nammatumakuru

    Subscribe to Updates

    Get the latest creative news from FooBar about art, design and business.

    What's Hot

    ದುರ್ಗದಕೆರೆ, ನಾಗತಿಕೆರೆಗೆ ಎತ್ತಿನ ಹೊಳೆ ನೀರು: ಶಾಸಕ ಸಿ.ಬಿ.ಸುರೇಶ್ ಬಾಬು

    September 21, 2026

    ಅಧಿಕಾರಿಗಳು ಉಡಾಫೆ ಧೋರಣೆ ಬಿಡಿ: ಶಾಸಕ ಎಸ್.ಆರ್.ಶ್ರೀನಿವಾಸ್ ತರಾಟೆ

    September 21, 2026

    ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 21, 2026
    Facebook Twitter Instagram
    ಟ್ರೆಂಡಿಂಗ್
    • ದುರ್ಗದಕೆರೆ, ನಾಗತಿಕೆರೆಗೆ ಎತ್ತಿನ ಹೊಳೆ ನೀರು: ಶಾಸಕ ಸಿ.ಬಿ.ಸುರೇಶ್ ಬಾಬು
    • ಅಧಿಕಾರಿಗಳು ಉಡಾಫೆ ಧೋರಣೆ ಬಿಡಿ: ಶಾಸಕ ಎಸ್.ಆರ್.ಶ್ರೀನಿವಾಸ್ ತರಾಟೆ
    • ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ಅಹಿಂದ ವರ್ಗ ಒಂದಾಗದಿದ್ದರೆ ನಾಶ: ಎಸ್.ಟಿ ಶ್ರೀನಿವಾಸ್ ಕಳವಳ
    • ವಿವಿಧ ಸಾಲ ಸೌಲಭ್ಯ: ಆರ್ಯವೈಶ್ಯ ಸಮುದಾಯದವರಿಂದ ಅರ್ಜಿ ಆಹ್ವಾನ
    • ಉಪ್ಪಾರ ಜನಾಂಗದವರಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
    • ತುರುವೇಕೆರೆ: ಸಮುದಾಯ ಸಂಘಟಕ ಹುದ್ದೆಗೆ ಅರ್ಜಿ ಆಹ್ವಾನ
    • ಬೀದರ್: ವಿವಿಧೆಡೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ; ವಿವಿಧ ಕಾಮಗಾರಿಗಳ ಪರಿಶೀಲನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
    ತುಮಕೂರು July 14, 2026

    ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್

    By adminJuly 14, 2026No Comments2 Mins Read

    ತುಮಕೂರು: ವಿಶ್ವವಿದ್ಯಾನಿಲಯಗಳು ಸಂಖ್ಯೆಯಲ್ಲಿ ವಿಸ್ತರಣೆಯಾಗದೆ ಗುಣಮಟ್ಟದಲ್ಲಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ಯುಜಿಸಿ ಗಮನಹರಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.

    ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್‌ನ ಬಿದರಕಟ್ಟೆಯಲ್ಲಿ ಸೋಮವಾರ ನಡೆದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ದೇಶದಲ್ಲಿ 1200 ವಿಶ್ವವಿದ್ಯಾನಿಲಯಗಳು ಇದ್ದು, 43,000 ಕಾಲೇಜುಗಳು ಹಾಗೂ 43 ದಶಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ದೇಶದ ಬಹುದೊಡ್ಡ ಪರಿವರ್ತನೆ. ಆದರೆ ಜಾಗತಿಕವಾಗಿ ಉದ್ಯಮ ಮತ್ತು ಶಿಕ್ಷಣದ ನಡುವೆ ಅಂತರವಿದ್ದು, ತಾವು ಕೊಡುವ ಶಿಕ್ಷಣ ಉದ್ಯಮಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದಕ್ಕಾಗಿ ಬೋಧಕರ ಕೊರತೆ ನೀಗಿಸಬೇಕು ಹಾಗೂ ಪ್ರಾದೇಶಿಕವಾಗಿ ಸಮಾನಾಂತರ ಬೋಧನೆಗೆ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ ಎಂದು ತಿಳಿಸಿದರು.

    ಭಾರತದ ಇತಿಹಾಸದಲ್ಲಿ ಮೊದಲಿನಿಂದಲೂ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದ ಉಪಮುಖ್ಯಮಂತ್ರಿ ಡಾ: ಪರಮೇಶ್ವರ್ ಅವರು, ವಿಶ್ವದ ವಿವಿಧೆಡೆಯಿಂದ ತಕ್ಷಶಿಲಾ ಹಾಗೂ ನಳಂದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬರುತ್ತಿದ್ದರು. ಅಂದಿನಿಂದಲೂ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿರುವುದು ಇತಿಹಾಸದ ಮೂಲಕ ತಿಳಿಯುತ್ತದೆ. ಬ್ರಿಟಿಷರ ಆಡಳಿತದಲ್ಲಿ 1857ರಲ್ಲಿ ಮೊದಲ ಬಾರಿಗೆ ಕಲ್ಕತ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ನಂತರ ಮದ್ರಾಸ್, ಮೈಸೂರು ವಿಶ್ವವಿದ್ಯಾಲಯಗಳು ಆರಂಭವಾದವು. 2004ರಲ್ಲಿ ತುಮಕೂರು ವಿವಿಯನ್ನು ಆರಂಭಿಸಲು ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರು ಅನುಮತಿಕೊಟ್ಟಿದ್ದು, ಈ ಮಟ್ಟಕ್ಕೆ ವಿವಿ ಬೆಳೆಯಲು ಕಾರಣವಾಗಿದೆ ಎಂದು ಸ್ಮರಿಸಿದರು.

    ಜಗತ್ತಿನ ಮೂಲೆ ಮೂಲೆಯಲ್ಲಿ ಸಾಧಕ ಭಾರತೀಯರು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಇಂಜಿನಿಯರ್, ಡಾಕ್ಟರ್‌ಗಳು, ಪ್ರೊಫೆಸರ್‌ಗಳು ಭಾರತೀಯರಾಗಿರುತ್ತಾರೆ. ಅಲ್ಲದೆ, ವಿಶ್ವದ 500ಕ್ಕೂ ಹೆಚ್ಚು ಅತಿ ದೊಡ್ಡ ಕಂಪನಿಗಳಲ್ಲಿ ಭಾರತೀಯರದೇ ಪಾರಮ್ಯ. ಇದು ಭಾರತದ ಶೈಕ್ಷಣಿಕ ವ್ಯವಸ್ಥೆಯನ್ನು ಸೂಚಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಬೆಂಗಳೂರು, ಮೈಸೂರು ನಂತರ ತುಮಕೂರಿನಲ್ಲಿ ಅತಿ ಹೆಚ್ಚು ವಿದ್ಯಾ ಸಂಸ್ಥೆಗಳಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಸಾಲಿಗೆ ತುಮಕೂರು ಜಿಲ್ಲೆ ನಿಲ್ಲಲಿದೆ ಎಂದು ಡಿಸಿಎಂ ಹೇಳಿದರು.

    ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ದೇಶದ ಸಾಕ್ಷರತೆ ಪ್ರಮಾಣ ಶೇ. 12 ರಷ್ಟಿತ್ತು. ಹಿಂದೆ ಶೋಷಿತ ಸಮುದಾಯಗಳವರು ಅಕ್ಷರಾಭ್ಯಾಸಕ್ಕೆ ಸಾಕಷ್ಟು ತೊಡಕಿತ್ತು. ಸ್ವಾತಂತ್ರ್ಯ ನಂತರ ನೆಹರು ಅವರು ಪಂಚವಾರ್ಷಿಕ ಯೋಜನೆಯಡಿ ಶಿಕ್ಷಣಕ್ಕೆ ಕೊಟ್ಟ ಆದ್ಯತೆಯಿಂದಾಗಿ, ಶೇ 80ರಷ್ಟು ಭಾರತೀಯರು ಸಾಕ್ಷರರಾಗಲು ಸಾಧ್ಯವಾಗಿದೆ. ಎನ್‌ ಇಪಿ ಗೊಂದಲ ನಡುವೆ ಯೂ ಗುಣಮಟ್ಟದ ಶಿಕ್ಷಣ ಸಂಶೋಧನೆ ಗೆ ರಾಜ್ಯದ ವಿವಿಗಳು ಒತ್ತು ಕೊಡುತ್ತಾ ಬಂದಿವೆ. ತುಮಕೂರು ವಿವಿಯ ಅಧ್ಯಾಪಕರು, ಸಂಶೋಧಕರ ಪ್ರಬಂಧಗಳು ಅಂತರಾಷ್ಟ್ರೀಯ ಮಟ್ಟದಲ್ಲಿ 151ಕ್ಕೂ ಹೆಚ್ಚು ಪ್ರಕಟಗೊಂಡಿರುವುದು ಅಕಾಡೆಮಿಕ್ ವಲಯದಲ್ಲಿ ಮಹತ್ವದ ಸಾಧನೆಯೆನಿಸಿದೆ.

    — ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 21, 2026

    ಅಹಿಂದ ವರ್ಗ ಒಂದಾಗದಿದ್ದರೆ ನಾಶ: ಎಸ್.ಟಿ ಶ್ರೀನಿವಾಸ್ ಕಳವಳ

    September 21, 2026

    ವಿವಿಧ ಸಾಲ ಸೌಲಭ್ಯ: ಆರ್ಯವೈಶ್ಯ ಸಮುದಾಯದವರಿಂದ ಅರ್ಜಿ ಆಹ್ವಾನ

    September 21, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ದುರ್ಗದಕೆರೆ, ನಾಗತಿಕೆರೆಗೆ ಎತ್ತಿನ ಹೊಳೆ ನೀರು: ಶಾಸಕ ಸಿ.ಬಿ.ಸುರೇಶ್ ಬಾಬು

    September 21, 2026

    ಚಿಕ್ಕನಾಯಕನಹಳ್ಳಿ: ಹೊನ್ನೇಬಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಮುಖಂಡರ ಮನವಿಗೆ ಸ್ಪಂದಿಸಿ ತಾಲೂಕಿನ ಕಸಬಾ ಹೋಬಳಿಯ ದುರ್ಗದಕೆರೆ ಹಾಗೂ…

    ಅಧಿಕಾರಿಗಳು ಉಡಾಫೆ ಧೋರಣೆ ಬಿಡಿ: ಶಾಸಕ ಎಸ್.ಆರ್.ಶ್ರೀನಿವಾಸ್ ತರಾಟೆ

    September 21, 2026

    ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 21, 2026

    ಅಹಿಂದ ವರ್ಗ ಒಂದಾಗದಿದ್ದರೆ ನಾಶ: ಎಸ್.ಟಿ ಶ್ರೀನಿವಾಸ್ ಕಳವಳ

    September 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.