ತುಮಕೂರು: ತುರುವೇಕೆರೆ ತಾಲೂಕಿನ ದಂಡಿನಶಿವಾರ ಹೋಬಳಿ ಕೊಂಡಜ್ಜಿಯಲ್ಲಿ ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’ ಶೀರ್ಷಿಕೆಯಡಿಯಲ್ಲಿ ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಅಂತರಂಗ ಸಂಸ್ಕೃತಿ ಚಿಂತನ ಪ್ರತಿಷ್ಠಾನ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಅಂದು ಸಂಜೆ 5 ಗಂಟೆಗೆ ಆರಂಭವಾಗುವ ಕಾರ್ಯಕ್ರಮದ ಉದ್ಘಾಟನೆಯನ್ನು ಹುಬ್ಬಳ್ಳಿ ಸೌತ್ವೆಸ್ಟರ್ನ್ ರೈಲ್ವೆ ಸದಸ್ಯರಾದ ವಿಶ್ವನಾಥ್ ಕೆ.ಎಸ್. ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಈಶ್ವರ್ ಕು.ಮಿರ್ಜಿ, ರೋಟರಿ ಅಧ್ಯಕ್ಷರಾದ ಸಾ.ಶಿ.ದೇವರಾಜ್, ಜಾನಪದ ವಿದ್ವಾಂಸ ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಚೌದ್ರಿ ನಾಗೇಶ್ ಉಪಸ್ಥಿತರಿರುವರು.
ವಿನಿತಾ ಹಿರೇಮಠ, ಅಶ್ವಿನಿ ಎಸ್.ಎನ್., ವೈ.ಎನ್.ಶಿವಕುಮಾರ್, ಕಾವ್ಯ ಎಸ್. ಆರ್. ಮತ್ತು ತಂಡ ಜಾನಪದ ಗಾಯನ ನಡೆಸಿಕೊಟ್ಟರೆ, ಆದರ್ಶ ಮತ್ತು ತಂಡ ಚಿಟ್ಟಿಮೇಳ, ಭೈರವೇಶ್ವರ ಜಾನಪದ ಕಲಾತಂಡ, ಸಣ್ಣಮ್ಮ ಮತ್ತು ಮಾಯಮ್ಮ ತಂಡ ಸೋಬಾನೆ ಪದ, ಪುರುಷೋತ್ತಮ್, ನಂಜಪ್ಪ ಮತ್ತು ಸಂತೋಷ್ ಅವರ ತಂಡ ಸೋಮನ ಕುಣಿತ, ಕಹಳೆ ಕಾರ್ಯಕ್ರಮಗಳನ್ನು ನಡೆಸಿಕೊಡುವರು.
ಕೊಂಡಜ್ಜಿ ಗ್ರಾಮದ ಜಾನಪದ ಕಲಾವಿದರು ಈ ಸಂದರ್ಭದಲ್ಲಿ ಜಾನಪದ ಗಾಯನ ಮತ್ತು ಕಲಾ ಪ್ರದರ್ಶನ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಕೆಂಕೆರೆ ಮಲ್ಲಿಕಾರ್ಜುನ್ ಮತ್ತಿತರರು ಭಾಗವಹಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


