ ಈ ವಿಚಾರಕ್ಕಾಗಿ ಎರಡು ಮೂರು ಬಾರಿ ಜಗಳ ಆಗಿತ್ತು ಎನ್ನಲಾಗಿದೆ.
ಮಗಳು ಎಷ್ಟೇ ಹೇಳಿದರು ಕೇಳಲಿಲ್ಲ ಅನ್ನುವ ಕಾರಣಕ್ಕೆ ಏಪ್ರಿಲ್ 16 ರಂದು ಮನೆಯಲ್ಲಿ ಇದೇ ವಿಚಾರಕ್ಕೆ ಗಲಾಟೆಯೂ ನಡೆದಿದೆ. ಆಕ್ರೋಶದ ಬರದಲ್ಲಿ ತಿಮ್ಮರಾಯಪ್ಪ ಹುಣಿಸೇಹಣ್ಣನ್ನು ಆಯುವ ನೆಪದಲ್ಲಿ ಹೊಲಕ್ಕೆ ಕರೆದೊಯ್ದು ಮಗಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದನು. ಮೃತ ಶವವನ್ನು ಹಳ್ಳದಲ್ಲಿ ಹೂತು ಹಾಕಿ ತನಗೇನು ಗೊತ್ತಿಲ್ಲವೆಂಬಂತೆ ಇದ್ದನು.
ಮಗಳು ಕಾಣೆಯಾಗಿದ್ದಾಳೆ ಎಂದು ಮೇಘನಾ ತಾಯಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಶಾಕಿಂಗ್ ಕಾದಿತ್ತು. ತಂದೆ ಪೊಲೀಸರು ವಿಚಾರಣೆಗೆ ಕರೆದಾಗ ತಲೆಮರೆಸಿಕೊಂಡಿದ್ದ ಹಾಗೂ ಒಂದು ತಿಂಗಳ ಕಾಲ ಪೊಲೀಸರ ಕೈಗೆ ಸಿಗದೆ ತಿರುಪತಿ, ಧರ್ಮಸ್ಥಳ ಸೇರಿದಂತೆ ಹಲವು ಕಡೆ ಓಡಾಡಿಕೊಂಡಿದ್ದ.
ತನ್ನ ಪತಿ ಮನೆಗೆ ಬಾರದೆ ಮಿಸ್ಸಿಂಗ್ ಆಗಿರುವ ಬಗ್ಗೆ ಪತ್ನಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ತಂದೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಮಗಳ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿ ತಂದೆಯನ್ನು ಬಂಧಿಸಿರುವ ಪೊಲೀಸರು ಸಿರಾ ತಹಸಿಲ್ದಾರ್ ನೇತೃತ್ವದಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


