ತುಮಕೂರು: ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇ–ಪೌತಿ, 1 ರಿಂದ 5 ದಾಖಲೆಗಳ ನಿರ್ವಹಣೆ, ಅನುಬಂಧ, ಕಂದಾಯ ಗ್ರಾಮ, ಆರ್ ಟಿ ಸಿ ತಿದ್ದುಪಡಿ, ತಹಶೀಲ್ದಾರ್ ನ್ಯಾಯಾಲಯ ಪ್ರಕರಣಗಳ ಬಾಕಿ, ಮಾಜಿ ಸೈನಿಕರ ಭೂ ಮಂಜೂರು ಪ್ರಸ್ತಾವನೆಗಳು, ಅರಣ್ಯ ಭೂಮಿ ಸಂಬಂಧಿತ ಎಸ್ ಐಟಿ ವರದಿ, ಕೆರೆಗಳ ಮಾಪನ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕುರಿತು ಸಮಗ್ರವಾಗಿ ಪರಿಶೀಲಿಸಲಾಯಿತು. ನಿಗದಿತ ಅವಧಿಯೊಳಗೆ ಪ್ರಕರಣಗಳನ್ನು ವಿಲೇವಾರಿ ಮಾಡಿ, ಭೂ ದಾಖಲೆಗಳ ನಿಖರತೆಯನ್ನು ಖಚಿತ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಭೂ ಸುರಕ್ಷಾ ಯೋಜನೆ, ಸಿಸಿಎಂಎಸ್, ಸಾರ್ವಜನಿಕ ಹಾಗೂ ಧಾರ್ಮಿಕ ಸ್ಮಶಾನಗಳಿಗೆ ಜಮೀನು ಮಂಜೂರು, ಒತ್ತುವರಿ ತೆರವು, ಗ್ರಾಮೀಣ ಆಶ್ರಯ ಯೋಜನೆಯಡಿ ಜಮೀನು ಮಂಜೂರು, ರದ್ದತಿ ಹಾಗೂ ಪರ್ಯಾಯ ಜಮೀನು ಪ್ರಸ್ತಾವನೆಗಳ ಕುರಿತು ಚರ್ಚಿಸಲಾಯಿತು. ಸಾರ್ವಜನಿಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಸ್ತಾವನೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಮತ್ತು ಬಾಕಿ ಇರುವ ಪ್ರಕರಣಗಳ ಮೇಲೆ ವಿಶೇಷ ಗಮನಹರಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇದಲ್ಲದೆ ಕರ್ತವ್ಯ ಆಪ್ ಬಳಕೆ, ಸರ್ಕಾರಿ ಜಮೀನುಗಳ ಫ್ಲ್ಯಾಗಿಂಗ್, ಮಿಸ್ಸಿಂಗ್ ಕಮಿಟಿ ಪ್ರಕರಣಗಳು, ಪಿಟಿಸಿಎಲ್ ಪ್ರಕರಣಗಳು ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ನವೀಕೃತ ಮಾಹಿತಿಯನ್ನು ನಿರ್ವಹಿಸಿ, ಇಲಾಖಾ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ ಯೋಜನೆಗಳು ಮತ್ತು ಸೇವೆಗಳು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಗತಿ ಪರಿಶೀಲನ ಸಭೆಯಲ್ಲಿ ಸಂದೇಹಾಸ್ಪದ ಪಿಂಚಣಿದಾರರ ಪರಿಶೀಲನಾ ಕಾರ್ಯವನ್ನು ಇನ್ನು ಮುಂದೆ ಪ್ರತಿ ನಿತ್ಯ ಈ ಬಗ್ಗೆ ವೈಯುಕ್ತಿಕವಾಗಿ ಗಮನಹರಿಸಿ ಪರಿಶೀಲಿಸಲಾಗುವುದೆಂದು ಹಾಗೂ ತುರ್ತಾಗಿ ಶೇ.100ರಷ್ಟು ಪ್ರಗತಿ ಸಾಧಿಸುವಂತೆ ಸೂಚಿಸುತ್ತಾರೆ. ಆದ್ದರಿಂದ ಎಲ್ಲಾ ತಾಲ್ಲೂಕುಗಳು ತುರ್ತಾಗಿ ಬಾಕಿ ಸಂದೇಹಾಸ್ಪದ ಪಿಂಚಣಿ ದಾರರ ಭೌತಿಕ ಪರಿಶೀಲನೆಯನ್ನು ಪೂರ್ಣಗೊಳಿಸಿ ಶೇಕಡಾ 100% ರಷ್ಟು ಪ್ರಗತಿ ಸಾಧಿಸುವಂತೆ ಎಲ್ಲಾ ವಿ ಎ, ಆರ್ ಐ, ಉಪ ತಹಶೀಲ್ದಾರ್, ಗ್ರೇಡ್ 2 ತಹಶೀಲ್ದಾರ್ ಗಳಿಗೆ ತಿಳಿಸಲಾಗಿದೆ.
ಜಿಲ್ಲಾ ಟಾಸ್ಕ್ ಪೋರ್ಸ್ (ಗಣಿ) ಸಮಿತಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾ ಮರಳು ಸಮಿತಿ ಸಭೆ , ಜಿಲ್ಲಾಧಿಕಾರಿಯವರ ಕಾರ್ಯಾಲಯದ ಸಭಾಂಗಣದಲ್ಲಿ ನಡೆಸಿ ನಿರ್ದೇಶನ ನೀಡಲಾಯಿತು. ಗೈರು ವಿಲೇ ಕಡತ ಸಮಿತಿ ಸಭೆ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




