ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ದಾಸಾಲುಕುಂಟೆ ಗ್ರಾಮದ ಕೆರೆ ಹಿಂಭಾಗದಲ್ಲಿರುವ ತಮ್ಮ ಜಮೀನಿನಲ್ಲಿನ ಕರಂಟ್ ರೂಮ್ ಬಳಿ ಇದ್ದಾಗ ಯಾರೋ ಅಪರಿಚಿತ ಅಸಾಮಿಗಳು ವೃದ್ದೆ ರತ್ನಮ್ಮ ಕೋಂ ಮುದ್ದಬಸಪ್ಪ (72 ವರ್ಷ) ರವರ ಕೈ–ಕಾಲುಗಳನ್ನು ಕಟ್ಟಿ ಹಾಕಿ, ಬಾಯಿಗೆ ಬಟ್ಟೆಯನ್ನು ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿ. ಮೃತಳ ಮೈ–ಮೇಲಿದ್ದ 55 ಗ್ರಾಂ ಚಿನ್ನದ ಗುಂಡುಗಳು, ಒಂದು ಜೊತೆ ಚಿನ್ನದ ಓಲೆ ಮತ್ತು ಮೂಗುನತ್ತನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊ.ನಂ.135/2026 ಕಲಂ.103(1), 309(4) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಆರೋಪಿಗಳು ಮತ್ತು ಮಾಲು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಅವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಹಾಗೂ ಪುರುಷೋತ್ತಮ್ ಎಂ.ಎಲ್.ರವರ ನೇತೃತ್ವದಲ್ಲಿ ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರುಗಳಾದ ಮಂಜುನಾಥ್ ರವರ ಮಾರ್ಗಸೂಚನೆ ಮೇರೆಗೆ ಕೊರಟಗೆರೆ ವೃತ್ತ ನಿರೀಕ್ಷಕರಾದ ಪುರುಷೋತ್ತಮ್ ಜಿ. ಮತ್ತು ಮಧುಗಿರಿ ವೃತ್ತದ ನಿರೀಕ್ಷಕರಾದ ಹನುಮಂತರಾಯಪ್ಪ ಹಾಗೂ ಪಿ.ಎಸ್.ಐ ಗಳಾದ ತೀರ್ಥೇಶ್, ಅಭಿಷೇಕ್, ಸುನೀಲ್ ಐರೋಡಗಿ, ರವೀಂದ್ರ, ಮುತ್ತುರಾಜು, ಮತ್ತು ಸಿಬ್ಬಂದಿಗಳಾದ ರಾಮಕೃಷ್ಣಯ್ಯ, ದೊಡ್ಡಲಿಂಗಯ್ಯ, ಗಣೇಶ್, ರಂಜಿತಾ, ನಂದ, ರಂಗನಾಥ, ಶಶಿಕುಮಾರ್, ಪುಟ್ಟಸ್ವಾಮಿ, ನವೀನ್ ಕುಮಾರ್, ಕಾಂತರಾಜು, ಮಧುಕುಮಾರ್. ರಂಗರಾಜು, ರಮೇಶ, ರವಿ, ಮೋಹನ್. ವಿಜಯ್ ಕುಮಾರ್, ಸಿದ್ದಲಿಂಗಪ್ಪ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ರವರುಗಳನ್ನು ಒಳಗೊಂಡ ತಂಡವು ಕಾರ್ಯ ಪ್ರವೃತ್ತರಾಗಿ ಕೇರಳ ರಾಜ್ಯದಲ್ಲಿ ತಲೆಮರೆಯಿಸಿಕೊಂಡಿದ್ದ ಈ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ.
ಆರೋಪಿತರ ಹೆಸರು ಮತ್ತು ವಿಳಾಸ:
1) ಗಂಗಾಧರ್ ಎಂ ಬಿನ್ ಲೇಟ್ ಮುದ್ದಯ್ಯ, 24 ವರ್ಷ, ಬಟ್ಟೆ ವ್ಯಾಪಾರ, ಬೆಟ್ಟದ ಹೊಸಹಳ್ಳಿ, ಸೊಂಪುರ ಹೋಬಳಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾ. ಜಿಲ್ಲೆ.
2) ಸೂರ್ಯ ಬಿನ್ ಲೇಟ್ ಉದಯ್ ಕುಮಾರ್, 25 ವರ್ಷ, ಅಡಿಗೆ ಕ್ಯಾಂಟರಿಂಗ್ ಕೆಲಸ, ಸ್ವಂತ ವಿಳಾಸ: ಮರಾಠಿ ಪಾಳ್ಯ, ಸಿ.ನಂದಿಹಳ್ಳಿ, ಚೇಳೂರು ಹೋಬಳಿ, ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ.
ಆರೋಪಿತರ ಕಡೆಯಿಂದ ಕೃತ್ಯಕ್ಕೆ ಬಳಸಿದ್ದ ಕೆ.ಟಿ.ಎಂ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಸದರಿ ಪತ್ತೆ ತಂಡವನ್ನು ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಐಪಿಎಸ್ ರವರು ಪ್ರಶಂಸಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




